Advertisement

ಬೇಡ ಜಂಗಮ ವೀರಶೈವರು ಪರಿಶಿಷ್ಟರಲ್ಲ: ಎಸ್ಸಿ.ಎಸ್ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ

10:12 PM Aug 01, 2022 | Team Udayavani |

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಗುರು ಸ್ಥಾನದಲ್ಲಿರುವ ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ. ಅವರಿಗೆ ಎಸ್ಸಿ ಸರ್ಟಿಫಿಕೇಟ್ ಅನ್ನು ರಾಜ್ಯ ಸರ್ಕಾರ ನೀಡಬಾರದು ಎಂದು ಅನುಸೂಚಿತ ಜಾತಿ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್ಸಿ.ಎಸ್ಟಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು, ಸಮಾಜಿಕವಾಗಿ ಮೇಲುಸ್ತರದಲ್ಲಿರುವ ಮೇಲ್ವರ್ಗಗಳು ನಮ್ಮನ್ನು ಎಸ್.ಸಿ.ಎಸ್.ಟಿಗೆ ಸೇರಿಸಿ ಎಂದು ಒತ್ತಡ ಹಾಕುವುದು ಪ್ರಬಲರು ದುರ್ಬಲರ ಮೇಲೆ ನಡೆಸುವ ದೌರ್ಜನ್ಯವಷ್ಟೆ ಅಲ್ಲ . ಎಸ್ಸಿ.ಎಸ್ಟಿ ಗಳ ಮೇಲೆ ಎಸಗುವ ಹೊಸ ಮಾದರಿಯ ರೂಪಾಂತರಿ ಅಟ್ರಾಸಿಟಿ ಪ್ರಕರಣವಾಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯ ಅನಾದಿ ಕಾಲದಿಂದಲೂ ಸಮಾಜಕ್ಕೆ ನ್ಯಾಯ ನೀತಿ ಧರ್ಮ ಬೋದಿಸುವುದರ ಜತೆಗೆ ದೀನದಲಿತರ ಮತ್ತು ಬಡವರ ಮಕ್ಕಳಿಗೆ ಉಚಿತ ಅನ್ನ ದಾಸೋಹ ಮತ್ತು ವಿದ್ಯಾಧಾನ ಮಾಡುತ್ತಿರುವ ಸಮುದಾಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಸಮುದಾಯದಲ್ಲಿ ಮೇಲಿನ ಗುರು ಸ್ಥಾನದಲ್ಲಿರುವ ಜಂಗಮರು ಎನ್ನುವ ಉಪ ಜಾತಿಯ ಕೇಲವು ವ್ಯಕ್ತಿಗಳು ಎಸ್. ಸಿ ಬೇಡ ಜಂಗಮ ಎಂಬ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಆ ಜನರ ಅನ್ನ ಕಸಿದುಕೊಳ್ಳುತ್ತಿರುವು ಮಹಾಪಾಪವಾಗಿದೆ ಎಂದರು.

ವೀರಶೈವ ಲಿಂಗಾಯತ ಸಮುದಾಯದಲ್ಲಿ ಗುರುಗಳ ಸ್ಥಾದಲ್ಲಿರುವ ಜಂಗಮರು ಎಸ್.ಸಿ.ಗಳಾಗಲು ಸಾಧ್ಯವೇ. ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿಗಳ‌ ಪಟ್ಟಿಯಲ್ಲಿನ 101 ಜಾತಿಗಳ 19ನೇ ಕ್ರಮ ಸಂಖ್ಯೆಯಲ್ಲಿ ಬೇಡ ಜಂಗಮ ಅಥವಾ ಬುಡ್ಗ ಜಂಗಮ ಅಥವಾ ಮೂಲ ಜಂಗಮ ಎಂಬ ಹೆಸರಿನ ಜಾತಿಯಿದೆ. ಈ ಜಾತಿಯನ್ನು ಎಸ್ಸಿ ಜಾತಿ ಪಟ್ಟಿಗೆ ಸೇರಿಸುವ ಮುನ್ನ ಕುಲ ಶಾಸ್ತ್ರ, ಸಮಾಜಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗಿದೆ. ಬೇಡ ಜಂಗಮರು ಆಂಧ್ರ ಪ್ರದೇಶ ಮೂಲದವರು ಇವರ ಮಾತೃ ಭಾಷೆ ತೆಲುಗು ಆಗಿದ್ದು. ಮಾಂಸಹಾರಿಗಳು, ಹೊಟ್ಟೆ ಪಾಡಿಗಾಗಿ ವೇಷಧಾರಿಗಳಾಗಿ ಊರೂರು ಸುತ್ತಿ ಭಿಕ್ಷೆ ಬೇಡುವುದು ಇವರ ಕಾಯಕವಾಗಿದೆ. ಇವರಲ್ಲಿ ವಿದ್ಯಾವಂತರ ಸಂಖ್ಯೆ ಶೇ 1 ಆಗಿದೆ. ಈ ಜನಾಂಗದ ಗುಣ ಲಕ್ಷಣಗಳಲ್ಲಿ ಶೇ ಒಂದು ಭಾಗನೂ ಹೊಂದಿರದ ವೀರಶೈವ ಲಿಂಗಾಯತ ಜನಾಂಗದವರು ಜಂಗಮ್ ಎಂಬ ಪದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next