ಹುಮನಾಬಾದ್: ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಕಳೆದ 11 ದಿನಗಳಿಂದ ನಿರಂತರ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಸರ್ಕಾರ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಕಾರಣ ಜು.23ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ, ಧರಣಿ ನಡೆಸಲು ಸಮಾಜ ಮುಖಂಡರು ತಿರ್ಮಾನಿಸಿದ್ದಾರೆ ಎಂದು ಬೀದರ್ ಜಿಲ್ಲಾ ಮಠಾಧೀಶರ ಒಕ್ಕೂಟದ ಮುಖಂಡಾದ ಜಯಶಾಂತ ಶಿವಾಚಾರ್ಯರು ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಎದುರಿಗೆ ನಡೆಯುತ್ತಿರುವ 11ನೇ ದಿನದ ಸತ್ಯಾಗ್ರಹದಲ್ಲಿ ಶನಿವಾರ ಭಾಗವಿಸಿದ ಶ್ರೀಗಳು, ಬೇಡ ಜಂಗಮ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾತಿ ನೀಡುವಂತೆ ಆಗ್ರಹಿಸಲಾಗಿದೆ. ಕೂಡಲೇ ಸರಕಾರ ಬೇಡ ಜಂಗಮರ ಬೇಡಿಕೆಗಳು ಈಡೇರಿಸುವತ್ತ ಗಮನಹರಿಸಬೇಕು. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೂ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೇಡ ಜಂಗಮ ರಾಜ್ಯ ಪದಾಧಿಕಾರಿ ಬಸವರಾಜ ಸ್ವಾಮಿ ಮಾತನಾಡಿ, ರಾಜ್ಯದ ಎಲ್ಲಾ ಕಡೆಗಳಲ್ಲಿ ಇಂದಿಗೂ ಕೂಡ ಧರಣಿ, ಪ್ರತಿಭಟನೆಗಳು ನಡೆಯುತ್ತಿವೆ. ಬೇಡ ಜಂಗಮರ ಬೇಡಿಕೆಗಳು ಸರ್ಕಾರ ಸ್ಪಂದಿಸುವ ನಿರೀಕ್ಷೆಗಳು ಇವೆ. ಆದರೆ ನಿಗದಿತ ಅವಧಿಯಲ್ಲಿ ಸ್ಪಂದಿಸದಿರುವುದು ಬೇಸರ ಉಂಟುಮಾಡಿದೆ. ನಮ್ಮ ಹಕ್ಕಿಗಾಗಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಪ್ರತಿಯೊಬ್ಬ ಜಂಗಮ ಮನೆಯಲ್ಲಿನ ಒಬ್ಬ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯರು, ಹಳ್ಳಿಖೇಡ(ಬಿ) ಚಿಕ್ಕಮಠದ ಪಂಡಿತಾರಾಧ್ಯ ಶಿವಾಚಾರ್ಯರು, ಹುಡಗಿ ಚನ್ನಮಲ್ಲ ಶಿವಾಚಾರ್ಯರು, ಗಡಿಗೌಡಗಾಂವ್ ಶಾಂತವೀರ ಶಿವಾಚಾರ್ಯರು ಮಾತನಾಡಿ ಸಮುದಾಯದ ಜನರು ಏಕತೆ ಪ್ರದರ್ಶಿಸಬೇಕು ಎಂದರು.
ರವಿ ಸ್ವಾಮಿ ನಿರ್ಣಾ, ಸಿದ್ದು ಚಕ್ಕಪಳ್ಳಿ, ಸುಭಾಷ್ ಕನ್ನೆಡೆ, ದಯಾನಂದ ಸ್ವಾಮಿ, ರಾಜು ಡಿಲೇಕ್ಸ್, ಶಿವಕಾಂತ ಸ್ವಾಮಿ ಉಮರ್ಗಿ, ಶಿವಕುಮಾರ ಸ್ವಾಮಿ ನಿಟ್ಟೂರ್, ಮಲ್ಲಿಕಾರ್ಜುನ ಹಿರೇಮಠ, ಶಾಂತವೀರ ಸ್ವಾಮಿ, ಸುನೀಲ ಪತ್ರಿ,ಶಿವಕಾಂತ ಸ್ವಾಮಿ ಸೇರಿದಂತೆ ನೂರಾರು ಜನರು ಇದ್ದರು.