ಮಂಡ್ಯ: ಜಿಲ್ಲೆಯಲ್ಲೂ ಕೊರೊನಾ ಹಿನ್ನೆಲೆ ಪ್ರತಿನಿತ್ಯನಾಲ್ಕೆ çದು ಮಂದಿ ಸಾವನ್ನಪ್ಪುತ್ತಿದ್ದಾರೆ. ಬೆಡ್ ಸಿಗದೆಜನರು ಪರದಾಡುತ್ತಿದ್ದಾರೆ. ಸರ್ಕಾರದ ಆದೇಶದಂತೆಯಾವುದೂ ಪಾಲನೆಯಾಗುತ್ತಿಲ್ಲ. ಬೆಂಗಳೂರಿನಂತೆಮಂಡ್ಯದಲ್ಲಿಯೂ ಬೆಡ್ ಮಾಫಿಯಾ ನಡೆಯುತ್ತಿದೆಎಂದು ಕಾಂಗ್ರೆಸ್ ಯುವ ಮುಖಂಡ ರವಿಕುಮಾರ್‌ಗಣಿಗ ಆರೋಪಿಸಿದರು.
ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಹಾಸಿಗೆ ಇರುವ ಬಗ್ಗೆ ಜನಸಾಮಾನ್ಯರಿಗೆ ಇಲ್ಲದಂತಾಗಿದೆ. ಸರ್ಕಾರದ ಪ್ರಕಾರವೇ ಕೋವಿಡ್‌ನ ಜನರಲ್‌ವಾರ್ಡ್‌ನಲ್ಲಿ 843 ಹಾಸಿಗೆ ಇದರಲ್ಲಿ ಆಕ್ಸಿಜನ್‌ಹೊಂದಿರುವ ಹಾಸಿಗೆ 349, ಐಸಿಯು ಹಾಸಿಗೆ 30ಹಾಗೂ ಐಸಿಯು ವೆಂಟಿಲೇಟರ್ ಹಾಸಿಗೆ 28 ಇವೆ. ಖಾಸಗಿ ಆಸ್ಪತ್ರೆಯಲ್ಲಿ 669 ಹಾಸಿಗೆಗಳು, 162ಆಕ್ಸಿಜನ್ ಹಾಸಿಗೆ, 34 ಐಸಿಯು, 20 ವೆಂಟಿಲೇಟರ್‌ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಯಾವ ರೋಗಿಯನ್ನುದಾಖಲು ಮಾಡಿಕೊಳ್ಳುತ್ತಿಲ್ಲ ಎಷ್ಟು ಬೆಡ್‌ಗಳು ಲಭ್ಯವಿದೆ ಎಂದು ಹೇಳುತ್ತಿಲ್ಲ. ಇದರ ಹಿಂದೆ ಬೆಡ್‌ಮಾಫಿಯಾ ಕೆಲಸ ಮಾಡುತ್ತಿರಬಹುದು ಎಂದುಸುದ್ದಿಗೋಷ್ಠಿಯಲ್ಲಿ ದೂರಿದರು.20 ಕೆಎಲ್ ಆಕ್ಸಿಜನ್ ಅವಶ್ಯಕತೆ: ನಗರದ ಮಿಮ್ಸ್‌ನಲ್ಲಿ 600 ಹಾಸಿಗೆಗಳಿದ್ದು, 450 ಹಾಸಿಗೆಗಳು ಆಕ್ಸಿಜನ್ ಅಳವಡಿಸಲಾಗಿದೆ. ದಿನವೊಂದಕ್ಕೆ 20 ಕೆಎಲ್‌ಆಕ್ಸಿಜನ್ ಅಗತ್ಯವಿದೆ. ಆದರೆ ಮೂರ್‍ನಾಲ್ಕು ದಿನಕ್ಕೆಒಂದು ಬಾರಿಗೆ ಕೇವಲ 13ಕೆಎಲ್ ಆಕ್ಸಿಜನ್ ಸಿಗುತ್ತಿದೆ. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆಎಂದು ಬೇಸರ ವ್ಯಕ್ತಪಡಿಸಿದರು.
ಬೆಡ್‌ಗಳ ಮಾಹಿತಿ ಇಲ್ಲ: ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ.ಆದರೆ ಎಷ್ಟು ಮಂದಿಗೆ ಬೆಡ್ ಸಿಗುತ್ತಿದೆ. ಎಲ್ಲಿ ಬೆಡ್‌ಗಳು ಸಿಗುತ್ತಿವೆ ಎಂಬುದರ ಮಾಹಿತಿ ನೀಡುತ್ತಿಲ್ಲ.ಸೋಂಕಿತರು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇಇದ್ದಾರೆ. ಮಂಡ್ಯ ತಾಲೂಕಿನಲ್ಲಿಯೇ 30 ಗ್ರಾಮಗಳುಸೀಲ್‌ಡೌನ್ ಆಗಿದೆ. ಸರ್ಕಾರ, ಜಿಲ್ಲಾಡಳಿತ ಹೋಂಐಸೋಲೇಷನ್‌ನಲ್ಲಿರುವವರಿಗೆ ಹೆಲ್ತ್ ಕಿಟ್ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಅಧಿಕಾರಿಗಳು, ಜನಪ್ರತಿನಿಗಳು ವಿಫಲ: ಜಿಲ್ಲೆಯಲ್ಲಿಸೋಂಕು ನಿಯಂತ್ರಿಸಬೇಕಾದ ಸರ್ಕಾರ, ಉಸ್ತುವಾರಿಸಚಿವರು, ಅಧಿ ಕಾರಿಗಳು ಹಾಗೂ ಜನಪ್ರತಿನಿ ಧಿಗಳುವಿಫಲರಾಗಿದ್ದಾರೆ. ಆಡಳಿತದಲ್ಲಿರುವ ಇವರು ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಗೆ ಬೇಕಾದ ಆಕ್ಸಿಜನ್,ಬೆಡ್, ವೆಂಟಿಲೇಟರ್‌ಗಳನ್ನು ಒದಗಿಸುತ್ತಿಲ್ಲ. ಇದರಿಂದ ಸೋಂಕಿತರು ಹೆಚ್ಚು ಸಾವನ್ನಪ್ಪುತ್ತಿದ್ದಾರೆಎಂದರು. ಕೋವಿಡ್ ವೇಳೆಯಲ್ಲಿ ರಾಜಕೀಯಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಸೋಂಕು ನಿವಾರಿಸುವಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕಿದೆ.ಅಗತ್ಯವಿದ್ದವರಿಗೆ ಬೆಡ್, ವೆಂಟಿಲೇಟರ್, ಆಕ್ಸಿಜನ್‌ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಸಿದ್ದರಾಮೇಗೌಡ, ಸಿ.ಎಂ.ದ್ಯಾವಪ್ಪ, ಎಚ್.ಕೆ.ರುದ್ರಪ್ಪ ಇತರರಿದ್ದರು.