Advertisement
ಪದವಿ ವ್ಯಾಸಂಗದ ಬಳಿಕ ಹೆಚ್ಚಿ ನವರು ಬಿ.ಎಡ್. ವ್ಯಾಸಂಗದತ್ತ ಮುಖ ಮಾಡುತ್ತಾರೆ. ಸದ್ಯದ ಪರಿಸ್ಥಿತಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆ ದರೂ ಉಪನ್ಯಾಸಕ ನೇಮಕಾತಿಗೆ ಬಿ.ಎಡ್. ಕಡ್ಡಾಯ ಮಾಡಲಾಗಿದೆ. ಇದರ ಲಾಭ ಪಡೆದುಕೊಳ್ಳುತ್ತಿರುವ ಖಾಸಗಿ ಬಿ.ಎಡ್. ಕಾಲೇಜುಗಳು, ಡೊನೇಷನ್ ಭಾರವನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುತ್ತಿದೆ.
Related Articles
ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಬಿ.ಎಡ್. ಸಿಇಟಿ ಪರೀಕ್ಷೆ ನಡೆಯುತ್ತದೆ. ಮೆರಿಟ್ ಆಧಾರದಲ್ಲಿ ಸರಕಾರಿ ಸೀಟ್ ನೀಡಲಾಗುತ್ತದೆ. ಹೀಗೆ ಮೆರಿಟ್ ಸೀಟ್ ಪಡೆದುಕೊಂಡ ಅಭ್ಯರ್ಥಿಗಳು ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಕೂಡಲೇ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪತ್ರ ವೊಂದನ್ನು ಅಭ್ಯರ್ಥಿಗೆ ನೀಡ ಲಾಗುತ್ತದೆ. ಇದನ್ನು ತಾವು ಸೇರ ಬಯಸುವ ಕಾಲೇಜಿನಲ್ಲಿ ತೋರಿಸಿ ಪ್ರವೇಶ ಪಡೆದುಕೊಳ್ಳಬೇಕು. ಈ ಪತ್ರದಲ್ಲಿ ಉಲ್ಲೇಖೀಸಿದಂತೆ-ಸಂಸ್ಥೆಯ ಶುಲ್ಕವಾಗಿ ಅಭ್ಯರ್ಥಿಯು ಪಾವ ತಿಸಿ ದ್ದಾರೆ. ಪಾವತಿಸಿರುವ ಶುಲ್ಕದ ವಿವರವನ್ನು ಪತ್ರದ ಹಿಂಬದಿಯಲ್ಲಿ ನಮೂದಿಸಲಾಗಿದೆ. ಈ ರೀತಿ ಪಾವತಿ ಸಿರುವ ಶುಲ್ಕವನ್ನು ಹೊರತುಪಡಿಸಿ ಇನ್ನಾವುದೇ ಶುಲ್ಕವನ್ನು ಸಂಸ್ಥೆಯವರು ವಸೂಲು ಮಾಡಬಾರದು- ಎಂದು ಹೇಳಲಾಗಿದೆ.
Advertisement
ಸರಕಾರಿ ಸೀಟ್‌ಗೆ ವರ್ಷದ ಶುಲ್ಕ ಸರಕಾರಕ್ಕೆ 10,150 ರೂ. ಪಾವತಿ
ಬಿ.ಎಡ್. ಅಫೀಲಿಯೇಶನ್ ಶುಲ್ಕ 1,560 ರೂ.
ಒಟ್ಟು 11,710 ರೂ. ಮಾತ್ರ ರಶೀದಿಯೂ ಇದೆ!
ಬಿ.ಎಡ್.ನ ಸರಕಾರಿ ಸೀಟ್ ಪಡೆದುಕೊಂಡ ಅಭ್ಯರ್ಥಿಯಿಂದ ಖಾಸಗಿ ಅಥವಾ ಅನುದಾನಿತ ಕಾಲೇಜುಗಳು ಡೊನೇಷನ್ ರಶೀದಿಯನ್ನು ನೀಡು ತ್ತವೆ. ಅಷ್ಟು ಹಣವನ್ನು ಅಭ್ಯರ್ಥಿ ಪಾವತಿಸಲೇಬೇಕು. ಆದರೆ ಇಲ್ಲಿ ಗಮ ನಿಸ ಬೇಕಾದದ್ದು , ರಶೀದಿ ನೀಡುವುದು ಅಭ್ಯರ್ಥಿ ಹೆಸರಿಗಲ್ಲ. ಆತನ ಅಥವಾ ಆಕೆಯ ಗಂಡ ಅಥವಾ ಹೆತ್ತವರ ಹೆಸರಿಗೆ. ಅಭ್ಯರ್ಥಿಗಳು ಸ್ವಇಚ್ಛೆಯಿಂದ ಡೊನೇಷನ್ ನೀಡುವುದಾದರೆ, ಕಾಲೇಜಿನ ಟ್ರಸ್ಟ್‌ಗೆ ನೀಡಲು ಅವಕಾಶ ಇದೆ. ಆದರೆ ಬಲವಂತದಿಂದ ವಸೂಲಿ ಮಾಡುವಂತಿಲ್ಲ. ಬಿ.ಎಡ್. ಸೇರಲಿಚ್ಛಿಸುವ ಆಕಾಂಕ್ಷಿಗಳು ಸರಕಾರದ ಸೀಟ್ ಪಡೆದುಕೊಂಡಿದ್ದರೆ, ಸರಕಾರ ವಿಧಿಸುವ ಶುಲ್ಕವನ್ನು ಮಾತ್ರ ಪಾವತಿಸಬೇಕು. ಹೆಚ್ಚುವರಿ ಶುಲ್ಕ ಅಥವಾ ಡೊನೇಷನ್ ಬೇಡಿಕೆ ಇಟ್ಟರೆ ನಮ್ಮಲ್ಲಿ ದೂರು ದಾಖಲಿಸಲು ಅವಕಾಶವಿದೆ. ಇದನ್ನು ರಾಜ್ಯದ ಪ್ರೌಢಶಿಕ್ಷಣ ನಿರ್ದೇಶಕರಿಗೆ ಹಾಗೂ ಕೇಂದ್ರೀಕೃತ ದಾಖಲಾತಿ ಘಟಕದ ಮೇಲಧಿಕಾರಿಗಳಿಗೆ ಕಳುಹಿಸಿ ಕೊಡುತ್ತೇವೆ.
– ನಾರಾಯಣ ಗೌಡ, ಪ್ರಾಂಶುಪಾಲ, ಬಿ.ಎಡ್. ಕಾಲೇಜು, ಮಂಗಳೂರು ಸರಕಾರಿ ಸೀಟ್ ಪಡೆದುಕೊಂಡರೂ ಖಾಸಗಿ ಕಾಲೇಜು ಡೊನೇಷನ್‌ಗೆ ಬೇಡಿಕೆ ಮುಂದಿಡುತ್ತಿವೆ. 10 ಸಾವಿರ ರೂಪಾಯಿಗಳಿಗೆ ರಶೀದಿ ನೀಡಿದ್ದಾರೆ. ಹೆಚ್ಚುವರಿ ಶುಲ್ಕ ನೀಡದಂತೆ ದಾಖಲಾತಿ ಪತ್ರದಲ್ಲಿ ಉಲ್ಲೇಖ ಮಾಡಿರುವುದರಿಂದ, ಹಣ ನೀಡಿಲ್ಲ. ನೀಡುವುದೂ ಇಲ್ಲ.
– ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ ಗಣೇಶ್ ಎನ್. ಕಲ್ಲರ್ಪೆ