ಕೆ.ಆರ್.ನಗರ: ಪಟ್ಟಣದ ಯಡತೊರೆ ಶಿಕ್ಷಣ ಮಹಾವಿದ್ಯಾಲಯದ ಎಂ.ಕೆ.ನಿಮಿತ ಪ್ರಶಿಕ್ಷಣಾರ್ಥಿ 2017ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ದ್ವಿತೀಯ ವರ್ಷದ ಬಿ.ಇಡಿ ಪದವಿ ಪರೀಕ್ಷೆಯಲ್ಲಿ ಶೇ.94.81 ಅಂಕಗಳನ್ನು ಪಡೆದು ಉತ್ತೀರ್ಣಳಾಗುವುದರ ಜತೆಗೆ ಚಿನ್ನದ ಪದಕ ಮತ್ತು ಎರಡು ನಗದು ಬಹುಮಾನಗಳನ್ನು ಪಡೆದಿದ್ದಾಳೆ.
ಈಕೆ ಪಟ್ಟಣದ ಕನಕನಗರ ಬಡಾವಣೆಯ ನಿವಾಸಿ ಪ್ರಾಥಮಿಕ ಶಾಲಾ ಶಿಕ್ಷಕ ಎಂ.ಟಿ.ಕುಮಾರ್ ಮತ್ತು ಸಿ.ಎ.ಸುಭದ್ರ ದಂಪತಿಯ ಪುತ್ರಿಯಾಗಿದ್ದು, ಮೈಸೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯುವುದರ ಜತೆಗೆ ಶ್ರೀಮತಿ ಭಾಗೀರಥಿಬಾಯಿ ಮತ್ತು ಮಹಾಲಕ್ಷ್ಮಮ್ಮ ಶ್ಯಾಮಯ್ಯಂಗಾರ್ ಸ್ಮಾರಕ ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ.
ಈಕೆ ಮಹಾವಿದ್ಯಾಲಯಕ್ಕೆ ಕೀರ್ತಿ ತಂದು ಕೊಟ್ಟಿದ್ದಾಳೆ. ಈಕೆಯ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿ ಸುಜಾತ ಶ್ರೀನಿವಾಸ್, ಪ್ರಾಂಶುಪಾಲರಾದ ಎನ್.ಎಸ್.ದೀಪ, ಉಪನ್ಯಾಸಕರಾದ ಗೀತಾ, ಗಿರೀಶ್‌ಕುಮಾರ್, ಮಹದೇವ್, ಮೋಹನಕುಮಾರಿ, ಉಷಾ, ರಾಜಲಕ್ಷ್ಮಮ್ಮ, ವ್ಯವಸ್ಥಾಪಕ ಲೋಕೇಶ್ ಭರಣಿ ಅಭಿನಂದಿಸಿದ್ದಾರೆ. ಕೆ.ಆರ್.ನಗರ-ಪಟ್ಟಣದ ಯಡತೊರೆ ಶಿಕ್ಷಣ ಮಹಾವಿದ್ಯಾಲಯದ 2018-19ನೇ ಸಾಲಿನ ಪ್ರಥಮ ಬಿ.ಇಡಿ ಪದವಿ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದಾಖಲಾತಿ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭವಾಗಲಿದ್ದು, ಆಸಕ್ತರು ವಿದ್ಯಾರ್ಹತೆಗೆ ಸಂಬಂಧಿಸಿದ ಅಗತ್ಯ ದಾಖಲಾತಿಗಳೊಂದಿಗೆ ಕಾಲೇಜಿನ ಅವಧಿಯಲ್ಲಿ ದಾಖಲಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-9620616261 ಸಂಪರ್ಕಿಸಬಹುದು ಎಂದು ಕಾಲೇಜಿನ ವ್ಯವಾ§ಪಕ ಲೋಕೇಶ್¸ರಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.