Advertisement
ಗುರುವಾರ ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕಮಲ್, “ಹಿಂದಿ ಹೇರಿಕೆ ವಿಚಾರವಾಗಿ ನಾನು ಎಂದು ಖಡಕ್ ಆಗಿ ಅಭಿಪ್ರಾಯ ವ್ಯಕ್ತಪಡಿಸಿದೆನೋ ಅಂದೇ ನಾನು ಹವ್ಯಾಸಿ ರಾಜಕಾರಣಿ ಆಗಿಬಿಟ್ಟಿದ್ದೇನೆ’ ಎಂದಿದ್ದಾರೆ. ಇದೇ ವೇಳೆ, ತಮ್ಮ ಮೇಲೆ ಕೆಲವರು ತೆರಿಗೆ ತಪ್ಪಿಸಿಕೊಂಡ ಆರೋಪದ ಮೇಲೆ ನಿಮ್ಮ ಮೇಲೆ ಕಠಿನ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಅವರ ಇಂಥ ನಡವಳಿಕೆಗೆ ಕೋಪ, ನಗು ಎರಡೂ ಬರುತ್ತದೆ’ ಎಂದಿದ್ದಾರೆ.
ಡಿಎಂಕೆ, ಆ.8ರಂದು ನಡೆಯಲಿರುವ ಪಕ್ಷದ ಮುಖವಾಣಿ ಮುರುಸೊಳಿ ವಜ್ರಮಹೋತ್ಸವಕ್ಕೆ ಕಮಲ್ ಹಾಗೂ ರಜನೀಕಾಂತ್‌ಗೆ ಆಹ್ವಾನ ನೀಡಿದ್ದು, ಕಮಲ್ ಹಾಸನ್ ಆಹ್ವಾನ ಸ್ವೀಕರಿಸಿದ್ದಾರೆ. ಆದರೆ ರಜನೀಕಾಂತ್ ಇದರಲ್ಲಿ ಪಾಲ್ಗೊಳ್ಳುತ್ತಾರೆಯೇ ಎನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕಮಲ್ ಹಾಗೂ ರಜನಿ ಇಬ್ಬರೂ ರಾಜಕೀಯ ಪ್ರವೇಶದ ಸುಳಿವು ನೀಡುತ್ತಿರುವ ಹಿನ್ನೆಲೆಯಲ್ಲಿ ಡಿಎಂಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ರಾಜಕೀಯವಾಗಿಯೂ ಲಾಭ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದೆ. ಎಐಎಡಿಎಂಕೆ ಪಕ್ಷದ ಕೆಲವು ಸಚಿವರ ಜತೆ ಕಮಲ್ ಉತ್ತಮ ಬಾಂಧವ್ಯ ಹೊಂದಿಲ್ಲ, ಹೀಗಾಗಿ ಅವರೆಲ್ಲರಿಗೂ ಬಿಸಿ ತಟ್ಟಿಸುವ ಉದ್ದೇಶ ಕಮಲ್‌ರದ್ದು ಎನ್ನಲಾಗುತ್ತಿದೆ.