Advertisement

ಸೌಂದರ್ಯ ವೃದ್ಧಿಸುವ ಬ್ಯೂಟೀಶಿಯನ್‌

03:30 PM Nov 14, 2018 | |

ಯುವ ಜನತೆ ಪ್ರತಿ ಕ್ಷಣವೂ ತಾನು ಸುಂದರವಾಗಿ ಕಾಣಬೇಕು ಎಂದು ಬಯಸುವುದು ಸಹಜ. ಅದಕ್ಕೋಸ್ಕರ ಈಗ ಈ ಬ್ಯೂಟಿ ಪಾರ್ಲರ್‌ ಗಳ ಸಂಖ್ಯೆ ಅಧಿಕವಾಗಿದೆ. ಏಕೆಂದರೆ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಅದು ಮದುವೆ, ರಿಸೆಪ್ಶನ್‌, ಪಾರ್ಟಿ ಏನೇ ಇರಲಿ ಬ್ಯೂಟಿ ಪಾರ್ಲರ್‌ ಗೆ ಹೋಗದೆ ನಾವು ಸಿದ್ಧವಾಗಲು ಸಾಧ್ಯವಿಲ್ಲ ಎಂಬಷ್ಟು ಸೌಂದರ್ಯಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದೇವೆ. ಈ ಬ್ಯೂಟಿ ಪಾರ್ಲರ್‌ ನಲ್ಲಿ ಮೇಕಪ್‌ ಮಾಡಿಸಿಕೊಂಡು ಬಂದ ಅನೇಕರು ತಾವೂ ಈಗ ಬ್ಯೂಟೀಶಿಯನ್‌ ಆಗಿದ್ದೇವೆ ಎಂದುಕೊಳ್ಳುತ್ತಿದ್ದಾರೆ ಈ ಮೂಲಕ ಕಲಿಕೆಯತ್ತ ಆಸಕ್ತಿ ಹೊಂದುತ್ತಿದ್ದಾರೆ.

Advertisement

ಹೌದು ಈ ಬ್ಯೂಟೀಶಿಯನ್‌ನಲ್ಲಿ ಆಸಕ್ತಿ ಹೊಂದಿದವರಿಗೆ ಈಗ ಅನೇಕ ಅವಕಾಶ ಹಾಗೂ ಒಳ್ಳೆಯ ಬೇಡಿಕೆ ಇದೆ. ಏಕೆಂದರೆ ಮಹಿಳೆಯರಿಂದ ಹಿಡಿದು ಪುರುಷರವರೆಗೆ ಇದರ ಪರಿಣಾಮ ಬೀರಿದೆ. ಇದು ಯುವ ಉತ್ಸಾಹಿ ಆಸಕ್ತಿ ಹೊಂದಿದವರಿಗೆ ಬದುಕು ಕಟ್ಟಿಕೊಳ್ಳಲು ಸದವಕಾಶ ಎನ್ನಬಹುದು.

ತರಬೇತಿ
ಕಾಸ್ಮೆಟಾಲಜಿ ಟ್ರೈನಿಂಗ್‌ ಜತೆಗೆ ಬ್ಯೂಟಿ ತರಬೇತಿ ಪಡೆದುಕೊಂಡರೆ ಸಾಕು. ಇದಲ್ಲದೆ ಡಿಪ್ಲೊಮಾ ಕೋರ್ಸ್‌ ಹಾಗೂ ಫ‌ುಲ್‌ ಟೈಮ್‌ ಸರ್ಟಿಫಿಕೇಟ್‌ ಕೋರ್ಸ್ ಗಳು ಇವೆ. ಜತೆಗೆ ಇದರಲ್ಲೇ ನಾವು ಮಾಸ್ಟರ್‌ ಕೂಡ ಮಾಡಬಹುದು. ಮುಖ್ಯವಾಗಿ ಕಾಸ್ಮೆಟಿಕ್ಸ್‌, ಹೇರ್‌ ಸ್ಟ್ರೈಟ್ನಿಂಗ್‌, ಸ್ಕಿನ್‌ ಕೇರ್‌, ಮೇಕಪ್‌, ನೈಲ್‌ ಕೇರ್‌ ಹೀಗೆ ಹಲವು ರೀತಿಯ ಪ್ರಾಯೋಗಿಕ ಶಿಕ್ಷಣಗಳು ಲಭ್ಯ ಇರುತ್ತವೆ. ಅವರ ಜತೆ ನಾವು ಈ ಬ್ಯೂಟೀಶಿಯನ್‌ ಕೆಲಸವನ್ನು ಕೆಲ ತಿಂಗಳ ಕಾಲ ಅಪ್ರಂಟಿ ಶಿಪ್‌ ಮಾಡಿ ನಾವೇ ಸ್ವತಃ ಈ ಕಾರ್ಯದಲ್ಲಿ ತೊಡಗಬಹುದು.

ಆದಾಯವೂ ಹೆಚ್ಚು
ಎಕ್ಸ್‌ ಪರ್ಟ್‌ ಬ್ಯೂಟೀಶಿಯನ್ಸ್‌ ಗಳಾದರೆ ಅಪಾರ ಬೇಡಿಕೆ ಇರುತ್ತದೆ. ಅಂದಕ್ಕೆ ತಕ್ಕಂತೆ ಕೈಗೆ ಸಿಗುವ ವೇತನವೂ ಅಧಿಕವಾಗಿರುತ್ತದೆ. ಅಲ್ಲದೆ ಬೇಡಿಕೆಯೂ ಅಧಿಕವಾಗಿರುತ್ತದೆ.

ಪ್ರತಿಭೆಯೂ ಅಗತ್ಯ
ಯಾವುದೇ ಕ್ಷೇತ್ರದಲ್ಲಿ ಪರಿಣತಿ ಹೊಂದಬೇಕೆಂದರೆ ಆ ಕ್ಷೇತ್ರದ ಬಗ್ಗೆ ಪರಿಣತರಾಗುವುದು ಆವಶ್ಯ. ಬ್ಯೂಟೀಶಿಯನ್ಸ್‌  ಆಗಲೂ ಕೂಡ ಕೆಲವೊಂದು ಚಾಕಚಾಕ್ಯತೆಯನ್ನು ಕರಗತ ಮಾಡಿ ಕೊಂಡಿರಬೇಕು. ವಿಭಿನ್ನ ಮಾದ ಕೇಶವಿನ್ಯಾಸ, ಮೇಕಪ್‌, ಡಿಸೈನ್‌ ಗಳ ಬಗ್ಗೆ ಪರಿಣತಿ ಹೊಂದಬೇಕು. ಆ ಮೂಲಕ ಹೊಸ ಕಲ್ಪನೆಗಳನ್ನು ಈ ಕ್ಷೇತ್ರದಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

Advertisement

ಲೇಡಿಸ್‌ ಹಾಗೂ ಜಂಟ್ಸ್‌ ಈ ಎರಡೂ ವಿಭಾಗಗಳಲ್ಲಿ ನಿಮಗಿಷ್ಟ ಬಂದ ವಿಭಾಗವನ್ನು ಆಯ್ದುಕೊಂಡು ಬ್ಯೂಟಿ ಸೆಲೂನ್‌, ಬ್ಯೂಟಿ ಪಾರ್ಲರ್‌ಗಳ ಬಿಸಿ ನೆಸ್‌ ಕೂಡ ಮಾಡಬಹುದು. ಜತೆಗೆ ಉತ್ತಮ ಸಂಭಾವನೆಯನ್ನೂ ಕೂಡ ಪಡೆಯಬಹುದು. ಒಟ್ಟಿನಲ್ಲಿ ಯುವ  ಸಮುದಾಯಕ್ಕೆ ಈ ಮೇಕಪ್‌, ಸೌಂದರ್ಯ ಕಾಳಜಿ ಇರುವವರಿಗೆ ಈ ವೃತ್ತಿ ಕ್ಷೇತ್ರ ಹೇಳಿಮಾಡಿಸಿದ್ದು.

ಪಾರ್ಟ್‌ ಟೈಮ್‌ ಜಾಬ್‌
ಬ್ಯೂಟೀಶಿಯನ್‌ ವೃತ್ತಿಯನ್ನು ಫ‌ುಲ್‌ ಟೈಮ್‌ ಅಥವಾ ಪಾರ್ಲರ್‌ ಮೂಲಕ ನಡೆಸಬೇಕೆಂದಿಲ್ಲ. ನೀವು ನಿಮ್ಮ ಸಮಯವಿದ್ದಾಗ ಸ್ವತಃ ಗ್ರಾಹಕರ ಮನೆಗೆ ತೆರಳಿ ಕೆಲಸವನ್ನು ನಿರ್ವಹಿಸಬಹುದು. ಮಾತ್ರವಲ್ಲದೆ ಇದಕ್ಕೆ ಮಾರ್ಕೆಟಿಂಗ್‌ ಅಥವಾ ಯಾವುದೇ ಪ್ರಚಾರದ ಅಗತ್ಯವೂ ಇರುವುದಿಲ್ಲ. ನೀವೇ ಸ್ನೇಹಿತರ, ಕುಟುಂಬದ ಕಾರ್ಯಕ್ರಮದಲ್ಲಿ ಕೆಲಸವನ್ನು ಮಾಡಬಹುದು. ಅಲ್ಲದೆ ಈವೆಂಟ್‌ ಮ್ಯಾನೆಂಜ್‌ ಮೆಂಟ್‌ ನಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಿಕೊಂಡರೆ ಅಧಿಕ ಯಶಸ್ಸು ಕೂಡ ಪಡೆಯಬಹುದಾಗಿದೆ.

ಭರತ್‌ ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next