Advertisement

ಸೌಂದರ್ಯ-ರೋಗನಿವಾರಕ ಆಹಾರ ಪಾಕ

06:47 PM May 16, 2019 | Team Udayavani |

ಬೇಸಿಗೆ ಬಂತೆಂದರೆ ದಂಡು ದಂಡಾಗಿ ಸಣ್ಣ ದೊಡ್ಡ ಕಾಯಿಲೆಗಳು, ಸಣ್ಣವರು ದೊಡ್ಡವರು ಎಂದು ಪರಿಗಣಿಸದೇ ಎಲ್ಲರನ್ನೂ ಕಾಡುವುದು ಸಾಮಾನ್ಯ. ಎಷ್ಟೋ ಕಾಯಿಲೆಗಳಿಗೆ ಆರಂಭದಲ್ಲಿಯೇ ಮನೆಯಲ್ಲೇ ಆಹಾರರೂಪೀ ಔಷಧ, ಖಾದ್ಯ ಪೇಯ ತಯಾರಿಸಿದರೆ ರೋಗಲಕ್ಷಣಗಳು ಮಾಯವಾಗಿ ಆರೋಗ್ಯ ನಳನಳಿಸುತ್ತದೆ. ಅಂತಹ ರೋಗನಿವಾರಕ ಬೇಸಿಗೆಯ ಸ್ಪೆಷಲ್‌ ಆಹಾರ ಪಾಕ ಇಂತಿವೆ.

Advertisement

ಜಿಂಜರ್‌ ಲೆಮನ್‌ ಪೇಯ
ಸುಸ್ತು-ಬಳಲಿಕೆ ಜಲೀಯ ಅಂಶದ ಕೊರತೆಗೆ ಈ ಪೇಯ ಉತ್ತಮ. 1 ಕಪ್‌ ನೀರಿಗೆ 2 ಇಂಚು ಹಸಿ ಶುಂಠಿ ಜಜ್ಜಿ ಹಾಕಬೇಕು. ಚೆನ್ನಾಗಿ ಕುದಿಸಿದ ಬಳಿಕ ಸೋಸಿ ಬೆಲ್ಲ ಬೆರೆಸಿ ಕರಗಿಸಿ ನಿಂಬೆರಸ ಬೆರೆಸಿ ಸೇವಿಸಬೇಕು. ಯಾವುದೇ ಎನರ್ಜಿ ಡ್ರಿಂಕ್‌ಗಿಂತ ತಕ್ಷಣವೇ ಶಕ್ತಿ ನೀಡುತ್ತದೆ. ಹಸಿವು, ರುಚಿಯೂ ಹೆಚ್ಚುತ್ತದೆ. ದಿನಕ್ಕೆ 1-2 ಬಾರಿ ಸೇವನೆ ಹಿತಕರ.

ಕೊತ್ತಂಬರಿ ಶೀತ ಕಷಾಯ
ಕೊತ್ತಂಬರಿ ಬೀಜವನ್ನು ಮಿಕ್ಸರ್‌ನಲ್ಲಿ ತಿರುವಿ ತರಿ ತರಿಯಾಗಿ ಪುಡಿ ಮಾಡಬೇಕು. ಇದನ್ನು 1 ಕಪ್‌ ನೀರಿಗೆ ರಾತ್ರಿ 2 ಚಮಚ ಹುಡಿ ಬೆರೆಸಿ ಇಡಬೇಕು. ಮರುದಿನ ಬೆಳಿಗ್ಗೆ ಸೋಸಿ ಅದಕ್ಕೆ ಬೆಲ್ಲ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉರಿಮೂತ್ರ, ರಕ್ತಮೂತ್ರ, ಹೊಟ್ಟೆ ಉರಿ, ಆಮ್ಲಿàಯತೆ, ಪಿತ್ತಾಧಿಕ್ಯದ ತಲೆನೋವು ನಿವಾರಕ. ಬೆಳಿಗ್ಗೆ ನೆನೆಸಿ ಮಧ್ಯಾಹ್ನ , ಮಧ್ಯಾಹ್ನ ನೆನೆಸಿ ರಾತ್ರಿ ಹೀಗೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಶೀಘ್ರ ಪರಿಣಾಮ ಉಂಟಾಗುತ್ತದೆ.

ಬಿಳಿಮುಟ್ಟು ನಿವಾರಕ ಪೇಯ
4 ಚಮಚ ಬಿಳಿ ಎಳ್ಳನ್ನು ಹುರಿದು ಅರೆದು ಪೇಸ್ಟ್‌ ಮಾಡಬೇಕು. ಇದಕ್ಕೆ ಚೆನ್ನಾಗಿ ಕಳಿತ ಬಾಳೆಹಣ್ಣು ಮಸೆದು ಪೇಸ್ಟ್‌ ಮಾಡಿ ಬೆರೆಸಬೇಕು. ಅಕ್ಕಿ ತೊಳೆದ ನೀರು 1 ಕಪ್‌ (ತಂಡುಲೋದಕ) ಇದಕ್ಕೆ ಬೆರೆಸಿ ಬೆಲ್ಲ ಸೇರಿಸಿ ದಿನಕ್ಕೆ 2 ಬಾರಿ ಸೇವಿಸಿದರೆ ಉಷ್ಣಾಧಿಕ್ಯತೆಯಿಂದ ಬೇಸಿಗೆಯಲ್ಲಿ ಮಹಿಳೆಯರಲ್ಲಿ ಬಿಳುಪು ಹೋಗುವ ಸಮಸ್ಯೆ ನಿವಾರಣೆಯಾಗುತ್ತದೆ.

ಟ್ಯಾನ್‌ನಿವಾರಕ ಪೇಯ
1/2 ಕಪ್‌ ಟೊಮ್ಯಾಟೊ ಜ್ಯೂಸ್‌, 1/2 ಕಪ್‌ ಸೌತೆಕಾಯಿ ಜ್ಯೂಸ್‌, 4 ಚಮಚ ಕ್ಯಾರೆಟ್‌ ರಸ, 2 ಚಮಚ ಜೇನು ಬೆರೆಸಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹಾಗೂ ಬಿಸಿಲಿಗೆ ಹೋಗುವ ಮೊದಲು ಹಾಗೂ ನಂತರ ಟೊಮ್ಯಾಟೊ ರಸ ಹಾಗೂ ಜೇನು ಬೆರೆಸಿ ಸೂರ್ಯನ ಕಿರಣದಿಂದ ಟ್ಯಾನ್‌ ಆದ (ಬಿಸಿಲುಗಂದು) ಹೊಂದಿರುವ ಚರ್ಮಕ್ಕೆ ಲೇಪಿಸಬೇಕು. ಅರ್ಧ ಗಂಟೆ ಬಳಿಕ ತೊಳೆಯಬೇಕು. ಇದು ಶೀಘ್ರ ಪರಿಣಾಮ ಬೀರುತ್ತದೆ.

Advertisement

ಮೊಡವೆ ನಿವಾರಕ ಪೇಯ ಹಾಗೂ ಲೇಪ
ಬೇಸಿಗೆಯಲ್ಲಿ ಅಧಿಕ ಬೆವರು, ಧೂಳು, ಎಣ್ಣೆಯ ಪಸೆಯಿಂದ ಮೊಡವೆ ಕಾಡುವುದು ಹೆಚ್ಚು. ಎಲೋವೆರಾ ತಿರುಳು ಹಾಗೂ ನೆಲ್ಲಿಕಾಯಿ ಪುಡಿ ಬೆರೆಸಿ ಮೊಡವೆಗೆ ಲೇಪಿಸಿ 1/2 ಗಂಟೆ ಬಳಿಕ ತೊಳೆದರೆ ಬೇಸಿಗೆಯ ಮೊಡವೆ ಶಮನವಾಗುತ್ತದೆ. ಜೊತೆಗೆ 1 ಕಪ್‌ ನೀರಿಗೆ 2 ಚಮಚ ಎಲೋವೆರಾ ರಸ ಹಾಗೂ 1 ಚಮಚ ನೆಲ್ಲಿಕಾಯಿ ಪುಡಿ, ಬೆಲ್ಲ 1 ಚಮಚ ಬೆರೆಸಿ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಬೇಸಿಗೆಯಲ್ಲಿ ಇದು ಉತ್ತಮ “ಡಿಟಾಕ್ಸ್‌ ಪೇಯ’. ನಿತ್ಯ ಉಪಯೋಗದಿಂದ ಮೊಡವೆ ಕಲೆ ನಿವಾರಣೆಯಾಗುವುದು ಮಾತ್ರವಲ್ಲದೆ ಅಧಿಕ ತೂಕ, ಕೊಲೆಸ್ಟರಾಲ್‌ ಸಹ ಕಡಿಮೆಯಾಗುತ್ತದೆ.

ತ್ರಿಫ‌ಲಾ ಐವಾಶ್‌
ನೆಲ್ಲಿಕಾಯಿ, ತಾರೆಕಾಯಿ, ಅಳಲೆಕಾಯಿ (ತ್ರಿಫ‌ಲಾ) ಚೂರ್ಣಕ್ಕೆ ನೀರು ಬೆರೆಸಿ ಕಷಾಯ ತಯಾರಿಸಬೇಕು. ಅದರಿಂದ ಕಣ್ಣುಗಳನ್ನು ಆಗಾಗ್ಗೆ ತೊಳೆಯುತ್ತಿದ್ದರೆ ಕಣ್ಣು ಕೆಂಪಾಗುವುದು, ಸೋಂಕು, ಉರಿ, ತುರಿಕೆ ನಿವಾರಕ. ನಿತ್ಯ ತ್ರಿಫ‌ಲಾ ಕಷಾಯ ರಾತ್ರಿ ಸೇವಿಸಿದರೆ ಶೀಘ್ರ ಪರಿಣಾಮಕಾರಿ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ.

ಪಪ್ಪಾಯ ಹೇರ್‌ಪ್ಯಾಕ್‌
ಬೇಸಿಗೆಯಲ್ಲಿ ಕಾಂತಿ ಕಳೆದುಕೊಳ್ಳುವ ಕೂದಲಿಗೆ ಪಪ್ಪಾಯದ ಬ್ಯೂಟಿ ರೆಸಿಪಿ ಇಲ್ಲಿದೆ. ಚೆನ್ನಾಗಿ ಕಳಿತ ಸಣ್ಣ ಇಡೀ ಪಪ್ಪಾಯವನ್ನು ಅಂದರೆ ಸಿಪ್ಪೆ, ಬೀಜ, ತಿರುಳು ಸಮೇತ ಚೆನ್ನಾಗಿ ಅರೆದು ಪೇಸ್ಟ್‌ ತಯಾರಿಸಿ ಹೇರ್‌ಪ್ಯಾಕ್‌ ಮಾಡಬೇಕು. 1 ಗಂಟೆ ಬಳಿಕ ಬೆಚ್ಚಗಿನ ನೀರಿನಲ್ಲಿ ಕೂದಲು ತೊಳೆದರೆ ಕೂದಲು ಶುಭ್ರ ಹಾಗೂ ರೇಶಿಮೆಯಂತೆ ನುಣುಪಾಗುತ್ತದೆ.

-ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next