Advertisement

ಮಹಿಳೆಯಿಂದ ಸುಂದರ ಸಂಸಾರ

12:18 PM Jul 03, 2018 | Team Udayavani |

ಬೆಂಗಳೂರು: ಸುಂದರ ಸಂಸಾರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅತಿ ಮುಖ್ಯ ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ.ಪದ್ಮಶೇಖರ್‌ ಅಭಿಪ್ರಾಯಪಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದಿಂದ ಸೋಮವಾರ ಜ್ಞಾನಭಾರತಿ ಆವರಣದ ಪ್ರೊ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮಗಳು’ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Advertisement

ತಾಯಿ, ಮಗಳು, ಅಕ್ಕ, ತಂಗಿ ಹೀಗೆ ನಾನಾ ರೂಪದಲ್ಲಿ ಮಹಿಳೆ ಸಮಾಜ ಹಾಗೂ ಸಂಸಾರದಲ್ಲಿ ಸೇವೆ ಸಲ್ಲಿಸುತ್ತಾಳೆ. ಮಹಿಳೆಯ ಮೇಲಿನ ದೌರ್ಜನ್ಯ ಸಂಪೂರ್ಣ ನಿಲ್ಲಬೇಕು. ಹೆಣ್ಣು ಸಂಸಾರದ ಕಣ್ಣು, ಸಮಾಜದ ಸಂಪತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳು ಹುಟ್ಟಿದಾಗ ಉಂಟಾಗುವ ತಿರಸ್ಕಾರ ಭಾವನೆ ದೂರಾಗಬೇಕು ಎಂದರು.

ಐಜಿಪಿ ಡಿ.ರೂಪಾ, ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕುಲಸಚಿವ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜ ಮೊದಲಾದವರು ಉಪಸ್ಥಿರಿದ್ದರು. ವಿವಿಯಲ್ಲಿ ಕಾರ್ಯ ನಿರ್ವಸುತ್ತಿರುವ ಬೋಧಕರಾದ ಡಾ.ಗೋಮತಿ ದೇವಿ, ಡಾ.ಹಸೀನ್‌ ತಾಜ್‌, ಡಾ.ಕೆ.ಎಸ್‌.ವೈಶಾಲಿ, ಡಾ.ಎನ್‌.ನ‌ಂದಿನಿ,

ಡಾ.ಬೇಲಜೂಟ್ಸೆ, ಡಾ.ಹಂಸೀನಿ ನಾಗೇಂದ್ರ, ಡಾ.ಎಂ.ಕೆ.ಕೋಕಿಲಾ, ಡಾ.ಬಿ.ಎನ್‌. ಮೀರಾ, ಡಾ.ಟಿ.ಶರ್ಮಿಳಾ ಬೋಧಕೇತರ ವರ್ಗದವರಾದ ಸುನಂದಮ್ಮ ಮತ್ತು ಸಂಗಮಿತ್ರ ಸೇರಿ  ಸ್ನಾತಕೋತ್ತರ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು  ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next