Advertisement

ಸುಂದರ, ಸ್ವತ್ಛ, ಸಮೃದ್ಧ ಮಂಗಳೂರಿನ ಸಂಕಲ್ಪ 

10:06 AM May 02, 2018 | Harsha Rao |

ಮಂಗಳೂರು:ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್‌ ಕಾಮತ್‌ ಅವರು ಕಾರ್ಯಕರ್ತರ ಜತೆಗೆ ನಗರದ ಬಿಜೈ, ಕಾಪಿಕಾಡ್‌ ವಾರ್ಡ್‌ನಲ್ಲಿ ಮಂಗಳವಾರ ಮನೆ ಮನೆ ಭೇಟಿ ನೀಡಿ ಮತಪ್ರಚಾರ ನಡೆಸಿದರು.

Advertisement

ಮತದಾರರು ಈ ಬಾರಿ ತೋರಿಸುತ್ತಿರುವ ಅಪೂರ್ವ ಸ್ಪಂದನೆ, ಕಾರ್ಯಕರ್ತರ ಉತ್ಸಾಹ ನೋಡಿದರೆ ಬಿಜೆಪಿ ಸುಲಭ ಜಯ ಸಾಧಿಸುವುದು ನಿಚ್ಚಳವಾಗಿದೆ ಎಂದು ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ. 

ಬಿಜೆಪಿ ಸರಕಾರದ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅನುದಾನ ಪಡೆದು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದ ಮಂಗಳೂರು ನಗರ, ಕಾಂಗ್ರೆಸ್‌ ಅಧಿಕಾರದಲ್ಲಿ ಹಿನ್ನಡೆಯತ್ತ ಸಾಗಿದೆ. ಮತ್ತೆ ಅದನ್ನು ಪ್ರಗತಿಶೀಲ
ಗೊಳಿಸಲು ತನ್ನದೇ ಕನಸಿದ್ದು, ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬಿಜೆಪಿ ಸರಕಾರ ನೀಡಿದ 300 ಕೋ.ರೂ. ವಿಶೇಷ ಅನುದಾನದ ಬಳಿಕ ಮಂಗಳೂರು ನಗರಕ್ಕೆ ಯಾವುದೇ ಅನುದಾನ ಬಂದಿಲ್ಲ. ಕೇಂದ್ರ ಸರಕಾರ ಈ ಬಾರಿ ಸುಮಾರು 2,200 ಕೋ.ರೂ. ನೆರವು ನೀಡಿದ್ದನ್ನು ಬಳಸಿಕೊಳ್ಳಲಿಲ್ಲ. ನಾವು ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಶಾಸಕರು ಎಷ್ಟು ಅನುದಾನ ತಂದಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದ್ದಾರೆ.

ಮಂಗಳೂರು ನಗರಕ್ಕೆ ಪ್ರತಿದಿನ 110 ಎಂಎಲ್‌ಡಿ ನೀರು ಅಗತ್ಯವಿದೆ. ಆದರೆ ಈಗ ಇರುವ ವ್ಯವಸ್ಥೆಯಲ್ಲಿ ನೀರಿನ
ಸೋರಿಕೆ ಅಧಿಕವಾಗಿದ್ದು, ಕುಡ್ಸೆಂಪ್‌ ಯೋಜನೆಯಂತೂ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಬಿಜೆಪಿ ಸರಕಾರ ಮಂಗಳೂರಿಗೆ ಅಮೃತ್‌ ಯೋಜನೆ, ಸ್ಮಾರ್ಟ್‌ ಸಿಟಿ ಯೋಜನೆ ನೀಡಿದೆ.

ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ 24 ಗಂಟೆ ನೀರು ಒದಗಿಸ
ಲಾಗುವುದು. ಒಳ ಚರಂಡಿ ಹಾಗೂ ತ್ಯಾಜ್ಯ ನೀರು ನಿರ್ವಹಣೆಯನ್ನು ಪರಿಪೂರ್ಣಗೊಳಿಸಲು ತಾನು ಕಟಿಬದ್ಧ
ನಾಗಿದ್ದೇನೆ ಎಂದರು.

Advertisement

ನಗರದಲ್ಲಿ ಪಾಲಿಕೆ ಹಾಗೂ ಗುತ್ತಿಗೆ ದಾರರ ನಡುವಿನ ಕಿತ್ತಾಟದಿಂದ ಕಸದ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ. ಮಂಗಳೂರು ನಗರ ಸ್ವತ್ಛನಗರ ಎನ್ನುವ ಕೀರ್ತಿಗೆ ಪಾತ್ರವಾಗ ಬೇಕಾದರೆ, ವ್ಯವಸ್ಥಿತ ತ್ಯಾಜ್ಯ ವಿಲೇವಾರಿ ಅತಿ ಅಗತ್ಯ. ಆ ಬಗ್ಗೆ ಅತೀ ಶೀಘ್ರ ಕೇಂದ್ರದ ನೆರವಿನಿಂದ ಯೋಜನೆ ರೂಪಿಸಲಾಗುವುದು. ನಗರದ ಎಲ್ಲ ಕೆರೆ ಅಭಿವೃದ್ಧಿಪಡಿಸಿ ಬಳಸಿ ಕೊಳ್ಳಲು ಕ್ರಮ ಜರಗಿಸಲಾಗುವುದು ಎಂದವರು ಹೇಳಿದರು.

ಸಾರಿಗೆ – ಸಂಚಾರ ವ್ಯವಸ್ಥೆ, ಸುವ್ಯವಸ್ಥಿತ ರಸ್ತೆಗಳು, ಸೋಲಾರ್‌ ಬೀದಿ ದೀಪಗಳು, ಸುಂದರ ಬಸ್‌ ಬೇ, ಬಸ್‌ ತಂಗುದಾಣಗಳು, ರಸ್ತೆಗಳ ನಾಮಫಲಕಗಳು, ಸುಲಲಿತ ಸಂಚಾರ – ಚಾಲನೆಗೆ ಸಹಕಾರಿಯಾಗುವ ಸಿಗ್ನಲ್‌, ಘನ ವಾಹನ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ, ಅಂತಾರಾಷ್ಟ್ರೀಯ ಮಟ್ಟದ ಬಸ್‌ ನಿಲ್ದಾಣ ಬೇಕಿದೆ. ಬೀಚ್‌ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದರು.

ರವಿಶಂಕರ್‌ ಮಿಜಾರ್‌, ಸುಧೀಂದ್ರ, ಶರಣ್‌ ಪಂಪ್‌ವೆಲ್‌, ಭಾಸ್ಕರ ಚಂದ್ರ ಶೆಟ್ಟಿ, ಪ್ರಮೋದ್‌, ಜಗದೀಶ್‌,
ಪ್ರದೀಪ್‌ ಪಂಪ್‌ವೆಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next