Advertisement

ನಿಷ್ಠೆಯಿದ್ದಾಗ ಸುಂದರ ಬದುಕು : ಶ್ರೀನಿವಾಸ್‌ ಸಾಫಲ್ಯ

12:11 PM Jul 22, 2018 | |

ಮುಂಬಯಿ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಸೈಂಟ್‌ ಕ್ಸೇವಿಯರ್ ಕಾಲೇಜು ಮೆಟ್ರೋ  ಇಲ್ಲಿ ಗ್ರಾಜ್ಯುವೇಷನ್‌ ದಿನಾಚರಣೆಯು ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

Advertisement

ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡ ಶ್ರೀನಿವಾಸ ಸಾಫಲ್ಯ ಅವರು 150 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸೈಂಟ್‌ ಕ್ಸೇವಿಯರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯನ್ನು ಉದ್ದೇಶಿಸಿ ಮಾತನಾಡಿ, ನಿರಂತರವಾದ ಪರಿಶ್ರಮ, ನಿಷ್ಠೆ  ಹಾಗು   ನಿರಂತರ  ಜ್ಞಾನದ ದಾಹ, ವ್ಯಕ್ತಿಯ ಬದುಕನ್ನು  ರೂಪಿಸುವ  ಮಂತ್ರವಾಗಿದೆ.  ವಿದ್ಯೆಯೊಂದಿಗೆ  ಜೀವನದ ಮೌಲ್ಯವನ್ನು ಬೆಳೆಸುವ ಪ್ರಯತ್ನ ಅಗತ್ಯವಾಗಿದೆ. ಬದುಕು ನಿಂತ ನೀರಾಗಬಾರದು. ಅದು ಸದಾ ಹರಿಯುವ ನೀರಾಗಬೇಕು.  ಜ್ಞಾನದ ಜಿಜ್ಞಾಸೆ ಜೀವನದ ಕೊನೆಯತನಕ ಮೂಡಬೇಕು. ಅದರಿಂದ ಬದುಕು ಸುಗಮಯವಾಗುತ್ತದೆ. ವಿದ್ಯೆ  ಬರೀ ಕೇವಲ ಅಂಕ ಪಡೆಯುವುದು ಅಲ್ಲದೆ ಅದು ಜನರ ಹಾಗು ದೇಶದ ಪ್ರಗತಿಗೆ ಪೂರಕವಾಗಬೇಕು ಎಂದು ನುಡಿದು  ವಿದ್ಯಾರ್ಥಿಗಳಿಗೆ ಪದವಿ  ಪ್ರಮಾಣ ಪತ್ರ ಪ್ರದಾನಿಸಿ ಶುಭ ಕೋರಿದರು. 

ವೇದಿಕೆಯಲ್ಲಿ ಡಾ| ಬ್ಯಾಪ್ಟಿಸ್ಟ್‌ ಆಗ್ನೆಲ್‌ ಮೆನೆಜ್‌Õ,  ಪ್ರಾಂಶುಪಾಲ ಫಾದ| ಎರೋìಲ್‌ ಫೆರ್ನಾಂಡಿಸ್‌, ಉಪಪ್ರಾಂಶುಪಾಲ ಡಾ| ಕಾನ್ರಾಡ್‌ ಪೆಸೊÕà ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next