Advertisement

ಸುಂದರ ಕಾವ್ಯ!

05:25 PM Oct 30, 2017 | |

“ಐ ಆ್ಯಮ್‌ ಇನ್‌ ಲವ್‌’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಕಾವ್ಯ ಶೆಟ್ಟಿ. ಆ ಚಿತ್ರವಾಗುತ್ತಿದ್ದಂತೆಯೇ “ನಮ್‌ ದುನಿಯಾ ನಮ್‌ ಸ್ಟೈಲ್‌’ ಎಂಬ ಚಿತ್ರದಲ್ಲೂ ಒನ್‌ ಆಫ್ ದಿ ನಾಯಕಿಯಾಗಿದ್ದರು. ಆ ನಂತರ ತೆಲುಗು-ತಮಿಳಿಗೆ ಅಂತ ಹೋದವರು, ಎರಡು ವರ್ಷ ಈ ಕಡೆ ಬಂದಿರಲಿಲ್ಲ.  “ಇಷ್ಟಕಾಮ್ಯ’ ಮೂಲಕ ಬಿಗ್‌ ಬ್ಯಾಂಗ್‌ ಎಂಟ್ರಿಕೊಟ್ಟ ಅವರು, ಆ ನಂತರ ಕನ್ನಡದಲ್ಲಿ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. “ಜೂಮ್‌’ ಆಯಿತು, “ಸ್ಮೈಲ್‌ ಪ್ಲೀಸ್‌’ ಮತ್ತು “ವಿಜಯಾದಿತ್ಯ’ ಮುಗಿಯಿತು. ಈಗ “ಸಿಲಿಕಾನ್‌ ಸಿಟಿ’ ಚಿತ್ರದಲ್ಲಿ ಕಾವ್ಯ ಬಿಝಿಯಾಗಿದ್ದಾರೆ. ಸರಿ ಹೇಗಿದೆ ಜೀವನ ಎಂದು ಕೇಳ್ಳೋಣವಾಯಿತು. ಕಾವ್ಯ ಜಾಸ್ತಿ ಮಾತಾಡುವವರಲ್ಲ. ಗಂಭೀರವಾಗಿ ಕೇಳಿದರೂ, ಕಿಚಾಯಿಸಿದರೂ, ಅದೆಷ್ಟೇ ಕೆದಕಿದರೂ … ಅವರ ಉತ್ತರ ನಾಲ್ಕೈದು ವಾಕ್ಯಗಳನ್ನು ಮೀರುವುದಿಲ್ಲ. ಅಷ್ಟನ್ನೇ ಓದಿಕೊಂಡು ತೃಪ್ತರಾಗಿ.

Advertisement

ಯಾವ ತರಹದ ಪಾತ್ರಗಳು ಸಿಗುತ್ತಿವೆ?
ಸ್ಪೆಸಿಫಿಕ್‌ ಅಂತೇನಿಲ್ಲ. ಎಲ್ಲಾ ತರಹದ ಪಾತ್ರಗಳು ಸಿಗ್ತಿವೆ. ನಾನು ಒಳ್ಳೆಯ ಪಾತ್ರಗಳನ್ನ ಎದುರು ನೋಡುತ್ತಿದ್ದೇನೆ.

ಒಳ್ಳೆಯ ಪಾತ್ರಗಳೆಂದರೆ?
ಸುಮ್ಮನೆ ಬಂದು ಹೋಗೋದಲ್ಲ. ಸ್ವಲ್ಪವಾದರೂ ಮೈಲೇಜ್‌ ಇರಬೇಕು. ಅಂತಹ ಪಾತ್ರಗಳನ್ನ ಹುಡುಕುತ್ತಿದ್ದೇನೆ.

ಬೇರೆ ಭಾಷೆಗಳಲ್ಲೇನಾದರೂ ಅವಕಾಶ?
ಒಂದಿಷ್ಟು ಮಾತುಕತೆ ನಡೆಯುತ್ತಿದೆ. ಯಾವ ಚಿತ್ರವನ್ನೂ ಸದ್ಯಕ್ಕೆ ಸೈನ್‌ ಮಾಡಿಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತಾ ಮಾಡುತ್ತೇನೆ.

Advertisement

ಹೌದು, ನೀವು ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ಕಾಲೇಜಿನಲ್ಲೋದುವಾಗಲೇ ಸಣ್ಣ-ಪುಟ್ಟ ಮಾಡಲಿಂಗ್‌ ಮಾಡುತ್ತಿದ್ದೆ. ಆಮೇಲೆ ಕ್ಯಾಪ್‌ ಜೆಮಿನಿ ಸಂಸ್ಥೆಯಲ್ಲಿ ಇಂಟರ್‌°ಶಿಪ್‌ ಮಾಡುವಾಗ, ಮಾಡೆಲಿಂಗ್‌ಗೆ ಅವಕಾಶ ಸಿಕ್ಕಿತು. ಆಮೇಲೆ ಒಂದರ ಹಿಂದೆ ಒಂದು ಆ್ಯಡ್‌ನ‌ಲ್ಲಿ ಕಾಣಿಸಿಕೊಂಡೆ. ಅಷ್ಟರಲ್ಲಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತು.

ಮಾಡೆಲಿಂಗ್‌ನಿಂದ ಬಂದವರು ಅದನ್ನು ಬಿಟ್ಟೇಬಿಟ್ರಾ?
ಅಲ್ಲಿ ಹೆಸರು ಮುಖ್ಯ ಅಲ್ಲ. ಬರೀ ಮುಖ್ಯ. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಹೆಚ್ಚು ಕೆಲಸವಿರಲ್ಲ. ಒಂದೋ, ಎರಡೋ ದಿನಗಳ ಕೆಲಸ. ಎಲ್ಲಾ ಒಂದೇ ತರಹ. ಸ್ವಲ್ಪ ದಿನವಾದ ಮೇಲೆ ಬೋರ್‌ ಆಗೋಕೆ ಶುರುವಾಗತ್ತೆ. ಇಲ್ಲಿ ಪ್ರತಿ ದಿನ ಹೊಸ ತರಹ ಇರತ್ತೆ. ಜೊತೆಗೆ, ಇಲ್ಲಿ ತುಂಬಾ ಶ್ರಮಪಡಬೇಕು. ನನಗೆ ಇದೇ ಇಷ್ಟ.

ಹಾಗಾದರೆ ಪ್ರತಿ ಚಿತ್ರಕ್ಕೂ, ಪ್ರತಿ ಪಾತ್ರಕ್ಕೂ ತುಂಬಾ ಶ್ರಮ ಹಾಕ್ತೀರಾ ಎನ್ನಿ?
ಶ್ರಮ ಹಾಕೋದರ ಜೊತೆಗೆ, ಇಲ್ಲಿ ತುಂಬಾನೇ ಕಲಿತಿದ್ದೀನಿ. ಇಲ್ಲಿ ಆರಂಭದಿಂದ ಕೊನೆಯವರೆಗೂ ಪ್ರತಿಯೊಂದು ವಿಷಯವನ್ನೂ ನಾವೇ ನೋಡಿ ಕಲಿಯಬೇಕು

ನಿಮ್ಮ ಮೈನಸ್‌ ಏನಂತ ಅನಿಸುತ್ತೆ?
ನನ್ನ ಹೈಟು ಮತ್ತು ಕಲರ್‌. 5.7 ಅಡಿ ಇದ್ದೀನಿ ನಾನು. ಅಷ್ಟು ಹೈಟಿನ ಹೀರೋಗಳು ಇಲ್ಲಿ ಕಡಿಮೆ. ಅದೇ ಮೈನಸ್‌ ನನಗೆ. ನಾನು ಹೀಲ್ಸ್‌ ಹಾಕಲ್ಲ. ಆದರೂ ಸ್ವಲ್ಪ ಉದ್ಧವೇ. ಅದೇ ಮೈನಸ್‌ ಆಗುತ್ತಿರಬೇಕು.

ನಿಮ್ಮ ಆಯ್ಕೆಯಲ್ಲಿ ಮನೆಯವರ ಪಾತ್ರವಿದೆಯೋ?
ಅಪ್ಪ-ಅಮ್ಮ ಇದರಲ್ಲೆಲ್ಲಾ ಇಲ್ಲ. ಅವರನ್ನು ಕರೆದರೂ ಬರಲ್ಲ. ಎಲ್ಲಾ ನಂದೇ ನಿರ್ಧಾರ.

ಎಲ್ಲರಿಗೂ ಬಾಲಿವುಡ್‌ಗೆ ಹೋಗೋಕೆ ಆಸೆ ಇರುತ್ತೆ. ನಿಮಗೆ?
ಬಾಲಿವುಡ್‌ ಅಷ್ಟು ಸುಲಭ ಅಲ್ಲ. ಅಲ್ಲೇ ತುಂಬಾ ಜನ ಇದ್ದಾರೆ. ಒಳ್ಳೆಯ ಅವಕಾಶ ಬಂದರೆ ನೋಡೋಣ …

ಇದುವರೆಗೂ ಯಾರೂ ಐಟಂ ಡ್ಯಾನ್ಸ್‌ ಮಾಡಿ ಅಂತ ಕೇಳಿಲ್ವಾ?
ಐಟಂ ಡ್ಯಾನ್ಸ್‌ ಇದುವರೆಗೂ ಮಾಡಿಲ್ಲ. ನಾನು ಡ್ಯಾನ್ಸ್‌ನಲ್ಲಿ ಅಷ್ಟೇನೂ ಚುರಕಲ್ಲ. ಇನ್ನು ಐಟಂ ಡ್ಯಾನ್ಸ್‌ನಲ್ಲಿ ಕಾಣಿಸಿಕೊಳ್ಳಬೇಕೋ, ಬೇಡವೋ ಎಂದು ಯೋಚಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next