Advertisement

ಮಕ್ಕಳ ಕಳ್ಳರೆಂದು ಭಾವಿಸಿ ಥಳಿತ

05:38 PM May 18, 2018 | |

ಸಿದ್ದಾಪುರ (ಕೊಪ್ಪಳ): ಕೆಂಪು ಬಣ್ಣದ ಕಾರಿನಲ್ಲಿ ಮಕ್ಕಳ ಕಳ್ಳರು ಬರುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಕಾರಿನಲ್ಲಿದ್ದ ಒರ್ವ ವ್ಯಕ್ತಿ ಹಾಗೂ ಒರ್ವ ಮಹಿಳೆಯನ್ನು ಮೂರ್‍ನಾಲ್ಕು ಊರಿನ ಗ್ರಾಮಸ್ಥರು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಕಾರನ್ನು ಕಟ್ಟಿಗೆ ಮತ್ತು ಕಬ್ಬಿಣದಿಂದ ಒಡೆದು ಕಾರನ್ನು ನುಜ್ಜು ಗುಜ್ಜುಗೊಳಿಸಿದ ಘಟನೆ ಸಮೀಪದ ಗುಂಡೂರು ಗ್ರಾಮದ ಹತ್ತಿರ ಗುರುವಾರ ಸಂಜೆ ನಡೆದಿದೆ.

Advertisement

ಥಳಿತಕ್ಕೊಳಗಾದ ವ್ಯಕ್ತಿ ಮತ್ತು ಮಹಿಳೆ ಗಂಗಾವತಿ ತಾಲೂಕಿನ ಶ್ರೀರಾಮನಗರದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಶ್ರೀರಾಮನಗರದ ಮೂಲದವರಾದ ಒರ್ವ ವ್ಯಕ್ತಿ ಒರ್ವ ಮಹಿಳೆ ತಾವರಗೇರಾ ಕಡೆಯಿಂದ ಕಾರಿನಲ್ಲಿ ನವಲಿ ಮಾರ್ಗದ ಮೂಲಕ ಶ್ರೀರಾಮನಗರದತ್ತ ಬರುವಾಗ ನವಲಿ ಹತ್ತಿರ ಪುರುಷ ಮಹಿಳೆ ಕುಳಿತುಕೊಂಡಿದ್ದ ಕಾರು ಆಟೋವೊಂದಕ್ಕೆ ಡಿಕ್ಕಿ ಹೊಡಿದೆ. ಡಿಕ್ಕಿ ಹೊಡೆದ ನಂತರ ಕಾರು ನಿಲ್ಲಿಸದೆ ಅಲ್ಲಿಂದ ವೇಗವಾಗಿ ಕಾರು ಚಲಾಯಿಸಿದ್ದಾನೆ. ಆಟೋ ಮಾಲಿಕ ಮತ್ತು ತನ್ನ ಸ್ನೇಹಿತರೊಂದಿಗೆ ಈ ಕೆಂಪು ಕಾರನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ ಇವರು ಬೈಕ್‌ನಲ್ಲಿ ಕಾರನ್ನು ಫಾಲೋ ಮಾಡುತ್ತಿರುವುದನ್ನು ಗಮನಿಸಿದ ರಸ್ತೆಗುಂಟಾ ಇರುವ ವಿವಿಧ ಗ್ರಾಮಸ್ಥರು ಮಕ್ಕಳ ಕಳ್ಳರು ಎಂದು ಈ ಕಾರನ್ನು ಫಾಲೋ ಮಾಡಿದ್ದಾರೆ. ದುರದೃಷ್ಟಾವಶಾತ್‌ ಗುಂಡೂರು ಗ್ರಾಮದ ತಿರುವಿನ ಬಳಿ ಕಾರಿನ ಟೈಯರ್‌ ಬ್ಲಾಸ್ಟ್‌ ಆಗಿದೆ ಎನ್ನಲಾಗಿದೆ.

ಈ ವೇಳೆ ಕಾರಿನಲ್ಲಿದ್ದ ಮಹಿಳೆ ಮತ್ತು ಪುರುಷ ಕಾರನ್ನು ಬಿಟ್ಟು ಒಡಲಾರಂಭಿಸಿದ್ದಾರೆ. ಈ ವೇಳೆ ಕಾರಿನ ಹಿಂದೆ ಫಾಲೋ ಮಾಡುತ್ತಿದ್ದ ನೂರಾರು ಜನರು ಏಕಾಏಕಿ ಇಬ್ಬರನ್ನು ಥಳಿಸಿದ್ದಾರೆ. ನಾವು ಮಕ್ಕಳ ಕಳ್ಳರು ಅಲ್ಲ. ಶ್ರೀರಾಮನಗರದವರು ಎಂದು ತಮ್ಮಲ್ಲಿದ್ದ ಆಧಾರ ಕಾರ್ಡ್‌
ತೋರಿಸಿದರು ಸಹ ನೂರಾರು ಜನರು ಯಾವುದನ್ನು ಲೆಕ್ಕಿಸದೆ ಈ ಇಬ್ಬರನ್ನು ಥಳಿಸಿ ಕಾರನ್ನು ಊರುಳಿಸಿ ಕಟ್ಟಿಗೆ ಮತ್ತು ಕಬ್ಬಿಣದಿಂದ ‌ ಕಾರನ್ನು ನುಜ್ಜು ಗುಜ್ಜುಗೊಳಿಸಿದ್ದಾರೆ.
ನಂತರ ಘಟನಾ ಸ್ಥಳಕ್ಕೆ ಬಂದ ಕಾರಟಗಿ ಪೊಲೀಸರು ಜನರಿಂದ ಥಳಿತಕ್ಕೊಳಗಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆ ಸೇರಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next