Advertisement

Bear: ಶಿವಮೊಗ್ಗ ನಗರದಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್ ಹೋದವರ ಮೇಲೆ ಕರಡಿ ದಾಳಿ…

08:23 AM Feb 28, 2024 | Team Udayavani |

ಶಿವಮೊಗ್ಗ: ಚಿರತೆ, ಕಾಡಾನೆ ಕಾಡು ಬಿಟ್ಟು ನಾಡಿನತ್ತ ಹೆಜ್ಜೆ ಹಾಕುತ್ತಿರುವುದು ಹೊಸತೇನು ಅಲ್ಲ ಆದರೆ ಈ ಬಾರಿ ಕರಡಿಯೊಂದು ನಗರ ಪ್ರದೇಶದಲ್ಲಿ ಕಂಡು ಬಂದಿದ್ದು ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವವರ ಮೇಲೆ ದಾಳಿ ನಡೆಸಿದ ಘಟನೆ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.

Advertisement

ಘಟನೆಯಲ್ಲಿ ತುಕಾರಂ ಶೆಟ್ಟಿ ಎಂಬುವವರ ಹೊಟ್ಟೆಯ ಭಾಗಕ್ಕೆ ತರಚಿದ ಗಾಯಗಳಾಗಿವೆ.

ಸೋಮವಾರ ಬೆಳಗ್ಗೆ ತುಕಾರಾಂ ಶೆಟ್ಟಿ ಅವರು ವಾಕಿಂಗ್ ಹೋದ ವೇಳೆ ಕರಡಿಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿವೆ ಈ ವೇಳೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಬಂದ ಕರಡಿ ತುಕಾರಾಂ ಅವರ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ.

ಘಟನೆ ನಡೆದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಅರಣ್ಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಕರಡಿ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಗೋಪಾಲಗೌಡ ಬಡಾವಣೆಯ ಎಫ್‌ ಬ್ಲಾಕ್‌ನಲ್ಲಿರವ ಡಿವಿಜಿ ಪಾರ್ಕ್‌ ಸಮೀಪ ಕರಡಿ ಪ್ರತ್ಯಕ್ಷವಾಗಿದ್ದು ಇದೀಗ ಅಲ್ಲಿನ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

Advertisement

ಇದನ್ನೂ ಓದಿ: MESCOM ವ್ಯಾಪ್ತಿಯಲ್ಲೂ ಶೀಘ್ರವೇ ಬರಲಿದೆ ಪ್ರಿಪೇಯ್ಡ ಮೀಟರ್‌, ಸ್ಮಾರ್ಟ್‌ ಮೀಟರ್‌

Advertisement

Udayavani is now on Telegram. Click here to join our channel and stay updated with the latest news.

Next