Advertisement

ಅಂಜನಾದ್ರಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಕರಡಿ, ಚಿರತೆ ಆತಂಕದಲ್ಲಿ ಭಕ್ತರು

04:01 PM Oct 24, 2019 | keerthan |

ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಕಳೆದ ಒಂದು ವಾರದ ಹಿಂದಿನಿಂದಲೂ ಚಿರತೆ, ಕರಡಿ ಹಾವಳಿ ಹೆಚ್ಚಾಗಿದ್ದು ಬುಧವಾರ ರಾತ್ರಿ ಕರಡಿ ಅಂಜನಾದ್ರಿ ಬೆಟ್ಟದ ಮೇಲಿನ ದೇಗುಲದ ಬಳಿ ಆಗಮಿಸಿ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ. ದೇಗುಲದ ಬಳಿ ಪ್ಲಾಸ್ಟಿಕ್ ಡಬ್ಬಿ ಇತರೆ ಸಾಮಾನುಗಳಲ್ಲಿ ತಿನ್ನುವ ಪದಾರ್ಥಗಳ ಬಗ್ಗೆ ತಡಕಾಡಿದ ದೃಶ್ಯ ದೇಗುಲದ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದೆ.

Advertisement

ಭೀತಿಯಲ್ಲಿ ಅಂಜನಾದ್ರಿ ಭಕ್ತರು: ಕರಡಿ ಚಿರತೆ ಪ್ರಾಣಿಗಳು ಅಂಜನಾದ್ರಿ ಯಲ್ಲಿ ಪ್ರತ್ಯಕ್ಷವಾಗಿರುವ ಕಾರಣ ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಭಯವನ್ನುಂಟು ಮಾಡಿದೆ. ಕಳೆದ ವಾರ ಎರಡು ಚಿರತೆಗಳು ಕಂಡು ಬಂದಿದ್ದವು. ಭಕ್ತರು ಬೆಳಗಿನ ಜಾವ ದೇಗುಲಕ್ಕೆ ಆಗಮಿಸುತ್ತಿದ್ದು ಕರಡಿ ಚಿರತೆ ದಾಳಿ ಮಾಡುವ ಸಂಭವ ಇರುವುದರಿಂದ ಕೂಡಲೇ ಸೆರೆ ಹಿಡಿಯುವಂತೆ ದೇಗುಲ ಸಮಿತಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next