Advertisement
ತುಮಕೂರು ಸಿದ್ಧಗಂಗಾ ಮಠದ ಬಳಿ ಕರಡಿ ಸಂಚಾರದ ಕುರಿತು ಅರಣ್ಯಾಧಿಕಾರಿಗಳಿಗೆ ಎರಡು ತಿಂಗಳ ಹಿಂದೆಯೇ ಮಾಹಿತಿ ದೊರಕಿತು ಹಾಗೂ ವೀಡಿಯೋಗಳು ವೈರಲ್ ಆಗಿ ಆತಂಕ ಮೂಡಿಸಿತ್ತು. ಹೀಗಾಗಿ ಕರಡಿ ಸೆರೆ ಹಿಡಿಯಲು ಬೋನು ಇಡಲಾಗಿತ್ತು. ಶನಿವಾರ ರಾತ್ರಿ ಬೋನಿಗೆ ಬಿದ್ದ ಕರಡಿಯನ್ನು ರವಿವಾರ ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಬನ್ನೇರುಘಟ್ಟ ಉದ್ಯಾನಕ್ಕೆ ಕರೆದೊಯ್ದಿದ್ದರು.
ಕರಡಿ ಉದ್ಯಾನ ಸಮೀಪದ ಹುಚ್ಚನ ಕೆರೆ ಸಮೀಪ ಅಡಗಿರುವ ಸಾಧ್ಯತೆ ಇದ್ದು, ಎರಡು ತಂಡಗಳ ಮೂಲಕ ಕೂಂಬಿಂಗ್ ಮಾಡಲಾಗುತ್ತಿದೆ. ಜನ ಓಡಾಡುವ ಜಾಗದಲ್ಲಿ ಭದ್ರತೆ ಸಲುವಾಗಿ ಹೆಚ್ಚಿನ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಬೋನಿನ ಕೆಳಭಾಗದ ಶೀಟ್ ಕಿತ್ತಿತ್ತುತುಮಕೂರಿನಿಂದ ಬನ್ನೇರುಘಟ್ಟಕ್ಕೆ ತರುವ ಮಾರ್ಗ ಮಧ್ಯದಲ್ಲೇ ಬೋನಿನ ಕೆಳಭಾಗದಲ್ಲಿ ಇದ್ದ ಕಬ್ಬಿಣದ ಶೀಟನ್ನು ಕೀಳಲು ಪ್ರಯತ್ನಿಸಿ ಸಡಿಲ ಮಾಡಿತ್ತು. ವಾಹನದಿಂದ ಬೋನನ್ನು ಕೆಳಗಿಳಿಸುವ ಸಂದರ್ಭದಲ್ಲಿ ಕರಡಿ ಜಿಗಿದಿದೆ.