ಹೊಳೆಹೊನ್ನೂರು: ಸಮೀಪದ ಅಗಸನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಕರಡಿಯೊಂದು ವ್ಯಕ್ತಿ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಆನಂದಪ್ಪ ಎಂಬವರ ಮೇಲೆ ಕರಡಿ ದಾಳಿ ನಡೆಸಿದೆ ಅವರ ಮನೆ ಗ್ರಾಮದಿಂದ ಸ್ವಲ್ಪ ದೂರದಲ್ಲೇ ಇದ್ದು, ಎಂದಿನಂತೆ ಬೆಳಿಗ್ಗೆ ಎದ್ದು ತಮ್ಮ ದಿನ ನಿತ್ಯ ಕಾರ್ಯಗಳಲ್ಲಿ ತೊಡಗಿದ್ದು, ಎಲ್ಲಿದ್ದಲೂ ಬಂದ ಕರಡಿಯೊಂದು ಏಕಾಏಕಿ ದಾಳಿ ನಡೆಸಿದ್ದು, ಮೈ, ಕೈ, ಕಾಲಿಗೆ ಮೇಲೆ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಗ್ರಾಮದ ಹತ್ತಿರ ಯಾವುದೇ ಕಾಡು ಇಲ್ಲ. ಕಾಡಿಗೆ ಹೋಗಬೇಕಾದರೇ ಸುಮಾರು 15 ರಿಂದ 20 ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಆದರೆ ದಿಡೀರ್ ಎಂದು ಕರಡಿಯೊಂದು ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ತಕ್ಷಣವೇ ಅರಣ್ಯ ಇಲಾಖೆ ಕರಡಿಯನ್ನು ಬಂದಿಸಿ ಕಾಡಿಗೆ ಬಿಡಬೇಕು ಎಂದು ಗ್ರಾಮಸ್ಥರ ಮನವಿಯಾಗಿದೆ.
ಅರಕೆರೆ, ಅರಬಿಳಚಿ, ವಡ್ಡರಹಟ್ಟಿ, ಮಾರಶೆಟ್ಟಿಹಳ್ಳಿ, ತಿಮ್ಲಾಪುರ ಗ್ರಾಮಗಳ ಮುಖಾಂತರ ಅಗಸನಹಳ್ಳಿ ಗ್ರಾಮಕ್ಕೆ ಬಂದಿದೆ.
ಸುತ್ತಮುತ್ತಲಿನ ಗ್ರಾಮಗಳ ಕೆಲವು ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮಾರದಲ್ಲಿ ಕರಡಿ ಹಾದೂ ಹೋಗಿರುವ ದೃಶ್ಯಗಳು ಸೆರೆಯಾಗಿದ್ದು, ಕೆಲವು ಗ್ರಾಮ ಜನರ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ.
ಮನುಷ್ಯರ ಮೇಲೆ ದಾಳಿ ನಡೆಸಿರುವ ಕರಡಿ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ಆತಂಕ ಮೂಡಿದೆ. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತು, ಕರಡಿಯನ್ನು ಸೆರೆ ಹಿಡಿದು ಕಾಡಿಗೆ ಬಿಡುವಂತೆ ಸಾರ್ವಜನಿಕರ ಆಗ್ರಹವಾಗಿದೆ.