Advertisement

ಅಪರಾಧ ಪ್ರಕರಣ ನಿಯಂತ್ರಿಸಲು ಜಾಗೃತರಾಗಿ

04:15 PM Sep 28, 2020 | Suhan S |

ಹಾಸನ: ಅಪರಾಧ ಪ್ರಕರಣ ನಿಯಂತ್ರಿಸಲು ಪೊಲೀಸರು ರಾತ್ರಿ ವೇಳೆ ಪೂರ್ಣ ಪ್ರಮಾಣದಲ್ಲಿ ಜಾಗೃತರಾಗಿರಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಖಡಕ್‌ ಎಚ cರಿಕೆ ನೀಡಿದ್ದಾರೆ.

Advertisement

ನಗರದ ಎನ್‌.ಆರ್‌. ವೃತ್ತದಲ್ಲಿರುವ ನಗರ ಪೊಲೀಸ್‌ ಠಾಣೆ ಆವರಣದಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಅವರು, ರಾತ್ರಿ ಸಮಯದಲ್ಲಿ ಅನಾವಶ್ಯಕವಾಗಿ ಓಡಾಡುವ ಪೋಲಿ, ಪುಂಡರು, ಕುಡುಕರು, ಅನುಮಾನಾಸ್ಪದವಾಗಿ ಓಡಾಡುವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆಗಳ್ಳರ ಮತ್ತಿತರ ಅಪರಾಧ ಹಿನ್ನೆಲೆಯುಳ್ಳವರನ್ನು ಪತ್ತೆ ಹಚ್ಚಿ ಬಿಸಿ ಮುಟ್ಟಿಸಬೇಕು ಎಂದು ತಾಕೀತು ಮಾಡಿದ್ದಾರೆ. ರಾತ್ರಿ ವೇಳೆ ಯಾರಾದರೂ ಅನುಮಾನಸ್ಪದವಾಗಿ ಓಡಾಡುವರು ಕಂಡು ಬಂದರೇ ತಕ್ಷಣ ವಿಚಾರಣೆ ಮಾಡಬೇಕು. ಅನಾವಶ್ಯಕವಾಗಿ ಓಡಾಡುವವರ ವಾಹನದ ಸಂಖ್ಯೆ, ಹೆಸರು ದಾಖಲಿಸಿ ಬಿಸಿ ಮುಟ್ಟಿಸುವಂತೆ ರಾತ್ರಿ ವೇಳೆ ಗಸ್ತುತಿರುಗುವ ಪೊಲೀಸರಿಗೆ ಸೂಚನೆ ನೀಡಿದರು.

ವಿಕೃತ ಕಾಮಿಗೆ ಹುಡುಕಾಟ: ನಗರದ ಉತ್ತರ ಬಡಾವಣೆಯ ಅಂಗಡಿಯಲ್ಲಿ ಕುಳಿತಿದ್ದ ಒಂಟಿ ಮಹಿಳೆಯ ಮುಂದೆ ವಿಕೃತವಾಗಿ ವರ್ತಿಸಿದ ಕಾಮುಕನ ಪತ್ತೆಗೆ ಪೊಲೀಸರು ಹುಟುಕಾಟ ಆರಂಭಿಸಿದ್ದಾರೆ. ಶನಿವಾರ ಮಧ್ಯಾಹ್ನ ಅಂಗಡಿಯ ಮಾಲಿಕನು ಕೆಲಸದ ನಿಮಿತ್ತ ಹೊರಗೆ ಹೋದಾಗ ತನ್ನ ಪತ್ನಿಯನ್ನು ಅಂಗಡಿಯಲ್ಲಿ ಬಿಟ್ಟು ಹೋಗಿದ್ದರು. ಆ ಸಂದರ್ಭದಲ್ಲಿ ಯುವಕನೊಬ್ಬ ಅಂಗಡಿ ಬಳಿ ಬಂದು ತನ್ನ ಪ್ಯಾಂಟ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ತನ್ನ ಮೊಬೈಲ್‌ನಲ್ಲಿ ವಿಕೃತ ಯುವಕನ ಫೋಟೋ ಕ್ಲಿಕ್‌ ಮಾಡಿ ತನ್ನ ಪತಿಗೆ ತಕ್ಷಣ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಸ್ಥಳಕ್ಕೆ ಬಂದ ಪತಿ ಹಾಸನ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ ನಂತರ ಪೊಲೀಸರು ಆರೋಪಿಯನ್ನು ಪತ್ತೆ ಮಾಡಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next