Advertisement

ಶಾಲಾ ವಾಹನಗಳಲ್ಲಿ ನಿಯಮ ಪಾಲನೆಯಾಗಲಿ

02:58 AM Jun 30, 2019 | Team Udayavani |

ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಬಾಡಿಗೆ ವಾಹನಗಳು ಪಾಲಿಸಬೇಕಾದ ಅನೇಕ ನಿಯಮಗಳಿದ್ದರೂ ನಗರದಲ್ಲಿ ಸಂಚರಿಸುವ ಕೆಲವೊಂದು ಶಾಲಾ ವಾಹನಗಳಿಂದ ಇವುಗಳ ಪಾಲನೆಯಾಗುತ್ತಿಲ್ಲ.

Advertisement

ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮ ಮಾಡಿದ್ದರೂ, ಈ ಬಗ್ಗೆ ಸಂಬಂಧಪಟ್ಟವರು ಚಿಂತಿಸುತ್ತಿಲ್ಲ. ಈ ರೀತಿಯ ಪ್ರಕರಣವನ್ನು ನಗರ ಸಂಚಾರಿ ಪೊಲೀಸರು ಈಗ ಗಂಭೀರವಾಗಿ ಪರಿಗಣಿಸಿ, ಪ್ರತ್ಯೇಕ ತಂಡ ರಚಿಸಿ ಕಾನೂನು ಉಲ್ಲಂಘಿಸುವ ಶಾಲಾ ವಾಹನಗಳನ್ನು ಕಾರ್ಯಾಚರಣೆ ನಡೆಸಲು ಮುಂದಾಗಬೇಕಾಗಿದೆ.

ಮೋಟಾರು ವಾಹನ ಕಾಯ್ದೆ 1988ರ ಕಲಂ 74ರ ಪ್ರಕಾರ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಒಪ್ಪಂದ ವಾಹನ ರಹದಾರಿ ಹೊಂದಿರಬೇಕು. ಆದರೆ ನಗರದಲ್ಲಿ ಹೆಚ್ಚಾಗಿ ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದು, ಇದು ಕಾನೂನು ಉಲ್ಲಂಘನೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಗೋವಾ ರಾಜ್ಯದ ನೋಂದಣಿ ಹೊಂದಿದ ಖಾಸಗಿ ವಾಹನಗಳಲ್ಲಿಯೂ ಶಾಲಾ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ.

ಕಾಯ್ದೆಯ ಪ್ರಕಾರ ವಾಹನದ ಒಳಭಾಗದಲ್ಲಿ ಸ್ಕೂಲ್ ಬ್ಯಾಗ್‌ ಇಡಲು ಸೂಕ್ತ ಸ್ಥಳಾವಕಾಶವಿರಬೇಕು. ಚಾಲಕರು ನೀಲಿಬಣ್ಣದ ಸಮವಸ್ತ್ರ ಮತ್ತು ಕಪ್ಪು ಬಣ್ಣದ ಜೂಟ್ ಧರಿಸಿರಬೇಕು. 12 ವರ್ಷದ ಒಳಗಿನ ಮಕ್ಕಳನ್ನು ಆಟೋ ರಿಕ್ಷಾದಲ್ಲಿ 6 ಮಂದಿಯನ್ನು ಹಾಗೂ ಆಮ್ನಿ ವಾಹನದಲ್ಲಿ 8 ಮಂದಿಯನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ. 12 ವರ್ಷಕ್ಕಿಂತ ಮೇಲಿನ ಮಕ್ಕಳನ್ನು ವಾಹನದ ಸೀಟುಗಳ ಸಾಮರ್ಥ್ಯದಷ್ಟೇ ಕರೆದೊಯ್ಯಬೇಕು ಎಂದಿದೆ. ಆದರೆ ಈ ನಿಯಮಗಳನ್ನು ನಗರದಲ್ಲಿ ಸಂಚರಿಸುವ ಕೆಲವೊಂದು ಶಾಲಾ ವಾಹನಗಳಲ್ಲಿ ಪಾಲನೆಯಾಗುತ್ತಿಲ್ಲ ಎಂಬುವುದು ವಿಪರ್ಯಾಸ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ.

– ನವೀನ್‌ ಭಟ್ ಇಳಂತಿಲ

Advertisement
Advertisement

Udayavani is now on Telegram. Click here to join our channel and stay updated with the latest news.

Next