Advertisement

ಅತಿಥಿ ಉಪನ್ಯಾಸಕರ ಸೇವಾ ವಿಲೀನತೆಯಾಗಲಿ

10:38 PM Jan 16, 2022 | Team Udayavani |

ಕೊಪ್ಪಳ: ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ ಸೇವಾ ವಿಲೀನತೆ ಮಾಡಬೇಕೆಂದು ಕಳೆದ 35 ದಿನಗಳಿಂದ ತರಗತಿ ಬಹಿಷ್ಕರಿಸಿ ಮುಷ್ಕರ ನಡೆಸಿದರೆ, ಸರ್ಕಾರ ನಮಗೆ ವೇತನ ಹೆಚ್ಚಳದ ಆಮಿಷ ತೋರಿಸಿ ಸೇವಾ ವಿಲೀನತೆಯ ಮಾತನ್ನೇ ಆಡಿಲ್ಲ.

Advertisement

ಸಂಕ್ರಮಣದಲ್ಲಿ ಸರ್ಕಾರ ನಮಗೆ ಕಹಿ ಸುದ್ದಿ ನೀಡಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಪ್ರತಿನಿಧಿ  ಡಾ| ದೇವೆಂದ್ರಸ್ವಾಮಿ ಏಕದಂಡಿಗಮಠ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ 15-20 ವರ್ಷಗಳಿಂದ ನಮ್ಮ ಸೇವೆ ಕಾಯಂಗೊಳಿಸಿ ಎಂದು ನಿರಂತರ ಹೋರಾಟ ಮಾಡುತ್ತಾ ಅತಿ ಕಡಿಮೆ ವೇತನ ಪಡೆಯುತ್ತಾ ಬಂದಿದ್ದೇವೆ. ಸರ್ಕಾರವು ನಮ್ಮ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಅಂತಿಮ ಹೋರಾಟ ಎಂಬಂತೆ 35 ದಿನಗಳಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದೇವೆ. ಆಗ ಸರ್ಕಾರವು ತಿಂಗಳೊಳಗೆ ಸಮಿತಿ ರಚಿಸಿ ವರದಿ ಬಂದ ಬಳಿಕ ನಿಮ್ಮ ಬೇಡಿಕೆ ಈಡೇರಿಸಲಿದ್ದೇವೆ ಎನ್ನುವ ಭರವಸೆ ನೀಡಿತ್ತು. ಆದರೆ ಶುಕ್ರವಾರ ಸಂಕ್ರಮಣದಂದು ಸರ್ಕಾರ ಸಮಿತಿಯ ಶಿಫಾರಸ್ಸಿನ ಅನುಸಾರ ಆದೇಶ ಹೊರಡಿಸಿದೆ. ಆ ಆದೇಶದಲ್ಲಿನ ಅಂಶಗಳೇ ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.

ನಮಗೆ ಈ ಮೊದಲು ವಾರಕ್ಕೆ 8 ಗಂಟೆ ಅವ ಧಿ ಬೋಧನೆಗೆ ಅವಕಾಶವಿತ್ತು. ಸರ್ಕಾರ ಈಗ 15 ಗಂಟೆ ಅವ ಧಿ ಬೋಧನೆಗೆ ಅವಕಾಶ ಕಲ್ಪಿಸಿದೆ. ಅಂದರೆ ರಾಜ್ಯದಲ್ಲಿ 14,500 ಅತಿಥಿ ಉಪನ್ಯಾಸಕರಿದ್ದು, ನಾವು ಮೊದಲು 8 ಗಂಟೆ ಅವ ಧಿ ಬೋಧನೆ ಮಾಡುತ್ತಿದ್ದೇವು. ಈಗ 15 ಗಂಟೆ ಅವಧಿ  ನಿಗ  ಪಡಿಸಿದ್ದರಿಂದ ಇಲ್ಲಿ ಇಬ್ಬರು ಮಾಡುವ ಬೋಧನೆ ಒಬ್ಬರಿಗೆ ಸಿಕ್ಕಂತಾಗಲಿದೆ. ಇದರಿಂದ ರಾಜ್ಯದಲ್ಲಿ ಇರುವ 14,500 ಅತಿಥಿ ಉಪನ್ಯಾಸಕರ ಪೈಕಿ 7,250 ಉಪನ್ಯಾಸಕರು ಹೊರಗೆ ಹೋಗಲಿದ್ದಾರೆ. ಇದೊಂದು ಅತ್ಯಂತ ಅವೈಜ್ಞಾನಿಕ ನೀತಿಯಾಗಿದೆ. ಇನ್ನು ಇಬ್ಬರಿಗೆ ಕೊಡುವ ವೇತನ ಒಬ್ಬರಿಗೆ ಕೊಡುವ ಕೆಲಸಕ್ಕೆ ಸರ್ಕಾರ ಮುಂದಾಗಿ ಈಗ ವೇತನ ಹೆಚ್ಚಿಸಿದೆ ಅಷ್ಟೇ ಎಂದರು. ನಮಗೆ 12 ತಿಂಗಳವರೆಗೂ ನೇಮಕ ಮಾಡಿಕೊಳ್ಳಬೇಕು. ಆದರೆ ಸರ್ಕಾರದ ಈಗಿನ ಆದೇಶದಲ್ಲಿ 10 ತಿಂಗಳ ಅವ ಧಿಗೆ ಎನ್ನುವ ಅಂಶ ನಮೂದಿಸಿದೆ.

ಅಲ್ಲದೇ, ನಮ್ಮ ಬೇಡಿಕೆ ಸೇವೆ ವಿಲೀನ ಮಾಡಬೇಕು ಎನ್ನುವುದಾಗಿತ್ತು. ಸರ್ಕಾರ ಅದ್ಯಾವ ಅಂಶವನ್ನೂ ಪರಿಗಣಿಸಿಲ್ಲ. ಬೋಧಿ ಸುವ ಹುದ್ದೆಗೆ ಹೊಸ ನೇಮಕಾತಿಯಾಗಿ ಯಾರಾದರೂ ಬಂದರೆ ನಾವು ಅಲ್ಲಿಂದ ಮನೆಗೆ ಹೋಗಬೇಕಾಗುತ್ತದೆ. ನಮಗೆ ಜೀವನ ಭದ್ರತೆಯೇ ಇಲ್ಲದಂತಾಗಲಿದೆ. ಸರ್ಕಾರವು ನಮಗೆ ವೇತನ ಹೆಚ್ಚಿಸಿದೆ. ಆದರೆ ಜೀವನದ ಭದ್ರತೆಯನ್ನೇ ಕೊಟ್ಟಿಲ್ಲ. ನಮ್ಮ ಬೇಡಿಕೆ ಸೇವೆ ಕಾಯಂಗೊಳಿಸಬೇಕು ಎನ್ನುವುದು ಮುಖ್ಯವಾಗಿದೆ. ಹಿಂದೆ ಸೇವೆಯನ್ನು ಕಾಯಂಗೊಳಿಸಿದ ಹಲವು ಉದಾಹರಣೆಗಳಿವೆ. ಹೈಕೋರ್ಟ್‌ ಸಹಿತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನಮ್ಮ ಮುಷ್ಕರ ಮುಂದುವರಿಯಲಿದೆ. ಸರ್ಕಾರ ಈಗ ಮಾಡಿರುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವೀರಣ್ಣ ಸಜ್ಜನರ್‌, ಡಾ| ಪ್ರಕಾಶ ಬಳ್ಳಾರಿ, ಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next