Advertisement

ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ

07:20 PM Nov 07, 2021 | Team Udayavani |

ಹೊಸದಿಲ್ಲಿ : ಪಕ್ಷ ಮತ್ತು ಜನಸಾಮಾನ್ಯರ ನಡುವೆ ನಂಬಿಕೆಯ ಸೇತುವೆಯಾಗಲು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸದಸ್ಯರಿಗೆ ಭಾನುವಾರ ಕರೆ ನೀಡಿದ್ದಾರೆ.

Advertisement

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿಯು “ಸೇವೆ, ನಿರ್ಣಯ ಮತ್ತು ಬದ್ಧತೆ ಹೊಂದಿದ್ದು “ಒಂದು ಕುಟುಂಬದ ಸುತ್ತ ಸುತ್ತುವುದಿಲ್ಲ” ಒಕ್ಕೂಟದ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿರುವುದನ್ನು ಉಲ್ಲೇಖಿಸಿ ಸಚಿವ ಭೂಪೇಂದರ್ ಯಾದವ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

“ಪ್ರಧಾನಿ ಮೋದಿಜಿಯವರು ತಮ್ಮ ಭಾಷಣದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮಂತ್ರವನ್ನು ಹೇಳಿದ್ದು, ಸಾಮಾನ್ಯ ಜನರು ಮತ್ತು ಪಕ್ಷದ ನಡುವೆ ನಂಬಿಕೆಯ ಸೇತುವೆಯಾಗಬೇಕು, ಪಕ್ಷದ ಇತಿಹಾಸವನ್ನು ಉಲ್ಲೇಖಿಸುವಾಗ ಅದು ಯಾವಾಗಲೂ ಸಾಮಾನ್ಯರಿಗೆ ಹತ್ತಿರವಿರುವ ಸಂಬಂಧ ಹೊಂದಿದೆ.” ಎಂದು ಹೇಳಿರುವುದಾಗಿ ಯಾದವ್ ತಿಳಿಸಿದರು.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ಅಧ್ಯಕ್ಷರು ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಪ್ರಸ್ತುತಿಯನ್ನು ನೀಡಿದರು ಎಂದು ಯಾದವ್ ಸುದ್ದಿಗಾರರಿಗೆ ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜನರ ವಿಶ್ವಾಸ ಗಳಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next