ಪ್ರತೀ ವಿದ್ಯಾರ್ಥಿಯು ಅವರದ್ದೇ ಆದ ಕೌಶಲ ಹೊಂದಿರುತ್ತಾರೆ. ಶಿಕ್ಷಣದ ಸಂದರ್ಭದಲ್ಲಿ ಇಂತಹ ಕೌಶಲಗಳ ಮೂಲಕ ಮುಂದಡಿ ಇಡಲು ಕಲಿಯಬೇಕು. ಅದಕ್ಕಾಗಿ ತನ್ನಲ್ಲಿರುವ ಸ್ಕಿಲ್‌ಗಳನ್ನೇ ಮುಖ್ಯವಾಗಿರಿಸಿ ಅದರಲ್ಲಿಯೇ ಅಭಿವೃದ್ಧಿ ಹೊಂದುವ ಗುಣ ಬೆಳೆಸಬೇಕು. ಆ ಮೂಲಕ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ.
Advertisement
.ನಿರುದ್ಯೋಗದ ಕೂಗು ಕೇಳಿಬರುತ್ತಿರುವುದು ಯಾಕೆ?ಕೃಷಿ, ಬೆಳೆಗಳು, ಕಾಫಿ, ಟೀ, ರಬ್ಬರ್, ಮೀನುಗಾರಿಕೆ, ಕ್ಯಾಟರಿಂಗ್ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಮಂಗಳೂರು ಉನ್ನತ ಸಾಧನೆ ಮಾಡಿದೆ. ಇಂತಹ ಕೊಡುಗೆ ಬೇರೆ ನಗರಕ್ಕೆ ಹೋಲಿಸಿದರೆ ಅದ್ವಿತೀಯ ಸಾಧನೆ ಎಂದೇ ಪರಿಗಣಿತವಾಗಿದೆ. ಆದರೆ, ಇದರ ಎಲ್ಲ ಭಾಗದ ಕಾರ್ಮಿಕರನ್ನು ನಾವು ಬೇರೆ ಜಿಲ್ಲೆ/ ರಾಜ್ಯಗಳಿಂದ ಕರೆತರುವಂತಾಗಿದೆ. ಅವರಿಗೆ ಉದ್ಯೋಗ ನೀಡುವ ನಾವು ಇಲ್ಲಿ ಕೆಲಸವಿಲ್ಲದೆ ನಿರುದ್ಯೋಗ ಎಂಬ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ನಿಜಕ್ಕೂ ಇಂತಹ ಸ್ಥಿತಿಯಲ್ಲಿ ಬದಲಾವಣೆ ಆಗಬೇಕಿದೆ. ನಮ್ಮ ನೆಲದಲ್ಲಿಯೇ ಉದ್ಯೋಗ ಅರಸುವ ಜಾಣ್ಮೆಯನ್ನು ಮೊದಲು ಕಲಿಯಬೇಕು. ಅಥವಾ ಅಂತಾರಾಷ್ಟ್ರೀಯವಾಗಿ ಮಾರುಕಟ್ಟೆ ವಿಸ್ತರಣೆಯ ಗುಣ ಬೆಳೆಸಬೇಕು.
ನೀವು ಸಹಜ ಸಂಗತಿ ಅರ್ಥಮಾಡಬೇಕು. ಯಾವುದೇ ಪ್ರಾಡಕ್ಟ್ ಅನ್ನು ನಾವು ರೆಡಿ ಮಾಡಿದ್ದೇವೆ ಎಂದಿಟ್ಟುಕೊಳ್ಳಿ. ಅದನ್ನು ನಾವು ನಮ್ಮ ನೆರೆ ಹೊರೆಯ ಭಾಗಕ್ಕಷ್ಟೇ ಕಳುಹಿಸಿ ನಮ್ಮ ವ್ಯಾಪಾರ ನಡೆಸುತ್ತಿದ್ದೇವೆ. ಆದರೆ, ನಮ್ಮ ಪ್ರಾಡಕ್ಟ್ ಪಡೆದ ಇನ್ನೊಂದು ರಾಜ್ಯ ಅಥವಾ ಜಿಲ್ಲೆಯವರು ಆ ಪ್ರಾಡಕ್ಟ್ ಅನ್ನು ಬೇರೆಯದ್ದೇ ಹೆಸರಿನಿಂದ ದೇಶ/ವಿದೇಶಕ್ಕೆ ರಫ್ತು ಮಾಡುತ್ತಾರೆ. ನಿಜಕ್ಕೂ ಆ ಉತ್ಪನ್ನ ಮಂಗಳೂರಿನದ್ದಾಗಿತ್ತು. ಆದರೆ, ನಾವು ಅಂತಾರಾಷ್ಟ್ರೀಯದ ಬಗ್ಗೆ ಯೋಚನೆಯೇ ಮಾಡಿಲ್ಲ. ಹೀಗಾಗಿಯೇ ಮಂಗಳೂರಿನಲ್ಲಿ ಬೆಳೆಯುವ ಹತ್ತಾರು ಬೆಳೆ, ತಿಂಡಿ-ತಿನಿಸುಗಳು, ಉತ್ಪನ್ನಗಳು ಕೇರಳ, ಚೆನ್ನೈ, ಬೆಂಗಳೂರಿಗೆ ಕಳುಹಿಸುವಲ್ಲಿಗೆ ನಾವು ಸುಸ್ತಾಗಿಬಿಡುತ್ತೇವೆ. ಆದರೆ, ಅಲ್ಲಿಗೆ ಹೋದ ನಮ್ಮ ಪ್ರಾಡಕ್ಟ್ ಅವರದ್ದೇ ಹೆಸರಿನಲ್ಲಿ ಹೊರದೇಶಗಳಿಗೆ ಹೋಗಿ ಮಾರುಕಟ್ಟೆ ಸ್ಥಾಪಿಸುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದಕ್ಕಾಗಿ ಇಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಮೇಡ್ ಇನ್ ಚೆನ್ನೈ, ಮೇಡ್ ಇನ್ ಡೆಲ್ಲಿ, ಮೇಡ್ ಇನ್ ಗುಜರಾತ್ ಇರುವ ಜಾಗದಲ್ಲಿ ಮೇಡ್ ಇನ್ ಮಂಗಳೂರು ಪ್ರಾಡಕ್ಟ್ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಣಿಸುವಂತಾಗಬೇಕಿದೆ. . ಸಾಧನೆಯ ಕ್ಷೇತ್ರದ ಆಯ್ಕೆ ಹೇಗೆ?
ತನಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದರ ಬಗ್ಗೆ ಮೊದಲು ಯೋಚಿಸಬೇಕು. ನಂತರ ಅದೇ ಕ್ಷೇತ್ರದಲ್ಲಿ ಮುಂದುವರಿಯುವ ಬಗ್ಗೆ ಯೋಚಿಸಬೇಕು. ಉನ್ನತ ಶಿಕ್ಷಣ ಪಡೆದವರು ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ ಎಂಬ ನಂಬಿಕೆ ಸರಿಯಲ್ಲ. ಉನ್ನತ ಶಿಕ್ಷಣ ಪಡೆದವರು ಬೇರೆ ಬೇರೆ ಕ್ಷೇತ್ರದಲ್ಲಿ ಅವಕಾಶ ಪಡೆದರೆ, ತನ್ನ ಸ್ಕಿಲ್ ಆಧಾರಿತವಾಗಿ ಮುಂದುವರಿಯುವವರು ಅದಕ್ಕಿಂತಲೂ ಉನ್ನತ ಸ್ಥಾನ ಪಡೆಯಲು ಸಾಧ್ಯ.
Related Articles
Advertisement