ಚಿತ್ರದುರ್ಗ: ಕೋವಿಡ್ ಎರಡನೇ ಅಲೆವೇಗವಾಗಿ ಹಬ್ಬುತ್ತಿದ್ದು, ನಿಮ್ಮ ಜೀವ ನಿಮ್ಮಕೈಯಲ್ಲೇ ಇದೆ. ಎಲ್ಲರನ್ನೂ ಕೋಲು ಹಿಡಿದುತಪಾಸಣೆ ಮಾಡುವುದು ಕಷ್ಟ. ನಾಗರಿಕರು ತಮ್ಮಜವಾಬ್ದಾರಿ ಅರಿತು ಸಹಕಾರ ನೀಡಿ ಎಂದುಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ಮನವಿ ಮಾಡಿದರು.
ಶುಕ್ರವಾರ ಜಿಲ್ಲಾ ಧಿಕಾರಿ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೋವಿಡ್-19 ಸಾಂಕ್ರಾಮಿಕ ರೋಗದಸೋಂಕಿನ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿಸರ್ಕಾರ ಈಗಾಗಲೇ ರಾತ್ರಿ ಮತ್ತು ವಾರಾಂತ್ಯಕರ್ಫ್ಯೂ ಜಾರಿಗೊಳಿಸಿದ್ದು, ವಾರಾಂತ್ಯದ ಕರ್ಫ್ಯೂವೇಳೆ ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆಎಂದರು.
ಅಗತ್ಯ ವಸ್ತುಗಳಾದ ಪಡಿತರ ಅಂಗಡಿಹಾಗೂ ದಿನಸಿ, ಹಣ್ಣು, ತರಕಾರಿ, ಹಾಲು,ಮೀನು, ಮಾಂಸ, ಪಶು ಆಹಾರ ಅಂಗಡಿಗಳಸೇವೆಗೆ ಬೆಳಗ್ಗೆ 6 ರಿಂದ 10ರವರೆಗೆ ಮಾತ್ರಅವಕಾಶವಿದೆ. ಮೆಡಿಕಲ್ ಸ್ಟೋರ್‌ಗಳು ಹಾಗೂಆರೋಗ್ಯಕ್ಕೆ ಸಂಬಂ ಧಿಸಿದ ಎಲ್ಲ ಸೌಕರ್ಯಗಳುಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದರು.
ವಾರಾಂತ್ಯದ ಕರ್ಫ್ಯೂ ವೇಳೆ ಕೋವಿಡ್ ಲಸಿಕೆಪಡೆಯುವವರಿಗೆ ಅವಕಾಶ ಕಲ್ಪಿಸಲಾಗಿದ್ದು,ಲಸಿಕೆ ಪಡೆದುಕೊಂಡು ಬರಲು ಮಾತ್ರ ಅನುಮತಿನೀಡಿದ್ದು, ಆಧಾರ್ ಕಾರ್ಡ್ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಬೇಕು.ಮದುವೆಗೆ 50 ಜನ ಹಾಗೂ ಅಂತ್ಯಕ್ರಿಯೆಗೆ 20ಜನ ಮೀರುವಂತಿಲ್ಲ.
ಮದುವೆಗೆ ತೆರಳುವವರುಆಹ್ವಾನ ಪತ್ರಿಕೆ ಹಾಜರುಪಡಿಸಬೇಕು ಎಂದರು.ವಾರದ ದಿನಗಳಾದ ಸೋಮವಾರದಿಂದಶುಕ್ರವಾರದವೆಗೆ ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳುಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ.ಬಟ್ಟೆ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳುಅಲ್ಲದ ಅಂಗಡಿಗಳು ಇರುವುದಿಲ್ಲ. ಸಲೂನ್‌ಗಳು, ಬ್ಯೂಟಿಪಾರ್ಲರ್‌ಗಳು ಕೋವಿಡ್‌ಮಾರ್ಗಸೂಚಿಯನ್ವಯ ವಾರದ ದಿನಗಳಲ್ಲಿಮಾತ್ರ ತೆರೆದಿರುತ್ತವೆ ಎಂದು ಹೇಳಿದರು.
ನಿರ್ಮಾಣ ಸಾಮಗ್ರಿಗಳ ಅಂಗಡಿ, ಕೃಷಿಚಟುವಟಿಕೆಗಳಿಗೆ ಸಂಬಂಧಿಸಿದ ಮಳಿಗೆಗಳುತೆರೆದಿರುತ್ತವೆ. ಇ-ಕಾಮರ್ಸ್‌ಗೆ ಅವಕಾಶವಿದ್ದು,ದಿನಸಿಗಳ ಮನೆ ಬಾಗಿಲಿಗೆ ಪಾರ್ಸಲ್‌ಪಡೆಯಲು ಅವಕಾಶವಿರುತ್ತದೆ. ಲಾಡ್ಜ್ಗಳಲ್ಲಿವಾಸ್ತವ್ಯ ಹೂಡುವವರಿಗೆ ಅತಿಥಿ ಸೇವೆಗೆ ಮಾತ್ರಅವಕಾಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿಅಪರ ಜಿಲ್ಲಾ ಧಿಕಾರಿ ಈ.ಬಾಲಕೃಷ್ಣ ಇದ್ದರು.