Advertisement

ಖಾಸಗಿ, ವೃತ್ತಿ ಬದುಕು ಬ್ಯಾಲೆನ್ಸ್‌ ಹೀಗಿರಲಿ

01:11 PM Sep 24, 2018 | Team Udayavani |

ವೃತ್ತಿ ಮತ್ತು ಖಾಸಗಿ ಬದುಕಿನ ಹೊಂದಾಣಿಗೆ ಎಂಬುದು ಮಹಿಳೆಯರ ಪಾಲಿಗೆ ಸುಲಭದ ಮಾತಲ್ಲ. ಈ ಸಮಸ್ಯೆ ಮಹಿಳೆಯರನ್ನು ಅರ್ಧದಲ್ಲೇ ಉದ್ಯೋಗ ತೊರೆಯುವಂತೆ ಮಾಡುವುದೂ ಇದೆ. ಉದ್ಯೋಗ ತೊರದೆ ಕೆಲವು ವರ್ಷಗಳ ಅನಂತರ ತಾವು ಮಾಡಿದ ನಿರ್ಣಯ ತಪ್ಪಾಯಿತೇ ಎಂದು ಪ್ರಶ್ನಿಸಿ ಕೊಂಡು ಪರಿತಪಿಸುವವರೂ ಇದ್ದಾರೆ. ಹೀಗಾಗಿ ವೃತ್ತಿ ಮತ್ತು ಖಾಸಗಿ ಬದುಕನ್ನು ಸಮಾನವಾಗಿ ತೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದು ಎಲ್ಲ ಮಹಿಳೆಯರಿಗೂ ಇದೆ. ಇದಕ್ಕಾಗೆ ಕೆಲವೊಂದು ಟಿಪ್ಸ್‌ ಗಳು ಇಲ್ಲಿವೆ.

Advertisement

1. ಉದ್ಯೋಗದೊಂದಿಗೆ ಜೀವನ
ಕಚೇರಿ ಕೆಲಸ, ಬೆಳಗ್ಗೆ ಬೇಗ ಎದ್ದು ಮನೆ ಕೆಲಸಗಳನ್ನು ಮುಗಿಸಿ ಕಚೇರಿಗೆ ಹೊರಡುವ ಧಾವಂತದಲ್ಲಿ ಒಂದಷ್ಟು ಮಹಿಳೆಯರು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಯಮಿತವಾದ ಚೌಕಟ್ಟನ್ನು ಕಾಯ್ದುಕೊಳ್ಳಿ. ಕನಿಷ್ಠ ಪಕ್ಷ ಕಚೇರಿಗೆ ಹೊರಡುವ 15 ನಿಮಿಷ ಮೊದಲು ಸ್ವಚ್ಛಂದವಾದ ಪರಿಸರದಲ್ಲಿ ಕುಳಿತು ಶುದ್ಧ ಗಾಳಿಯನ್ನು ಆಸ್ವಾಧಿಸಿಕೊಳ್ಳಿ. ಇದರಿಂದ ದಿನವಿಡೀ ಉಲ್ಲಾಸಿತರಾಗಿರಬಹುದು.

2. ಆದ್ಯತೆ ಯಾವುದು?
ಉದ್ಯೋಗ ಮತ್ತು ಮನೆ ಇವುಗಳಲ್ಲಿ ಮೊದಲ ಆದ್ಯತೆ ಯಾವುದು? ಇಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಪಟ್ಟಿ ಮಾಡಿಕೊಳ್ಳಿ. ಅನಿವಾರ್ಯವಲ್ಲದ ಕೆಲಸಗಳಿಗೆ ಸಮಯ ಹಾಳು ಮಾಡಬೇಡಿ.

3 ಸಹೋದ್ಯೋಗಿಗಳ ಗಮನಕ್ಕೆ ತನ್ನಿ
ಕೌಟುಂಬಿಕ ಸಮಸ್ಯೆಗಳಿರುವಾಗ, ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಾಗದೇ ಇದ್ದಾಗ ಸಹೋದ್ಯೋಗಿಗಳ ಸಮಸ್ಯೆಯನ್ನು ಹಂಚಿಕೊಳ್ಳಿ. ಮನೆಯಲ್ಲಿದ್ದುಕೊಂಡೇ ವೃತ್ತಿ ನಡೆಸಲು ಪರ್ಯಾಯವಾದ ದಾರಿಯನ್ನು ಹುಡುಕಿ.

4 ಸಹಾಯ ಪಡೆಯಿರಿ
ಮನೆಯಲ್ಲಿ ಮಗವನ್ನು ನೋಡಿಕೊಳ್ಳಲು ಸಮಯ ಸಿಗದಿದ್ದಾಗ ಆರೈಕೆಗಾಗಿ ಒಬ್ಬರನ್ನು ನೇಮಿಸಿಕೊಳ್ಳಿ. ಇದರಿಂದ ಸಮಯದ ಉಳಿತಾಯದ ಜತೆಗೆ ಕೊಂಚ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

Advertisement

5 ಗೊಂದಲಗಳನ್ನು ಬಗೆಹರಿಸಿ
ಸಮಸ್ಯೆಗಳು ಎದುರಾದಾಗ ಗೊಂದಲಕ್ಕೊಳಗಾಗದೇ ಶಾಂತ ಚಿತ್ತದಿಂದ ಯೋಚಿಸಿ, ಸವಾಲುಗಳನ್ನು ಎದುರಿಸಿ. ಇದರಿಂದ ಯಶಸ್ಸು ಗಳಿಸಬಹುದು.

6 ಸಂಪರ್ಕ ಇರಿಸಿಕೊಳ್ಳಿ
ಕಚೇರಿಯಲ್ಲಿದ್ದಾಗ ಮನೆ ಮಂದಿಯೊಂದಿಗೆ, ಮನೆಯಲ್ಲಿದ್ದಾಗ ಕಚೇರಿ ಸಿಬಂದಿಯೊಂದಿಗೆ ಸಂಪರ್ಕ ಇರಿಸಿಕೊಳ್ಳಿ. ಇದರಿಂದ ಹೆಚ್ಚು ನೆಮ್ಮದಿಯಾಗಿರಬಹುದು.

7 ನಿಮಗಾಗಿ ಸಮಯವಿರಲಿ
ಎಲ್ಲಿದ್ದರೂ ಮನೆ ಮತ್ತು ಕಚೇರಿಯದ್ದೇ ಚಿಂತೆ ಮಾಡಬೇಡಿ. ನಿಮಗಾಗಿ, ನಿಮ್ಮವರಿಗಾಗಿ ತುಸು ಸಮಯ ಮೀಸಲಿರಿಸಿ. ಮಾನಸಿಕವಾಗಿ ಸದೃಢರಾಗಲು ವ್ಯಾಯಾಮ, ಪ್ರವಾಸದಲ್ಲಿ ತೊಡಗಿಕೊಳ್ಳಿ. ಹೊಸ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಇದರಿಂದ ಮನಸ್ಸು ಒತ್ತಡ ಮುಕ್ತವಾಗುತ್ತದೆ. 

 ಶ್ರುತಿ ನೀರಾಯ

Advertisement

Udayavani is now on Telegram. Click here to join our channel and stay updated with the latest news.

Next