ಒಬ್ಬ ದೊಡ್ಡ ಬಿಸಿನೆಸ್‌ಮನ್. ಅವನಿಗಿದ್ದ ಅನುಕೂಲಗಳಿಗೆ ಮಿತಿಯೇ ಇರಲಿಲ್ಲ.ಆತನಿಗೆ ದೇಶ ಸುತ್ತುವಹಂಬಲ. ಹೀಗೆ ಸುತ್ತಲು ತನ್ನದೇ ಆದ ಒಂದು ಹಡಗುಇದ್ದರೆ ಚೆಂದ ಅನ್ನಿಸಿತು. ಆತ ಮತ್ತಷ್ಟು ಶ್ರದ್ಧೆಯಿಂದದುಡಿದು ಒಂದು ಹಡಗು ಖರೀದಿಸಿಬಿಟ್ಟ. ಈ ಹಡಗಿನ ಮೂಲಕ ದೇಶ ವಿದೇಶಗಳಿಂದ ಬಗೆಬಗೆಯವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ.
ಅವನ ಸಿರಿತನದ ಗ್ರಾಫ್ ದಿನೇದಿನೇ ಮೇಲೇರಿತು. ಹೀಗಿದ್ದಾಗ ಒಮ್ಮೆಏನಾಯಿತೆಂದರೆ, ಬಿರುಗಾಳಿಗೆ ಸಿಕ್ಕಿ ಹಡಗುಅಪಾರ ಹಾನಿಗೆಒಳಗಾಯಿತು. ಪರಿಣಾಮ, ಈ ಶ್ರೀಮಂತ ಬೀದಿಗೆ ಬಿದ್ದ. ಆದರೆ ಆಗಲೂ ಅವನು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ.ಬದುಕಿಗೆ ತೀರಾ ಅಗತ್ಯ ಅನ್ನಿಸಿದಾಗ ಕೂಲಿಯಾಳಿನಂತೆ ದುಡಿದ. ಪರಿಚಿತರ ಅಪಹಾಸ್ಯಕ್ಕೆ ಗುರಿಯಾದ. ಬಂಧುಗಳೆಲ್ಲ ತಾವಾಗಿಯೇ ದೂರವಾದರು. ಈ ಯಾವ ಬೆಳವಣಿಗೆಯಿಂದಲೂ ಆತ ಹೆದರಲಿಲ್ಲ.
ಬೆದರಲೂ ಇಲ್ಲ. ಶ್ರದ್ಧೆಯಿಂದ ದುಡಿದು ಕಡೆಗೊಂದು ದಿನ ಮತ್ತೆ ಹೊಸ ಹಡಗು ಖರೀದಿಸಿ, ಬಿಜಿನೆಸ್ ಆರಂಭಿಸಲು ಹೊರಟೇಬಿಟ್ಟ! ಆಗ ಅದೇ ಪರಿಚಿತರು ಬೆರಗಾಗಿ ಕೇಳಿದರು. ಇಂಥ ಮನಸ್ಥಿತಿ ನಿನಗೆ ಬಂದಿದ್ದಾದರೂ ಹೇಗೆ? ಆಗ, ಈ ಶ್ರೀಮಂತ ವ್ಯಾಪಾರಿ ನಸುನಕ್ಕು ಹೇಳಿದ: “ಜೀವನದ ಹೋರಾಟದಲ್ಲಿ ಸೋತಿದ್ದೇನೆ ಎಂಬ ಸಂಗತಿಯನ್ನು ನನ್ನ ಒಳಮನಸ್ಸಿಗೆ ಹೇಳಲೇ ಇಲ್ಲ. ಇವತ್ತಿನ ನನ್ನ ಗೆಲುವಿಗೆ ಇದೇ ಮುಖ್ಯ ಕಾರಣ…’
***ಜೀವನದಲ್ಲಿ ಗೆಲ್ಲಬೇಕು, ಸದಾ ಖುಷಿಯಿಂದ ಇರಬೇಕು ಅನ್ನುವವರು ತಪ್ಪದೇ ಈ ಪ್ರಸಂಗದಲ್ಲಿಬರುವ ಶ್ರೀಮಂತನ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಎಂಥದೇ ಕಷ್ಟದ ಸಂದರ್ಭದಲ್ಲೂ ನೆಗೆಟಿವ್ ಯೋಚನೆಯೊಂದು ಮನಸ್ಸಲ್ಲಿ ಕೂರಲು ಬಿಡಬಾರದು. ಇಲ್ಲ, ನಾನು ಸೋತಿಲ್ಲ. ಯಾವತ್ತೂ ನಾನು ಸೋಲುವುದಿಲ್ಲ. ಎಲ್ಲೂ ಸ್ವಲ್ಪ ತಪ್ಪಾಗಿದೆ. ಅದನ್ನು ಬೇಗಸರಿಮಾಡಿಕೊಂಡು ಗೆದ್ದೇ ಗೆಲ್ತೀನಿ ಎಂದು ಹೇಳಿಕೊಳ್ಳಬೇಕು. ಆಗ ಮಾತ್ರ ನಮ್ಮ ಮನಸ್ಸು ಡಿಪ್ರಶನ್‌ಗೆ ಒಳಗಾಗದೆ ಕೂಲ್ ಆಗಿ ಇರಲು ಸಾಧ್ಯವಾಗುತ್ತದೆ. ಗೆಲುವಿನ ಕುರಿತು ಯೋಚಿಸುವುದಕ್ಕೂ ಆಗ ಸುಲಭವಾಗುತ್ತದೆ.