Advertisement

ಸಹಕಾರ ಸಂಘ ರೈತರ ಪರವಾಗಿರಲಿ

12:09 PM Feb 21, 2020 | Team Udayavani |

ಯಳಂದೂರು: ಯಳಂದೂರು ತಾಲೂಕು ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ತನ್ನದೇ ಆದ ವಿಶಿಷ್ಟ ಐತಿಹ್ಯವಿದೆ. ಈ ಬಾರಿ 1 ಕೋಟಿ ರೂ. ಸಾಲವನ್ನು ರೈತರಿಗೆ ನೀಡಲಾಗಿದ್ದು, ಸಂಘದ ನೂತನ ಪದಾಧಿಕಾರಿಗಳು ಇದನ್ನು ಮತ್ತಷ್ಟು ಲಾಭದತ್ತ ಕೊಂಡೊಯ್ದು ರೈತರ ಸೇವೆ ಮಾಡಲಿ ಎಂದು ಮಾಜಿ ಶಾಸಕ ಜಿ.ಎನ್‌ .ನಂಜುಂಡಸ್ವಾಮಿ ಸಲಹೆ ನೀಡಿದರು.

Advertisement

ಪಟ್ಟಣದ ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಂ.ಪಿ. ನಿರಂಜನಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಕ್ಯಾತಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, 1956ರಲ್ಲಿ ಈ ಸಂಘ ತಾಲೂಕಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದಲೂ ಉತ್ತಮವಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸಿದ ಪದಾಧಿಕಾರಿಗಳು ಉತ್ತಮವಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಪ್ರತಿ ವರ್ಷವೂ ಇದರ ಲಾಭದಲ್ಲಿ ವೃದ್ಧಿ ಕಾಣುತ್ತಿದೆ. ಸಿಎಂ ಯಡಿಯೂರಪ್ಪ ಸಹಕಾರ ಸಂಘಗಳ ಬಂಧುವಾಗಿದ್ದಾರೆ. ಸಹಕಾರ ಸಚಿವರಾದ ಸೋಮಶೇಖರ್‌ ಕೂಡ ಈ ಕ್ಷೇತ್ರಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಮುಂಬರುವ

ದಿನಗಳಲ್ಲಿ ಹೆಚ್ಚಿನ ಅನುದಾನಗಳು ಲಭಿಸುವ ಭರವಸೆ ಇದೆ. ಈ ಹಿನ್ನೆಲೆಯಲ್ಲಿ ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುಂಚೆ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್‌ ಮಹೇಶ್‌ ಅಧ್ಯಕ್ಷ ಸ್ಥಾನಕ್ಕೆ ಎಂ.ಪಿ. ನಿರಂಜನಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕ್ಯಾತಶೆಟ್ಟಿ ಇವರಿಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಘೋಷಿಸಿದರು.

ಎಲ್ಲರೂ ಸಹಕರಿಸಿ: ನೂತನ ಅಧ್ಯಕ್ಷ ಎಂ.ಪಿ.ನಿರಂಜನಮೂರ್ತಿ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ. ಇದನ್ನು ಇನ್ನಷ್ಟು ಲಾಭವಾಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತೇನೆ. ಇದಕ್ಕೆ ಎಲ್ಲರ ಸಹಕಾರವೂ ನನಗೆ ಬೇಕಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಸದಸ್ಯರಾದ ಶೇಖರ್‌, ಉಮೇಶ್‌, ಶಿವಣ್ಣ, ಲಕ್ಷ್ಮಣಮ್ಮ, ಪುಟ್ಟಬುದ್ದಿ, ಎಚ್‌.ಎಂ ಸಿದ್ದರಾಜು, ನಾಮ ನಿರ್ದೇಶಿತ ಸದಸ್ಯ ಚಿನ್ನಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ್‌, ಎಂ.ಪಿ.ಪುಟ್ಟಣ್ಣ, ಹೊನ್ನೂರು ಸತೀಶ್‌, ಮಲ್ಲೇಶಪ್ಪ, ತಮ್ಮಣ್ಣ, ಮಹೇಶ್‌, ಪಂಜು, ಪ್ರಭು, ಬಸವಣ್ಣ, ಅನಿಲ್‌ಕುಮಾರ್‌, ಗೋವಿಂದ ರಾಜು, ರಾಮಚಂದ್ರು, ಭೀಮಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next