Advertisement

Rajinikanth: ಯೋಗಿ ಆದಿತ್ಯನಾಥ್‌ ಅವರ ಪಾದಗಳನ್ನು ಸ್ಪರ್ಶಿಸಿದ್ದು ತಪ್ಪಲ್ಲ..ರಜಿನಿಕಾಂತ್‌

11:41 AM Aug 22, 2023 | Team Udayavani |

ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಸದ್ಯ ‘ಜೈಲರ್’ ಹಿಟ್ ನ ಸಂತಸದಲ್ಲಿದ್ದಾರೆ. ಎರಡು ವರ್ಷದ ಬಳಿಕ ಬಿಗ್ ಸ್ಕ್ರೀನ್ ನಲ್ಲಿ ‘ತಲೈವಾ’ ಅವರನ್ನು ‌ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Advertisement

‘ಜೈಲರ್’ ಬಾಕ್ಸ್ ಆಫೀಸ್ ನಲ್ಲಿ  500 ಕೋಟಿ ಬ್ಯುಸಿನೆಸ್ ಮಾಡಿ ಮುನ್ನುಗ್ಗುತ್ತಿದೆ. ಆ ಮೂಲಕ ‘ಬೀಸ್ಟ್’ ಸೋಲಿನಿಂದ ನೆಲ್ಸನ್ ದಿಲೀಪ್ ‌ಕುಮಾರ್ ಕಂಬ್ಯಾಕ್ ಮಾಡಿದ್ದಾರೆ.

ಸಿನಿಮಾದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹಾಗೂ ಅಖಿಲೇಶ್ ಯಾದವ್ ಸೇರಿದಂತೆ ಅಯೋಧ್ಯೆಗೆ ಭೇಟಿ ನೀಡಿದ ವಿಚಾರಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

‘ಜೈಲರ್’ ಸಿನಿಮಾವನ್ನು ಜೊತೆಯಾಗಿ ವೀಕ್ಷಿಸುವ ನಿಟ್ಟಿನಲ್ಲಿ ರಜಿನಿಕಾಂತ್ ಅವರು ಯುಪಿ ಸಿಎಂ ಯೋಗಿ ಅವರನ್ನು ಭೇಟಿ ಆಗಿದ್ದರು. ಈ ಭೇಟಿಯ ವೇಳೆ ವಯಸ್ಸಿನಲ್ಲಿ ತನ್ನಗಿಂತ ಕಿರಿಯರಾಗಿರುವ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಸ್ಪರ್ಶಿಸಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚಾ ವಿಷಯವಾಗಿತ್ತು.

ಅನೇಕರು ರಜಿನಿಕಾಂತ್ ಅವರ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಸ್ಪರ್ಶಿಸಿದ್ದು ಸರಿಯಲ್ಲ ಎಂದು ರಜಿನಿಕಾಂತ್ ನಡೆಯನ್ನು ರಾಜಕೀಯವಾಗಿಯೂ ಅನೇಕರು ವಿರೋಧಿಸಿದ್ದರು.

Advertisement

ಇದನ್ನೂ ಓದಿ: Kushi: “ರಜಿನಿಕಾಂತ್‌,ಚಿರಂಜೀವಿ ಸತತ ಫ್ಲಾಪ್‌ ಕೊಟ್ಟರೂ..” ಸದ್ದು ಮಾಡಿದ ದೇವರಕೊಂಡ ಹೇಳಿಕೆ

ಈ ವಿಚಾರ ವೈರಲ್ ಆಗುತ್ತಿರುವ ಬೆನ್ನಲ್ಲೇ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

“ಅವರು ಸನ್ಯಾಸಿಯಾಗಲಿ ಅಥವಾ ಯೋಗಿಯಾಗಲಿ, ಅವರು ನನಗಿಂತ ಚಿಕ್ಕವರಾಗಿದ್ದರೂ, ಅವರ ಪಾದಗಳನ್ನು ಸ್ಪರ್ಶಿಸುವುದು ನನಗೆ ಅಭ್ಯಾಸ” ಎಂದು ರಜಿನಿಕಾಂತ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆ ಮೂಲಕ ಪಾದಗಳನ್ನು ಸ್ಪರ್ಶಿಸಿದ್ದು ತಪ್ಪಲ್ಲ ಎನ್ನುವ ಅರ್ಥದಲ್ಲಿ ಮಾತುಗಳನ್ನಾಡಿದ್ದಾರೆ.

ಸನ್ಯಾಸಿಯಾಗಿರುವ ಯೋಗಿ ಆದಿತ್ಯನಾಥ್ ಅವರನ್ನು 2014 ರಲ್ಲಿ ಗೋರಖನಾಥ ದೇವಾಲಯದ ಪ್ರಧಾನ ಅರ್ಚಕರನ್ನಾಗಿ ಮಾಡಲಾಯಿತು.

ರಜಿನಿಕಾಂತ್‌ ಅವರು ಶನಿವಾರ(ಆ.19 ರಂದು) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು. ಅದೇ ದಿನ, ಲಕ್ನೋದಲ್ಲಿ ‘ಜೈಲರ್’ ವಿಶೇಷ ಪ್ರದರ್ಶನವನ್ನು ನಡೆಸಲಾಯಿತು. ಇದರಲ್ಲಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next