Advertisement

ಕೋವಿಡ್‌ 19 ತಡೆಗೆ ಮುನ್ನೆಚ್ಚರಿಕೆ ವಹಿಸಿ

06:17 AM Jun 23, 2020 | Lakshmi GovindaRaj |

ಶಿಡ್ಲಘಟ್ಟ: ನಗರ ಸಹಿತ ತಾಲೂಕಿನಾದ್ಯಂತ ಕೋವಿಡ್‌ 19 ಸೋಂಕು ನಿಯಂತ್ರಿಸಲು ಅಧಿಕಾರಿಗಳು ಮತ್ತಷ್ಟು ಮುನ್ನೆ ಚ್ಚರಿಕೆ ಕ್ರಮಗಳನ್ನು ಕೈಗೊಂಡು ನಾಗರಿಕರ ಆತಂಕ ದೂರ ಮಾಡಬೇಕೆಂದು ಶಾಸಕ ವಿ.ಮುನಿಯಪ್ಪ  ಸೂಚಿಸಿದರು.

Advertisement

ನಗರದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಕ್ರಿಮಿನಾಶಕ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್‌ 19 ಮುಕ್ತವಾಗಿದ್ದ ತಾಲೂಕಿನಲ್ಲಿ ಸೋಂಕು ಕಾಲಿಟ್ಟಿದೆ. ನಾಗರಿಕರು  ವಿನಾಕಾರಣ ಮನೆಯಿಂದ ಹೊರ ಬರುವುದನ್ನು ಸ್ವಯಂ ಪ್ರೇರಿತರಾಗಿ ನಿಯಂತ್ರಿಸಿಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್‌ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಸಹಕರಿಸಬೇಕೆಂದು ಮನವಿ ಮಾಡಿದರು.

ನಗರದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಳೇ ಅಂಚೆ ಕಚೇರಿ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ತ್ಯಾಗರಾಜ್‌ ಮಾಹಿತಿ ನೀಡಿದರು. ಶಾಸಕರು ನಗರದಲ್ಲಿ ಪ್ರದಕ್ಷಿಣೆ ಮಾಡಿ ಸೀಲ್‌  ಡೌನ್‌ ಆಗಿರುವ ಪ್ರದೇಶ ವೀಕ್ಷಿಸಿ ನಗರದ ಎಲ್ಲಾ ವಾಡ್‌ಗಳಲ್ಲಿ ಕ್ರಿಮಿನಾಶಕ ಔಷಧಿ ಸಿಂಪಡಿಸಿ ಸ್ವತ್ಛತೆ ಕಾಪಾಡಲು ವಿಶೇಷ ಅಭಿಯಾನ ನಡೆಸಬೇಕೆಂದು ಪೌರಾಯುಕ್ತ ಹಾಗೂ ಆರೋಗ್ಯ ನಿರೀಕ್ಷಕಿಗೆ ಆದೇಶಿಸಿದರು.

ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಹ್ಮಣಿ, ನಗರಸಭಾ ಸದಸ್ಯ ರಿಯಾಝ್ಪಾಷ, ಮನೋಹರ್‌, ನಗರಸಭೆಯ ನೀರು ಸರಬರಾಜು ವಿಭಾಗದ ಮುರಳಿ, ಮುಖಂಡರಾದ ಟಿ.ಕೆ.ನಟರಾಜ್‌, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್‌, ಭಕ್ತರಹಳ್ಳಿ ಗ್ರಾಪಂ ಸದಸ್ಯ ಚಿದಾ  ನಂದಮೂರ್ತಿ, ಕಾಕಚೊಕ್ಕಂಡಹಳ್ಳಿ ಮಂಜುನಾಥ್‌, ಮಾದಿಗ ದಂಡೋರ ಸಮಿತಿ ಖಜಾಂಚಿ ನರಸಿಂಹ ಮೂರ್ತಿ, ನಾಗನರಸಿಂಹ, ಆರೋಗ್ಯ ನಿರೀಕ್ಷಕಿ ಶೋಭಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next