Advertisement
ನಗರದ ಅಲ್ಲಲ್ಲಿ ಪಟಾಕಿ ಸ್ಟಾಲ್‌ಗಳನ್ನು ತೆರೆಯಲಾಗಿದ್ದು, ಬೆಳಗ್ಗೆಯಿಂದಲೇ ಜನ ಪಟಾಕಿ ಖರೀದಿಸುವುದರಲ್ಲಿ ತೊಡಗಿದ್ದಾರೆ. ಆಕಾಶದೆತ್ತರಕ್ಕೆ ಹಾರಿ ಚಿತ್ತಾರವನ್ನು ಮೂಡಿಸುವಂತಹ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೇ ತುಳಸೀಕಟ್ಟೆ, ರಾಕೆಟ್ ಮುಂತಾದ ಹೆಚ್ಚು ಶಬ್ದವನ್ನು ಮಾಡದ ಪಟಾಕಿಗಳತ್ತ ಜನರ ಒಲವು ಹರಿದಿದೆ.
ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಪಟಾಕಿ ವ್ಯಾಪಾರ ಕಡಿಮೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಪ್ರಕಾರ ಶಬ್ದ ಮಾಡುವ ಪಟಾಕಿ ಖರೀದಿಯಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ. ನೆಲಚಕ್ರ, ಸುರ್‌ಸುರ್ ಬತ್ತಿ ಸಹಿತ ಅತೀ ಹೆಚ್ಚು ಶಬ್ದ ಮಾಡದ ಪಟಾಕಿ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದಾರೆ.
Related Articles
ವೆನಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ “ಒಂದೆಡೆ ಮಳೆ ಸುರಿಯುತ್ತಿದ್ದು, ಮತ್ತೂಂದೆಡೆ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವೆನಲಾಕ್ ಆಸ್ಪತ್ರೆಯ ಎಲ್ಲ ಸಿಬಂದಿ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಇನ್ನು, ವೆನಲಾಕ್ ಆಸ್ಪತ್ರೆಯಲ್ಲಿ ಸುಟ್ಟಗಾಯಕ್ಕೆಂದು ಸ್ಪೆಷಲ್ ವಾರ್ಡ್ ಇದ್ದು, 9 ಬೆಡ್‌ಗಳಿವೆ. ವಿಶೇಷ ತಜ್ಞರು, ಅಗತ್ಯ ವೈದ್ಯಕೀಯ ಸಲಕರಣೆಗಳು ತಯಾರಿದೆ’ ಎನ್ನುತ್ತಾರೆ. ಇನ್ನು ನಗರದ ಇತರೇ ಖಾಸಗಿ ಕಣ್ಣಿನ ಆಸ್ಪತ್ರೆಗಳು ಕೂಡ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದೆ.
Advertisement
ಪಟಾಕಿ ಸಿಡಿಸುವ ಮುನ್ನ ಇರಲಿ ಎಚ್ಚರ ಹೆಚ್ಚಿನ ಶಬ್ದ ಮಾಡುವ ಪಟಾಕಿಗಳನ್ನು ಹಚ್ಚಬೇಡಿ
ಪಟಾಕಿ ಹಚ್ಚುವಾಗ ಜಾಗರೂಕರಾಗಿರಿ
ಅಪಾಯ ರಹಿತ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಿ
ಒಂಟಿಯಾಗಿ ಮಕ್ಕಳ ಕೈಯಲ್ಲಿ ಪಟಾಕಿ ಹಚ್ಚಲು ಹೆತ್ತವರು ಬಿಡಬೇಡಿ
ಅರೆಬರೆ ಸುಟ್ಟ ಪಟಾಕಿಗಳನ್ನು ಕೈಯಲ್ಲಿ ಮುಟ್ಟಲು ಹೋಗಬೇಡಿ
ಬಯಲು ಪ್ರದೇಶದಲ್ಲಿ ಪಟಾಕಿ ಹಚ್ಚಿ
ಪಟಾಕಿಗೆ ಬೆಂಕಿ ಹಚ್ಚುವಾಗ ಉದ್ದ ಊದು ಬತ್ತಿಯನ್ನು ಬಳಸಿ