ಹಾಸನ: ಕೋವಿಡ್ 19 ಬಗ್ಗೆ ಹಾಸನ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳು ಸಮರ್ಪಕ ಕೆಲಸ ಮಾಡಿದ್ದಾರೆ. ಏಪ್ರಿಲ್ 20 ರ ವರೆಗೆ ಬಹಳ ಶಿಸ್ತಾಗಿ ಇರಬೇಕು ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಹಾಸನದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಂತರ ಮಾತನಾಡಿದ ಸಚಿವರು, ಕೋವಿಡ್ 19 ಬಗ್ಗೆ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳು ಸಮರ್ಪಕ ಕೆಲಸ ಮಾಡಿದ್ದಾರೆ. ಮುಂದಿನ 5 ದಿನಗಳ ವರೆಗೆ ಜನರು ಕಠಿಣವಾಗಿರಬೇಕು ಎಂದರು.
ಜಿಲ್ಲೆಯಲ್ಲಿ 4 ಲಕ್ಷ ಮನೆಗಳನ್ನು ಸರ್ವೆ ಮಾಡಲಾಗಿದೆ. 50 ಕಡೆ ಪರೀಕ್ಷೆಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ. ಮೇ 1 ರೊಳಗೆ ಮತ್ತೆ 10 ಕೆಜಿ ಅಕ್ಕಿ ನೀಡಲಾಗುವುದು. ಆದಷ್ಟು ಜನ ಹೊರ ಬರದಂತೆ ಮನೆಯಲ್ಲೇ ಇರಬೇಕು ಎಂದರು.
ರಾಜ್ಯದಲ್ಲಿ ಲಾಕ್ ಡೌನ್ ಸಡಿಲವಾಗಲಿದೆ. ಕೃಷಿ, ಗೂಡ್ಸ್ ವಾಹನ ಓಡಾಟಕ್ಕೆ ಅವಕಾಶ ನೀಡಲಾಗುವುದು. ಹಾಸನ ಸೇಫ್ ಆಗಿರುವುದರಿಂದ ಕೃಷಿ ಚಟುವಟಿಕೆಗೆ ಸಮಸ್ಯೆ ಇಲ್ಲ. ಟ್ಯಾಕ್ಸಿಯಲ್ಲೂ ಇಬ್ಬರು ಮಾತ್ರ ಹೋಗಬೇಕು. ಬೈಕ್ ನಲ್ಲೂ ಒಬ್ಬರಷ್ಟೇ ಹೋಗಬೇಕು ಎಂದರು.
ಜನರಿಗೆ ವರಮಾನದ ಮೂಲ ಕಡಿಮೆಯಾಗಿರಬಹುದು. ಕಷ್ಟದ ಸನ್ನಿವೇಶದಲ್ಲಿ ಇದು ಸಾಮಾನ್ಯ. ಸಾಮಾಜಿಕ ಅಂತರ ಕಾಯ್ದುಕೊಂಡರೆ ನಾವು ನಾರ್ಮಲ್ ಲೈಫ್ ಗೆ ಮರಳಬಹುದು. ಜನರು ಸಹಕರಿಸುವಂತೆ ಸಚಿವರು ಮನವಿ ಮಾಡಿದರು.