Advertisement
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ಮಹಾಯೋಜನೆ ( ಮಾಸ್ಟರ್ ಪ್ಲ್ರಾನ್) ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದೆ. ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶದ ಅಭಿವೃದ್ಧಿಗೆ ಮುಂದಿನ ಹತ್ತು ವರ್ಷಗಳ ಅವಧಿಗೆ ನಗರ ಯೋಜನೆ ಹೇಗಿರಬೇಕು ಎಂಬ ಬಗ್ಗೆ ಒಂದು ಸಮಗ್ರ ದೃಷ್ಟಿಕೋನ ಸಿದ್ಧಪಡಿಸುವ ನಿಟ್ಟಿನಲ್ಲಿ ಮಹಾಯೋಜನೆ ಒಂದು ಮಹತ್ವದ ಮಾರ್ಗದರ್ಶಿಯಾಗಿರುತ್ತದೆ.
Related Articles
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳು ಹಾಗೂ ತಲಪಾಡಿ, ಮೂಲ್ಕಿ, ಕಣ್ಣೂರು, ಮೂಡುಶೆಡ್ಡೆ, ಬಜಪೆ ಸಹಿತ ಒಟ್ಟು 35 ಗ್ರಾಮಗಳು ಈ ಪ್ರದೇಶ ಮಹಾಯೋಜನೆಯಲ್ಲಿ ಒಳಗೊಳ್ಳುತ್ತವೆ.
Advertisement
ಮಹಾಯೋಜನೆಯಲ್ಲಿ ಬರುವ ಅಂಶಗಳುಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ಪ್ರದೇಶಕ್ಕೆ ಒಳಪಡುವ ಪ್ರದೇಶದಲ್ಲಿ 2009ರ ಬಳಿಕ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಬಹಳಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ. ಇದಕ್ಕೆ ಅನುಗುಣವಾಗಿ ನಗರ ಯೋಜನೆಯನ್ನು ಸಿದ್ಧಪಡಿಸುವ ಆವಶ್ಯಕತೆ ಇದೆ. ಈಗ ನಡೆಸುವ ಪರಿಷ್ಕರಣೆ ಮುಂದಿನ 10 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಆದ್ದರಿಂದ ನಗರದ ವಾಹನ ಹಾಗೂ ಜನದಟ್ಟನೆಗೆ ಅನುಗುಣವಾಗಿ ರಸ್ತೆಗಳ ವಿಸ್ತಾರ ಯಾವ ರೀತಿ ಇರಬೇಕು. ಮುಕ್ತ ಪ್ರದೇಶಗಳು (ಉದ್ಯಾನಗಳು ಒಳಗೊಂಡು ), ಜನವಸತಿ ಪ್ರದೇಶಗಳು, ಲೇಔಟ್‌ಗಳು, ಟ್ರಕ್ ಟರ್ಮಿನಲ್, ರಾಷ್ಟ್ರೀಯ ಹೆದ್ದಾರಿಗಳಿಂದ ನಗರದೊಳಗೆ ಸಂಪರ್ಕ ರಸ್ತೆಗಳು ಸಹಿತ ವಿವಿಧ ಅಂಶಗಳು ಇದರಲ್ಲಿ ಒಳಗೊಳ್ಳುತ್ತವೆ. ಸಾರ್ವಜನಿಕರು ಇವುಗಳ ಬಗ್ಗೆ ತಮ್ಮ ಸಲಹೆ ಸೂಚನೆಗಳು ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ. ಸಲಹೆ/ಸೂಚನೆಗಳು
ಮಹಾಯೋಜನೆ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಲಿಖೀತವಾಗಿ ಅಂಚೆ ಮೂಲಕ ಅಥವಾ ಖುದ್ದಾಗಿ ಆಯಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಉರ್ವಸ್ಟೋರ್, ಅಶೋಕ ನಗರ ಅಂಚೆ ವಿಳಾಸಕ್ಕೆ ನೀಡಬಹುದಾಗಿದೆ. ಸಾರ್ವಜನಿಕ ಸಹಕಾರ ಅಗತ್ಯ
ನಗರಾಭಿವೃದ್ಧಿ ಪ್ರಾಧಿಕಾರದ ಮಹಾಯೋಜನೆಯನ್ನು ಪ್ರತಿ 10 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿದ್ದು, ಈಗಾಗಲೇ ಪ್ರಕಟನೆ ಹೊರಡಿಸಲಾಗಿದೆ. ಮಹಾ ಯೋಜನೆ ಪರಿಷ್ಕರಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು ತಮ್ಮ ಸಲಹೆ ಸೂಚನೆಗಳನ್ನು ಪ್ರಕಟನೆಯ 60 ದಿನಗಳೊಳಗೆ ನೀಡಬಹುದಾಗಿದೆ.
– ಕೆ. ಶ್ರೀಕಾಂತ್ ರಾವ್,
ಆಯುಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕೇಶವ ಕುಂದರ್