Advertisement

ಅಂತರಂಗ-ಬಹಿರಂಗದಲ್ಲಿ ಸ್ವಚ್ಛವಾಗಿರಿ

06:53 AM Jan 30, 2019 | |

ಯಡ್ರಾಮಿ: ಮನುಷ್ಯ ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿಯೂ ಸ್ವಚ್ಛವಾಗಿ ನಡೆದರೆ ಕೂಡಲಸಂಗಮನ ಶರಣರ ಒಲುಮೆ ತಾನಾಗಿಯೇ ಆಗುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ನುಡಿದರು.

Advertisement

ಪಟ್ಟಣದ ಮುರುಘೇಂದ್ರ ಶಿವಯೋಗಿ ವಿರಕ್ತಮಠದ ಆವರಣದಲ್ಲಿ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ, ಸಿದ್ಧಲಿಂಗ ದೇವರ ಪಟ್ಟಾಧಿಕಾರ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಸ್ವಚ್ಛವಾಗಿ ಬದುಕಬೇಕು. ಬದುಕಿನಲ್ಲಿ ಮನುಷ್ಯನಿಗೆ ತನ್ನ ಕೈ ಮತ್ತು ಕಣ್ಣುಗಳು ಹೊಲಸಾಗುವ ಪ್ರಸಂಗಗಳು ಬರುತ್ತವೆ. ಆದರೆ ಹೊಲಸು ಮಾಡಿಕೊಳ್ಳದೇ ಬದುಕುವುದೇ ನಿಜವಾದ ಜೀವನ. ವ್ಯಕ್ತಿ ತನ್ನ ಜೇಬಿನೊಳಗೆ ಕೈ ಹಾಕಿಕೊಂಡರೆ ಸ್ವಚ್ಛ, ಇದನ್ನು ಬಿಟ್ಟು ಬೇರೊಬ್ಬರ ಜೇಬಿನೊಳಗ ಕೈ ಹಾಕಿದರೆ ಹೊಲಸಾಗುತ್ತದೆ. ಒಳಗೆ ಮನಸ್ಸು ಸ್ವಚ್ಛವಾಗಿ, ಸಮೃದ್ಧಿಯಿಂದಿರಬೇಕು, ಹೊರಗೆ ಮಧುರ ಮಾತುಗಳ ಮೂಲಕ ಪ್ರಸನ್ನತೆಯಿಂದ ಇರುವರೋ ಅವರೆ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಈ ರೀತಿ ತಮ್ಮ 75 ವರ್ಷಗಳ ಜೀವನದಲ್ಲಿ ಸ್ವಚ್ಛ ಮತ್ತು ಸಮೃದ್ಧವಾಗಿ ಜೀವನ ನಡೆಸಿದವರೇ ಸಿದ್ಧರಾಮ ಮಹಾಸ್ವಾಮಿಗಳು ಎಂದು ಹೇಳಿದರು.

ಯಾವುದು ಸತ್ಯದಿಂದ, ಶಿವಮಯದಿಂದ ಮತ್ತು ಸುಂದರವಾಗಿ ಕೂಡಿರುವುದೋ ಅದೇ ಜಗತ್ತು. ಗುರುಗಳು ಧರ್ಮವನ್ನು ರಕ್ಷಿಸುವವರು, ಅನುಭವಿಸುವವರು ಮತ್ತು ಧರ್ಮಪ್ರಸಾರಕರು ಆಗಿರುತ್ತಾರೆ. ಸ್ವಚ್ಛವಾಗಿರುವುದೇ ಧರ್ಮ ಎನಿಸಿಕೊಳ್ಳುತ್ತದೆ. ಜಗತ್ತಿನ ಮನುಷ್ಯರನ್ನು ಸ್ವಚ್ಛವಾಗಿರುವಂತೆ ಮಾಡಿ ಇಡೀ ಜಗತ್ತು ಧರ್ಮಮಯ ಮಾಡುವುದಾಗಿದೆ.

ಹಿಂದೆ ಪ್ರತಿ ಊರುಗಳಲ್ಲಿ ಗುರುಗಳು ಮಠಗಳನ್ನು ಸ್ಥಾಪಿಸಿದರು. ಈ ದಿಶೆಯಲ್ಲಿ ಗುರುಗಳ ಅಮೃತ ಮಹೋತ್ಸವ ಮತ್ತು ನೂತನ ಗುರುಗಳ ಪಟ್ಟಾಧಿಕಾರ ಉತ್ಸವ ಮಾಡಿ, ಇಂಥ ಶ್ರೇಷ್ಠ ಗುರುಗಳ ಮಾರ್ಗದರ್ಶನದಲ್ಲಿ ತಾವೆಲ್ಲಾ ಬದುಕು ಸಾಗಿಸಿದರೆ ಮಠಗಳಿಂದ ಇನ್ನೂ ಹೆಚ್ಚಿನ ಸೇವೆ ಸಾಧ್ಯವಾಗುತ್ತದೆ ಎಂದರು.

Advertisement

ಸೊನ್ನ ದಾಸೋಹಮಠದ ಡಾ| ಶಿವಾನಂದ ಮಹಾಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ, ಕಡಕೋಳ ಮಡಿವಾಳೇಶ್ವರ ಮಠದ ಡಾ| ರುದ್ರಮುನಿ ಶಿವಾಚಾರ್ಯರು, ಶಹಾಪುರ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ, ಮಸ್ಕಿ ಶ್ರೀಗಳು, ಹರ್ಷಾನಂದ ಸ್ವಾಮೀಜಿ, ಹಿರಿಯ ಸಾಹಿತಿ ಎಲ್‌.ಬಿ.ಕೆ ಆಲ್ದಾಳ, ಮಹಾಲಿಂಗಪ್ಪಗೌಡ್ರು, ಗುರುಸಿದ್ಧ ಸನ್ನಳ್ಳಿ, ರಾಜು ಸಾಹು ಡಗ್ಗಾ, ಬಸಲಿಂಗಪ್ಪ ಸಾಹು ಇದ್ದರು. ವಿಶ್ವನಾಥ ಪಾಟೀಲ ನಿರೂಪಿಸಿದರು, ಸಿದ್ಧಲಿಂಗ ದೇವರು ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next