Advertisement

ಬಾಡಿಗೆ ಮನೆ ಖರೀದಿಗೂ ಮುನ್ನೆಚ್ಚರಿಕೆ ಇರಲಿ

09:12 PM Nov 29, 2019 | mahesh |

ಮನುಷ್ಯ ಇರುವ ಜಾಗ ಆತನಿಗೆ ಖುಷಿ ನೀಡುವಂತಿರಬೇಕು. ಅಲ್ಲಿ ಆತನಿಗೆ ನೆಮ್ಮದಿ ಇರಬೇಕು ಎಂದು ಬಯಸುತ್ತಾನೆ. ಅದು ಬಾಡಿಗೆ ಮನೆಯೋ ಸ್ವಂತಧ್ದೋ ಎನ್ನುವುದು ಮಹತ್ವದ್ದಲ್ಲ. ನಾವಿರುವ ಜಾಗ ನಮಗೆ ಖುಷಿ ನೀಡುವಂತಿರಬೇಕು. ಇತ್ತೀಚೆಗೆ ಎಲ್ಲರೂ ಹೊರಗಡೆ ಕೆಲಸಕ್ಕೆ ಹೋಗುವುದರಿಂದ ಒತ್ತಡದ ನಡುವೆ ಮನೆಗೆ ಬಂದಾಗ ಮನೆ ಒತ್ತಡವನ್ನು ನಿವಾರಿಸುವಂತಿರಬೇಕು.

Advertisement

ಇತ್ತೀಚೆಗೆ ದೊಡ್ಡ ಕಟ್ಟಡಗಳನ್ನು, ಮನೆಗಳನ್ನು ಕಟ್ಟುವುದು ಮತ್ತು ಅದನ್ನ ಬಾಡಿಗೆಗೆ ನೀಡುವುದು ಹೆಚ್ಚುತ್ತಿದೆ. ನಗರಗಳಲ್ಲಿ ಬಾಡಿಗೆ ಮನೆ ಖರೀದಿಸುವವರ ಸಂಖ್ಯೆಯೂ ಹೆಚ್ಚು. ಪರಿಸ್ಥಿತಿಗನುಗುಣವಾಗಿ ಬಾಡಿಗೆ ಮನೆ ಹಿಡಿದರೂ ಬಾಡಿಗೆ ಮನೆ ಖರೀದಿಗೂ ಮುನ್ನಚ್ಚರಿಕೆ ಅಗತ್ಯ. ನಮ್ಮಲ್ಲಿರುವ ಬಜೆಟ್‌ ಎಷ್ಟು, ಎಷ್ಟು ಜಾಗದ ಅಗತ್ಯವಿದೆ ಎಂಬುದರ ಸರಿಯಾದ ಲೆಕ್ಕಾಚಾರ ಬಾಡಿಗೆ ಖರೀದಿಗೂ ಮುನ್ನ ಅಗತ್ಯ.

1 ಬಜೆಟ್‌
ಎಷ್ಟು ಬಜೆಟ್‌ ಇದೆಯೋ ಅದರ ಆಧಾರದ ಮೇಲೆ ಬಾಡಿಗೆ ಮನೆ ಖರೀದಿಸಿ. ಇದರಿಂದ ಮನೆ ನಿರ್ವಹಣೆ ಸುಲಭ.

2 ಅಗ್ರಿಮೆಂಟ್‌ ಸರಿಯಾಗಿ ಓದಿಕೊಳ್ಳಿ
ಮನೆ ಖರೀದಿಗೂ ಮುನ್ನ ಅಗ್ರಿಮೆಂಟ್‌ ಅನ್ನು ಸರಿಯಾಗಿ ಓದಿಕೊಂಡು ಸಹಿ ಹಾಕಿ. ಇದು ತುಂಬಾ ಅಗತ್ಯವಾಗಿದೆ. ವಿದ್ಯುತ್‌ ಬಿಲ್‌, ನೀರಿನ ಬಿಲ್‌ನ ಕುರಿತು ಸರಿಯಾಗಿ ಮಾಹಿತಿ ಪಡೆದುಕೊಂಡು ಅನಂತರ ಅಗ್ರಿಮೆಂಟ್‌ಗೆ ಸಹಿ ಮಾಡುವುದು ಸೂಕ್ತ. ಮನೆಯ ಸುತ್ತಲಿನ ಪರಿಸರದ ಕುರಿತು ಮಾಹಿತಿ ಪಡೆದುಕೊಳ್ಳಿ. ಪರಿಸರ ಹೇಗಿದೆ, ಅಲ್ಲಿರುವ ಜನರು ಹೇಗಿದ್ದಾರೆ ಎನ್ನುವ ಕುರಿತು ಸರಿಯಾದ ಮಾಹಿತಿ ಪಡೆದುಕೊಳ್ಳಿ

3 ಮೂಲಸೌಕರ್ಯಗಳ ಕುರಿತು
ಮನೆಯ ಆಸುಪಾಸಿನಲ್ಲಿ ಬೇಕಾದ ಆಸ್ಪತ್ರೆ ಮುಂತಾದವುಗಳು ಇವೆಯೇ ಎಂಬುದನ್ನು ತಿಳಿಯುವುದು ಅಗತ್ಯ. ಮನೆಯ ಪಕ್ಕದಲ್ಲಿ ಅಂಗಡಿ, ಆ ಊರಿಗೆ ಬಸ್ಸು ಮೊದಲಾದ ವ್ಯವಸ್ಥೆಗಳಿವೆಯೇ ಎನ್ನುವುದನ್ನು ತಿಳಿದುಕೊಳ್ಳಿ.

Advertisement

4 ಮನೆಯೊಳಗಿನ ಅಗತ್ಯತೆಗಳ ಕುರಿತು ತಿಳಿದುಕೊಳ್ಳಬೇಕು
ಮನೆಯೊಳಗೆ ಏನೆಲ್ಲಾ ಅಗತ್ಯಗಳು ಬೇಕೋ ಅವುಗಳಿವೆಯೋ ಎನ್ನುವುದನ್ನು ತಿಳಿದುಕೊಂಡಿರಬೇಕು. ನೀರಿನ ಸೌಲಭ್ಯ, ವಿದ್ಯುತ್‌, ಶೌಚಾಲಯ ಮುಂತಾದ ಸೌಲಭ್ಯಗಳು ಹೇಗಿವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.

ಮನೆ ಸ್ವಂತದ್ದಿರಲಿ, ಬಾಡಿಗೆಯದ್ದಿರಲಿ ಮನೆಯ ವಾತಾವರಣ ಸುಂದರವಾಗಿರಬೇಕು. ಆದ್ದರಿಂದ ಮನೆ ಖರೀದಿ ಮಾಡುವ ‌ ಮುನ್ನ ಎಚ್ಚರಿಕೆ ವಹಿಸಿ.

-  ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next