ಜಾಯಿಕಾಯಿ ಚಟ ಮಾನಸಿಕ ಗೊಂದಲಗಳು, ಅನಿಶ್ಚಿತತೆ, ಮೆಮೊರಿ ಲಾಸ್ ಮತ್ತು ಮಾನಸಿಕ ಸ್ಥಿತಿಯಲ್ಲಿ ಖಂಡಿತವಾಗಿಯು ಏರುಪೇರು ಮಾಡುತ್ತದೆ. ಇದು ಲಿವರಿನ ಮೇಲೆ ಹಾನಿ ಮಾಡಿ ಸಿರೋಸ್ಸಿನ್ ಗೆ ಕಾರಣವಾಗಬಹುದು.
ಜಾಯಿಕಾಯಿ ವಿವಿಧ ಸಿಹಿತಿಂಡಿಗಳು ಮತ್ತು ಭಕ್ಷಗಳಿಗಾಗಿ ಅಡುಗೆಮನೆಯಲ್ಲಿ ಬಳಸುವ ಸಾಮಾನ್ಯ ಮಸಾಲೆ. ಇದು ಆಹಾರಕ್ಕೆ ಹೆಚ್ಚಿನ ರುಚಿಯನ್ನು ನೀಡುತ್ತದೆ. ಜಾಯಿಕಾಯಿಯ ತೈಲ ಮತ್ತು ಬೆಣ್ಣೆ ಒಂದು ವಾಣಿಜ್ಯ ಮೂಲವಾಗಿದೆ. ಆಯುರ್ವೇದದಲ್ಲಿ ವಿವಿಧ ರೋಗದ ಚಿಕಿತ್ಸೆಗೆ ಇದರ ಬಳಕೆ ಹೆಚ್ಚಾಗಿ ಕಾಣಿಸಿಕೊಂಡಿದೆ. ನೋವು ನಿವಾರಣೆಯಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿದೆ. ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದ್ದೇ ಆದರೆ ಮ್ಯಾಜಿಕಲ್ ಔಷದವೆನಿಸಬಹುದು.
ಇತ್ತೀಚಿನ ವರದಿಯ ಪ್ರಕಾರ ಜಾಯಿಕಾಯಿಯಿಂದ ಆದ ಘಟನೆಗಳು ಉದ್ಧೇಶಪೂರ್ವಕವಾಗಿದ್ದು, ಆಕಸ್ಮಿಕವಾದದ್ದು ಬಾರಿ ಕಡಿಮೆ.
ಜಾಯಿಕಾಯಿಯ ಅತಿಯಾದ ಸೇವನೆಯ ಪರಿಣಾಮಗಳು ಮದ್ಯಪಾನ ಮತ್ತು ಗಾಂಜಾ ಸಂಯೋಜನೆಯಿಂದ ಸೇರಿಸಲ್ಪಟ್ಟ ಪರಿಣಾಮಗಳಿಗೆ ಸಮಾನವಾಗಿರುವ ಡ್ರಗ್ ಅಥವಾ ಮಾದಕವಸ್ತುವಾಗಿ ಕಾರ್ಯನಿರ್ವಹಿಸುತ್ತದೆ.ಇದು ತನ್ನದೆ ಆದ ಕ್ರಿಯಾ ಕಾರ್ಯವಿಧಾನವನ್ನು ಹೊಂದಿದೆ ಮತ್ತು ಗರಿಷ್ಠ ಸಮಯ ಹೊಂದಿದೆ. ಇದು ನಿದ್ರೆಯನ್ನು ಪ್ರೇರೇಪಿಸುತ್ತದೆ.
ಶಿಶುಗಳನ್ನು ಹತೋಟಿಯಲ್ಲಿ ಇಡಲು ದೀರ್ಘಕಾಲದವರೆಗೆ ಬಳಸುವುದು ಹಾನಿಕಾರಕ ಪರಿಣಾಮವನ್ನು ಉಂಟುಮಾಡುತ್ತದೆ. ಇದನ್ನು ಮಕ್ಕಳಿಂದ ದೂರವಿಡಬೇಕು. ಗರ್ಭಾವಸ್ಥೆಯಲ್ಲಿ ಜಾಯಿಕಾಯಿ ಸೇವನೆ ಗರ್ಭಪಾತಕ್ಕೆ ಕಾರಣವಾಗಬಹುದು. ಮಗು ಜನಿಸಿದರೆ ಖಂಡಿತವಾಗಿ ಜನನ ದೋಷಗಳ ಉಪಸ್ಥಿತಿ ಇರುತ್ತದೆ. ಜಾಯಿಕಾಯಿ ದುರುಪಯೋಗ ರಕ್ತದ ಹಿಮೋಗ್ಲೋಬಿನ್ ಅಂಶದ ಹೆಚ್ಚಳದಿಂದಾಗಿ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗಬಹುದು. ಇದು ವ್ಯಕ್ತಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ.
ಜಾಯಿಕಾಯಿ ಚಟದ ಲಕ್ಷಣ
· ತಲೆನೋವು- ಸ್ನಾಯು ದೌರ್ಬಲ್ಯ
· ಜ್ವರ-ಬಾಯಾರಿಕೆ
· ವಾಕರಿಕೆ-ಯುಫೋರಿಯ
· ವಾಂತಿ- ನಿಯಂತ್ರಣ ಇಲ್ಲದ ವರ್ತನೆ
· ತಲೆಸುತ್ತುವಿಕೆ- ಸೈಕೋಟಿಕ್ ಎಪಿಸೋಡ್
· ನಿರ್ಜಲೀಕರಣ
· ಜೋರಾದ ನಾಡಿಬಡಿತ
· ಹಾರ್ಟ್ ಪಾಲ್ಪಿಟೇಷನ್ಸ್ (ಕೋಮ)
· ಆತಂಕ
· ನಡವಳಿಕೆಯಲ್ಲಿ ಬದಲಾವಣೆ
· ಡೆಲೆರಿಯಮ್
· ದೇಹದಲ್ಲಿ ಬಿಸಿ ಅಥವಾ ಶೀತ ಸಂವೇದನೆಗಳು
· ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ
· ಒಣ ಬಾಯಿ, ಹೈಪೋಟೆನ್ಶನ್, ನೆನಪಿನ ಶಕ್ತಿ ಕಡಿಮೆಯಾಗುವುದು.
- ಡಾ| ರಶ್ಮಿ ಭಟ್