Advertisement

ವರ್ತಕರು, ಗ್ರಾಹಕರು ಜಾಗ್ರತೆ ವಹಿಸಿ

05:54 AM Jul 08, 2020 | Lakshmi GovindaRaj |

ಮೈಸೂರು: ವ್ಯಾಪಾರ ವಹಿವಾಟು ಸಂದರ್ಭದಲ್ಲಿ ವರ್ತಕರು, ಗ್ರಾಹಕರು ಕಡ್ಡಾಯ ಮಾಸ್ಕ್ ಹಾಕುವ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಶಾಸಕ ರಾಮದಾಸ್‌ ಹೇಳಿದರು. ನಂಜುಮಳಿಗೆ ತರಕಾರಿ ಮಾರುಕಟ್ಟೆಯಲ್ಲಿ  ಕೋವಿಡ್‌ 19 ಸೋಂಕು ಹರಡದಂತೆ ಥರ್ಮಲ್‌ ಸ್ಕ್ಯಾನಿಂಗ್‌ ಮತ್ತು ಮಾಸ್ಕ್ ಹಾಕುವಂತೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ವ್ಯಾಪಾರ ವಹಿವಾಟು ನಡೆಸುವ ಸಂದರ್ಭದಲ್ಲಿ ಎಲ್ಲರೂ ಎಚ್ಚರಿಕೆ  ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಅದರಲ್ಲೂ ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವವರು ಪ್ರತಿದಿನ ನೂರಾರು ಜನರ ಜತೆ ಸಂಪರ್ಕ ಹೊಂದಿರುತ್ತಾರೆ. ಹಾಗಾಗಿ ವರ್ತಕರು, ಗ್ರಾಹಕರಿಗೆ ಪ್ರಾಥಮಿಕ ಪರೀಕ್ಷೆ ಮಾಡುವ  ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಪ್ರತಿದಿನ ವ್ಯಾಪಾರ ಮಾಡುವ ಒಂದೊಂದು ಪ್ರದೇಶದಲ್ಲಿ ಜಾಗೃತಿ ಮೂಡಿಸ ಲಾಗುವುದು. ಮೈಸೂರು ಜನತೆ ಅನಾವ  ಶ್ಯಕವಾಗಿ ಓಡಾಡುವುದು ಕಡಿಮೆ ಮಾಡಬೇಕು. ಮಕ್ಕಳಲ್ಲಿ, ವಯಸ್ಸಾದವರಲ್ಲಿ  ಕೋವಿಡ್‌ 19 ಕೇಸ್‌ಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಎಸಿಪಿ ಪೂರ್ಣಚಂದ್ರ ತೇಜಸ್ವಿ,  ಪೊಲೀಸ್‌  ನಿರೀಕ್ಷಕರಾದ ಶ್ರೀನಿವಾಸ್‌, ವೆಂಕಟೇಶ್‌, ವಿನಯ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next