Advertisement

ಮನಸ್ಸು, ಮನೆ ಗಟ್ಟಿ ಮಾಡಿ ಸಿಮೆಂಟ್‌ ಬಳಸುವಾಗ ಎಚ್ಚರವಿರಲಿ

12:02 PM Jun 12, 2017 | Harsha Rao |

ಈ ಮೊದಲು ನಮ್ಮಲ್ಲಿ ಬಳಕೆಯಲ್ಲಿದ್ದ ಗಾರೆಗಳಿಗೆ ಹೋಲಿಸಿದರೆ ಸಿಮೆಂಟ್‌ ಮಾರ್ಟರ್‌ ತುಂಬಾನೆ ಗಟ್ಟಿ ಮುಟ್ಟಾಗಿರುತ್ತದೆ. ಉತ್ತಮ ನೀರು ನಿರೋಧಕ ಗುಣ ಹೊಂದಿರುವ ಈ ಬೆರಕೆ ವಸ್ತು ಬೇಗನೆ ಗಟ್ಟಿಗೊಳ್ಳುವುದರಿಂದ ಮಳೆ ಬಂದರೂ ಉಪಟಳವಾಗುವುದಿಲ್ಲ. ಸುಣ್ಣದ ಗಾರೆ ಆದರೆ ನಾಲ್ಕಾರು ದಿನ ತೆಗೆದುಕೊಳ್ಳುತ್ತಿತ್ತು ನೀರುನಿರೋಧಕ ಗುಣ ಪಡೆಯಲು. ಆದರೆ ಹೀಗೆ ಸುಲಭದಲ್ಲಿ ಗಟ್ಟಿಗೊಳ್ಳುವ ಗುಣವೇ ಅನೇಕಬಾರಿ ಇದರ ಅವಗುಣವಾಗಿಯೂ ಆಗಿದೆ.

Advertisement

ಸುಣ್ಣದ ಮಾರ್ಟರ್‌ ಕ್ಯೂರ್‌ ಆಗುವಾಗ ಹಿಗ್ಗಿದರೆ ಸಿಮೆಂಟ್‌ ಗಾರೆ ಕುಗ್ಗುತ್ತದೆ. ಆದುದರಿಂದ ಮರಳಿಗೆ ಹೆಚ್ಚು ಸಿಮೆಂಟ್‌ ಮಿಕ್ಸ್‌ ಮಾಡಿದಷ್ಟೂ ಹೆಚ್ಚು ಕುಗ್ಗಿ, ಅನಗತ್ಯ ಬಿರುಕುಗಳು ಬಿಡುವುದು ಸಾಮಾನ್ಯ. ಇದರಿಂದಾಗಿ ನೀರು ನಿರೋಧಕ ಗುಣವೂ ಕುಗ್ಗಿ ತೇವದ ತೊಂದರೆಯ ಜೊತೆಗೆ ಕಂಬಿಗಳು ತುಕ್ಕು ಹಿಡಿಯುತ್ತವೆ. ಇದೆಲ್ಲವನ್ನೂ ತಪ್ಪಿಸಲು ನಾವು ಸಿಮೆಂಟ್‌ ಅನ್ನು ಜಾಗರೂಕತೆಯಿಂದ ಬಳಸಿದರೆ ಹಣದ ಉಳಿತಾಯ ಆಗುವುದರ ಜೊತೆಗೆ ನಮಗೆ ಗಟ್ಟಿಮುಟ್ಟಾದ ಹಾಗೂ ಹೆಚ್ಚು ದಿನ ಬಾಳಿಕೆ ಬರುವ ಮನೆ ಲಭ್ಯವಾಗುತ್ತದೆ.

ಮರಳು ಸಿಮೆಂಟ್‌ ಲೆಕ್ಕಾಚಾರ
ಮರಳಿನ ಕಣಗಳ ಮಧ್ಯೆ ಸಿಮೆಂಟ್‌ ಕೂತು ಬೆಸೆಯುವುದರಿಂದ, ಸಾಮಾನ್ಯವಾಗಿ ನಾವು ಎಷ್ಟು ಸಿಮೆಂಟ್‌ ಬಳಸುತ್ತೇವೆ, ಎಷ್ಟು ಚೆನ್ನಾಗಿ ಮರಳಿನ ಕಣಗಳು ಕೂಡಿಕೊಂಡವು ಎಂಬುದನ್ನು ಆಧರಿಸಿ ಗಾರೆಯ ಶಕ್ತಿ ನಿರ್ಧಾರವಾಗುತ್ತದೆ. ಸಿಮೆಂಟ್‌ ಕಡಿಮೆ ಹಾಕಿದರೆ ಮರಳಿನ ಕಣಗಳು ಸರಿಯಾಗಿ ಬೆಸೆಯದ ಕಾರಣ, ಮಿಕ್ಸರ್‌ ಹೆಚ್ಚು ದೃಢವಾಗಿರುವುದಿಲ್ಲ. ಅದೇ ರೀತಿಯಲ್ಲಿ ಹೆಚ್ಚುವರಿ ಸಿಮೆಂಟ್‌ ಹಾಕಿ, ಸಂದಿಯೆಲ್ಲ ತುಂಬಿಕೊಂಡರೂ ಉಳಿಕೆ ಆಗುವಷ್ಟು ಹಾಕಿದ್ದರೆ, ಈ ಎಕ್ಸ್‌ಟ್ರಾ ಸಿಮೆಂಟ್‌ ಮರಳಿನ ಬಂಧನಕ್ಕೆ ಒಳಗಾಗದ ಕಾರಣ ಸುಲಭದಲ್ಲಿ ಕುಗ್ಗಿ- ಸಿಮೆಂಟ್‌ ಗಾರೆ ಹೆಚ್ಚು ಶಿಂಕ್‌ ಆಗಿಬಿಡುತ್ತದೆ. ಇದರ ಪರಿಣಾಮವಾಗಿ, ಗಾರೆಯಲ್ಲಿ ಬಿರುಕು ಬಿಟ್ಟು, ಒಟ್ಟಾರೆಯಾಗಿ ಹೆಚ್ಚು ಹಾಕಿದ್ದ ಸಿಮೆಂಟ್‌ ಹಾನಿಯನ್ನೇ ಮಾಡಿರುತ್ತದೆ.  ಈ ಕಾರಣದಿಂದಾಗಿ, ನಾವು ಬಳಸುವ ಸಿಮೆಂಟ್‌ ಮಿಕ್ಸ್‌ ಸೂಕ್ತ ವಾಗಿರುವುದು ಅತ್ಯಗತ್ಯ.

ಎಲ್ಲೆಲ್ಲಿ ಯಾವ ಮಿಕ್ಸ್‌ ಸೂಕ್ತ ಎಂಬುದು ಮುಖ್ಯ ಮನೆ ಕಟ್ಟುವಾಗ ಸಾಮಾನ್ಯವಾಗಿ ಗಾರೆಯವರು ಸಿಮೆಂಟ್‌ ಮಿಕ್ಸ್‌ ನತ್ತ ಹೆಚ್ಚು ಗಮನ ಹರಿಸುವುದಿಲ್ಲ. ಸಿಮೆಂಟ್‌ ಮರಳು ಬೆರೆಸುವ ಕಾಯಕ ಹೆಚ್ಚು ಅನುಭವ ಇಲ್ಲದ ಕೂಲಿಯವರೇ ಮಾಡುತ್ತಾರೆ. ಇವರಲ್ಲಿ ಅನೇಕರಿಗೆ, ಒಂದಕ್ಕೆ ಎರಡರಂತೆ, ಒಂದು ಚೀಲ ಸಿಮೆಂಟ್‌ಗೆ ಎಷ್ಟು ಮರಳು ಹಾಕಬೇಕು ಎಂಬುದು ಲೆಕ್ಕಮಾಡಲು ಬರುವುದಿಲ್ಲ. ಆದುದರಿಂದ ಅಂದಾಜಿನ ಮೇಲೆ ಮರಳನ್ನು ಸುರಿಯಲು ತೊಡಗುತ್ತಾರೆ. ಎಲ್ಲಿ ಬೇಕೋ ಅಲ್ಲಿ ಹೆಚ್ಚು ಸಿಮೆಂಟ್‌ ಬೆರಕೆ ಆಗದೆ ಅನಗತ್ಯ ಸ್ಥಳಗಳಲ್ಲಿ ಸಿಮೆಂಟ್‌ ಹೆಚ್ಚು ವ್ಯಯ ಮಾಡಲಾಗುತ್ತದೆ. ಹಾಗಾಗಿ ಸಿಮೆಂಟ್‌ ಮರಳು ಬೆರೆಕೆ ಆಗುವಾಗ ಕಡ್ಡಾಯವಾಗಿ ಸ್ವಲ್ಪವಾದರೂ ಲೆಕ್ಕಾಚಾರ ಗೊತ್ತಿರುವ, ಅನುಭ ಗಾರೆಯವರು ಇಲ್ಲ ಮೇಸಿŒ ನಿಗಾವಹಿಸುವುದು ಮುಖ್ಯ. 

ಮಿಕ್ಸ್‌ ನಿರ್ಧರಿಸುವುದು
ಎಲ್ಲೆಲ್ಲಿ ಕಂಬಿ- ಸ್ಟೀಲ್‌ ರೇನ್‌ಫೋರ್ಮೆಂಟ್‌ ಸಿಮೆಂಟ್‌ ಮಾರ್ಟರ್‌ ಜೊತೆ ಸಂಪರ್ಕಕ್ಕೆ  ಬರುವುದೋ ಅಲ್ಲೆಲ್ಲ ಕಡ್ಡಾಯವಾಗಿ ಸಿಮೆಂಟ್‌, ಮರಳು ಅನುಪಾತ ಒಂದಕ್ಕೆ ಎರಡರಂತೆ ಇರಬೇಕು. ಇಲ್ಲದಿದ್ದರೆ ಈ ಗಾರೆಯ ನೀರು ನಿರೋಧಕ ಗುಣ ಕಡಿಮೆಯಾಗಿ ಸ್ಟೀಲ್‌ ತುಕ್ಕು ಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಮಿಕ್ಸ್‌ ಸಾಮನ್ಯವಾಗಿ ಆರ್‌ಸಿಸಿಯಲ್ಲಿ ಬಳಸಲಾಗುತ್ತದೆ. ಬರಿ ಮರಳು ಮಾತ್ರ ಬಳಸಿದರೆ, ಶಿಂಕ್‌ ಆಗುವುದು ಹೆಚ್ಚಾಗುವ ಕಾರಣ ಮತ್ತಷ್ಟು ದೊಡ್ಡ ಕಣಗಳನ್ನು ಅಂದರೆ ಜೆಲ್ಲಿ ಕಲ್ಲುಗಳನ್ನು ಬಳಸಲಾಗುತ್ತದೆ. ಮರಳಿನ ಕಣಗಳ ಮಧ್ಯೆ ಸಿಮೆಂಟ್‌ ಅಂಟಿನಂತೆ ಉಳಿಯುವ ರೀತಿಯಲ್ಲೇ ಒಂದಕ್ಕೆ ಎರಡು ಹಾಕಿರುವ ಗಾರೆ, ಜೆಲ್ಲಿಕಲ್ಲುಗಳನ್ನು ಬೆಸೆದು, ಗಟ್ಟಿಮುಟ್ಟಾದ ಕಾಂಕ್ರಿಟ್‌ ನಮಗೆ ಲಭ್ಯವಾಗುತ್ತದೆ. ಒಟ್ಟಾರೆಯಾಗಿ ಒಂದಕ್ಕೆ ಎರಡರಷ್ಟು “ರಿಚ್‌’ ಅಂದರೆ ಒಂದು ಪಾಲು ಸಿಮೆಂಟ್‌ಗೆ ಎರಡು ಪಾಲು ಮರಳು ಬೆರೆಕೆ ಮಾಡುವಾಗ, ಜೆಲ್ಲಿಕಲ್ಲು ಬೆರೆಸುವುದು ಅನಿವಾರ್ಯವಾಗುತ್ತದೆ. ಜೆಲ್ಲಿಕಲ್ಲನ್ನು, ನಮ್ಮ ಅಗತ್ಯಕ್ಕೆ ತಕ್ಕಂತೆ ಹಾಗೆಯೇ ಅದರ ಗಾತ್ರದ ಆಧಾರದ ಮೇಲೆ ಒಂದು ಪಾಲು ಗಾರೆಗೆ ಎರಡು ಪಾಲು ಜಲ್ಲಿ ಲೆಕ್ಕದಲ್ಲಿ ಬೆರಕೆ ಮಾಡಲಾಗುತ್ತದೆ. ಸಿಮೆಂಟ್‌ ಗಾರೆಗೆ ಹೋಲಿಸಿದರೆ, ಜೆಲ್ಲಿಕಲ್ಲು ಕಡಿಮೆ ದರದ್ದಾದುದರಿಂದ, ಇದನ್ನು ಬೆರೆಸುವುದರಿಂದ, ನಮಗೆ ಸಾಕಷ್ಟು ಹಣದ ಉಳಿತಾಯ ಆಗುತ್ತದೆ.

Advertisement

ಇತರೆಡೆ ಗಾರೆ ಮಿಕ್ಸ್‌
ಸಿಮೆಂಟ್‌ ಮಾರ್ಟರ್‌ ಅತಿ ಹೆಚ್ಚು ಬಳಸುವುದು ಪ್ಲಾಸ್ಟರ್‌ ಮಾಡಲು. ಮನೆಯ ಒಳಗೆ ಅಲಂಕಾರಕ್ಕೆ ಪ್ಲಾಸ್ಟರ್‌ ಮಾಡಿದರೆ, ಮನೆಯ ಹೊರಗೆ, ಇಟ್ಟಿಗೆ ಕಾಂಕ್ರಿಟ್‌ ಬ್ಲಾಕ್‌ಗಳಿಗೆ ಹೆಚ್ಚುವರಿಯಾದ ನೀರುನಿರೋಧಕ ಗುಣವನ್ನು ನೀಡಲು ಗಾರೆಯನ್ನು ಮೆತ್ತಲಾಗುತ್ತದೆ. 

ಈ ಕಾರಣದಿಂದಾಗಿ ನಾವು ಬಳಸುವ ಮಿಕ್ಸ್‌ ಹೆಚ್ಚು ಬಿರುಕು ಬಿಡುವಂತಿರಬಾರದು. ಸಾಮಾನ್ಯವಾಗಿ ಒಂದು ಪಾಲು ಸಿಮೆಂಟಿಗೆ ಆರು ಪಾಲು ಮರಳನ್ನು ಬೆರೆಸಿದರೆ, ಉತ್ತಮವಾದ ಬಿರುಕು ರಹಿತ ಗಾರೆ ಲಭ್ಯವಾಗುತ್ತದೆ. ಆದರೆ, ಮರಳಿನ ಕಣಗಳ ಗಾತ್ರ ಕಡಿಮೆ ಆದಷ್ಟೂ ಹೆಚ್ಚು ಸಿಮೆಂಟ್‌ ಹಾಕಬೇಕಾಗುತ್ತದೆ. ಅದೇ ರೀತಿಯಲ್ಲಿ, ಮರಳಿನ ಕಣಗಳು ದೊಡ್ಡದಿದ್ದರೆ, ಕಡಿಮೆ ಸಿಮೆಂಟ್‌ನಲ್ಲೇ ಹೆಚ್ಚು ಗಟ್ಟಿತನವನ್ನು ಪಡೆಯಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಹೆಚ್ಚು ಸಿಮೆಂಟ್‌ ಹಾಕಿದಷ್ಟೂ, ಮರಳಿನ ಕಣ ಸಣ್ಣದಾದಷ್ಟೂ ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗುತ್ತದೆ. ಆದುದರಿಂದ ಹೆಚ್ಚು ಅಗಲ ಹಾಗೂ ಉದ್ದದ ಪ್ರದೇಶದಲ್ಲಿ ನುಣ್ಣಗಿನ ಮರಳಿನಿಂದ ಮಾಡಿದ ಗಾರೆಯನ್ನು ಬಳಸಬಾರದು.

ಮರಳಿನ ಕಣಗಳ ಗಾತ್ರ ಹೆಚ್ಚಿದಷ್ಟೂ ಗಟ್ಟಿಮುಟ್ಟಾದ ಗಾರೆ ಸಿಗುವುದು ನಿಜವಾದರೂ, ದೊಡ್ಡ ಗ್ರೇನ್‌ಗಳ ಮಧ್ಯೆ ಸಿಮೆಂಟ್‌ ಕಣಗಳು ಸರಿಯಾಗಿ ಕೂರದ ಕಾರಣ, ದೊಡ್ಡ ಮರಳಿನ ಪ್ಲಾಸ್ಟರ್‌ಗಳಲ್ಲಿ ನೀರು ನಿರೋಧಕ ಗುಣ ಕಡಿಮೆ ಇರುತ್ತದೆ.  ಆದರೆ, ನಮ್ಮಲ್ಲಿ ಪ್ಲಾಸ್ಟರ್‌ ಮಾಡಿದ ಗೋಡೆಗಳಿಗೆ ಪ್ರ„ಮರ್‌ ಬಳಿದು ಬಣ್ಣ ಪೂಸುವುದರಿಂದ, ಈ ಸಣ್ಣ ರಂಧ್ರಗಳು ಮುಚ್ಚಿಕೊಳ್ಳುತ್ತದೆ.  ಒಟ್ಟಾರೆಯಾಗಿ ಉತ್ತಮ, ಬಿರುಕು ರಹಿತ ಪ್ಲಾಸ್ಟರ್‌ ಮಿಕ್ಸ್‌ ನಮ್ಮದಾಗುತ್ತದೆ. ನಮ್ಮ ಮನೆ ಎಂಥ ಪ್ರದೇಶದಲ್ಲಿದೆ ಎಂಬುದನ್ನು ಆಧರಿಸಿ, ಸೂಕ್ತ ಮಿಕ್ಸ್‌ ಅನ್ನು, ಮರಳಿನ ಕಣ ಹಾಗೂ ಜೆಲ್ಲಿ ಗಾತ್ರ ಇತ್ಯಾದಿಯನ್ನು ನೋಡಿಕೊಂಡು ಮಿಶ್ರಣ ನಿರ್ಧರಿಸುವುದು ಉತ್ತಮ.

ಮನೆ ಕಟ್ಟುವ ದಾವಂತದಲ್ಲಿ ನಾವು ಗಟ್ಟಿಮುಟ್ಟಾಗಿರಲಿ ಎಂದು ಹೆಚ್ಚು ಹೆಚ್ಚು ಸಿಮೆಂಟ್‌ ಸುರಿದಿದ್ದರಿಂದಾಗಿ ಕೂದಲೆಳೆ ಗಾತ್ರದ ಬಿರುಕುಗಳು ಎಲ್ಲೆಡೆ ಕಾಣಿಸಿಕೊಂಡರೆ ತಬ್ಬಿಬ್ಟಾಗುವುದು ತಪ್ಪಿದ್ದಲ್ಲ. ಸಾಮಾನ್ಯವಾಗಿ ಈ ಮಾದರಿಯ ಸಣ್ಣ ಬಿರುಕುಗಳು ಹೆಚ್ಚು ಹಾನಿ ಉಂಟು ಮಾಡುವುದಿಲ್ಲವಾದರೂ, ಅನಗತ್ಯ ತೊಂದರೆ ತಪ್ಪಿಸುವುದು ಸುಲಭ ಆದಕಾರಣ, ಸಿಮೆಂಟ್‌ ಮಿಕ್ಸ್‌ ಮಾಡುವಾಗ ಸ್ವಲ್ಪ ಕಾಳಜಿವಹಿಸುವುದು ಉತ್ತಮ.

ಹೆಚ್ಚಿನ ಮಾತಿಗೆ :98441 32826 

Advertisement

Udayavani is now on Telegram. Click here to join our channel and stay updated with the latest news.

Next