Advertisement

ಎ.ಟಿ.ಎಂನಿಂದ ಹಣ ಡ್ರಾ ಮಾಡುವಾಗ ಎಚ್ಚರ!

12:21 PM Oct 30, 2017 | Team Udayavani |

ಹೋದ ವರ್ಷ ಬಹುತೇಕ ಬಾರತೀಯ ಬ್ಯಾಂಕುಗಳ ಖಾತೆಗಳಿಗೆ ಹ್ಯಾಕರ್‌ಗಳು ಕನ್ನ ಹಾಕಿದ್ದರು. ಕಮ್ಮಿಯೆಂದರೂ 32 ಲಕ್ಷ ಖಾತೆಗಳು ಹ್ಯಾಕ್‌ ಆಗಿದ್ದವು. ಬ್ಯಾಂಕ್‌ ವ್ಯವಹಾರಗಳೆಲ್ಲವೂ ಆನ್‌ಲೈನ್‌ಮಯವಾಗಿರುವ ಈ ಸಂದರ್ಭದಲ್ಲಿ ಹ್ಯಾಕರ್‌ಗಳ ಕಣ್ಣು ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೇಲೆ ಬಿದ್ದಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಜನಸಾಮಾನ್ಯರ ಹಣವನ್ನು ಸುರಕ್ಷಿತವಾಗಿರಿಸಲು ಬ್ಯಾಂಕುಗಳು ಹೇಗೆ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿವೆಯೋ, ಅದೇ ರೀತಿ ಕಳ್ಳರು ಇಂಟರ್‌ನೆಟ್‌ ಖಾತೆ, ಎಟಿಎಂಗಳಿಂದಲೂ ಹಣ ಕದಿಯಲು ತಂತ್ರಜ್ಞಾನದ ಮೊರೆ ಹೊಕ್ಕಿದ್ದಾರೆ. ಜನಸಾಮಾನ್ಯರ ಊಹೆಗೂ ನಿಲುಕದ ಇಂಥ ಕುತಂತ್ರಗಳ ಕುರಿತು ಜನರು ತಿಳಿದುಕೊಳ್ಳುವುದು ಸೂಕ್ತ. ಅವುಗಳಲ್ಲಿ ಐದನ್ನು ಇಲ್ಲಿ ನೀಡಿದ್ದೇವೆ… ಮುಂದಿನ ಬಾರಿ ಎ.ಟಿ.ಎಂ ಗೆ ಹೋದಾಗ ಎಚ್ಚರಿಕೆ ವಹಿಸಿ…

Advertisement

1. ಹಿಡನ್‌ ಕ್ಯಾಮೆರಾಗಳು
ಎ.ಟಿ.ಎಂ ಒಳಗಡೆ ಬ್ಯಾಂಕ್‌ನವರ ಸಿ.ಸಿ ಟಿವಿಯನ್ನು ಹೊರತುಪಡಿಸಿ ಹಿಡನ್‌ ಕ್ಯಾಮೆರಾಗಳೇನಾದರೂ ಇದೆಯಾ ಎಂದು ಒಮ್ಮೆ ಕಣ್ಣು ಹಾಯಿಸಿ. ಎ.ಟಿ.ಎಂ ಪಿನ್‌ ಕೋಡ್‌ ಕದಿಯಲೆಂದು ಹಿಡನ್‌ ಕ್ಯಾಮೆರಾಗಳನ್ನು ಬಳಸುತ್ತಾರೆ. ನೀವು ಹಣ ಡ್ರಾ ಮಾಡಲೆಂದು ಪಿನ್‌ ಕೋಡು ಟೈಪ್‌ ಮಾಡುವಾಗ ಕೈಯನ್ನು ಅಡ್ಡ ಇರಿಸಿಕೊಂಡು ಮಾಡಬಹುದು.

2. ನಕಲಿ ಕೀಪ್ಯಾಡ್‌
ಪಿನ್‌ಕೋಡ್‌ ಟೈಪ್‌ ಮಾಡಲು ಬಳಸುವ ಕೀಪ್ಯಾಡ್‌ಅನ್ನೂ ಕಳ್ಳರು ಕದಿಯುವ ಅಸ್ತ್ರವನ್ನಾಗಿ ಉಪಯೋಗಿಸುತ್ತಾರೆ. ಎಟಿ.ಎಂ ಮೆಶೀನಿನ ಕೀಪ್ಯಾಡ್‌ ಮೇಲೆ ನಕಲಿ ಕೀಪ್ಯಾಡ್‌ಅನ್ನು ಅಳವಡಿಸಲಾಗಿದೆಯೇ ಎಂದು ಚೆಕ್‌ ಮಾಡಿ ನಂತರವೇ ಪಿನ್‌ಕೋಡ್‌ ಟೈಪಿಸಿ. ಇಲ್ಲದೇ ಹೋದರೆ ನಿಮ್ಮ ಪಿನ್‌ ಅದರಲ್ಲಿ ರೆಕಾರ್ಡ್‌ ಆಗುತ್ತದೆ. 

3. ನಕಲಿ ಕಾರ್ಡ್‌ ಕಿಂಡಿ
ಎ.ಟಿ.ಎಂ ಕಾರ್ಡನ್ನು ತೂರಿಸುವ ಕಿಂಡಿ ಇದೆಯಲ್ಲ ಅದನ್ನು ಕಾರ್ಡ್‌ ಸ್ಲಾಟ್‌ ಎನ್ನುತ್ತಾರೆ. ಕಳ್ಳರು ಅದರ ಮೇಲೆ ಕಾರ್ಡ್‌ ರೀಡರ್‌ ಅನ್ನು ಇಟ್ಟಿರುವ ಸಾಧ್ಯತೆಯೂ ಇದೆ. ಕಿಂಡಿ ಅಲುಗಾಡುತ್ತಿದ್ದರೆ, ಅಥವಾ ತುಂಬಾ ಮುಂದಕ್ಕೆ ಚಾಚಿಕೊಂಡಿದ್ದರೆ ಕಾರ್ಡ್‌ ತೂರಿಸಬೇಡಿ. ಕಳ್ಳರ ಕಾರ್ಡ್‌ ರೀಡರ್‌ ನಿಮ್ಮ ಎಟಿಎಂ ಕಾರ್ಡಿನಲ್ಲಿರುವ ರಹಸ್ಯ ಮಾಹಿತಿಯನ್ನು ಕದ್ದಿಟ್ಟುಕೊಳ್ಳುತ್ತದೆ.

4. ಲೆಬನೀಸ್‌ ಟ್ರಿಕ್‌
ಕೆಲವು ಎಟಿಎಂಗಳಲ್ಲಿ ಕಾರ್ಡು ಪೂರ್ತಿಯಾಗಿ ಮೆಶೀನಿನ ಒಳಕ್ಕೆ ಹೋಗುವ ವ್ಯವಸ್ಥೆಯಿರುತ್ತದೆ. ಟ್ರಾನ್ಸಾಕ್ಷನ್‌ ಮುಗಿದ ನಂತರ ಅಟೋಮ್ಯಾಟಿಕ್‌ ಆಗಿ ಹೊರಬರುತ್ತದೆ. ಈ ವ್ಯವಸ್ತೆಯನ್ನು ದುರುಪಯೋಗ ಪಡಿಸಿಕೊಂಡ ಕೀರ್ತಿ ಆಫ್ರಿಕದ ಖದೀಮರಿಗೆ ಸಲ್ಲುತ್ತದೆ. ಅದಕ್ಕೇ ಈ ಟ್ರಿಕ್ಕನ್ನು ಲೆಬನೀಸ್‌ ಟ್ರಿಕ್‌ ಎನ್ನುವರು. ಇಲ್ಲಿ ಕಾರ್ಡು ಪೂರ್ತಿ ಒಳಗೆ ಹೋಗದ ಹಾಗೆ ತಂತಿಯನ್ನು ಸಿಕ್ಕಿಸಲಾಗಿರುತ್ತದೆ. ಹೀಗಾಗಿ ಮಶೀನು ಪದೇ ಪದೇ ಎಟಿಎಂ ಪಿನ್‌ ಕೇಳುತ್ತಲೇ ಇರುತ್ತದೆ, ಅಥವಾ ಇನ್ಸರ್ಟ್‌ ಮಾಡಿ ಎಂದು ಹೇಳುತ್ತಲೇ ಇರುತ್ತದೆ. ಕಾರ್ಡು ಪೂರ್ತಿ ಒಳಕ್ಕೆ ಹೋಗಿದೆ ಎಂದು ಭ್ರಮಿಸಿ ದೂರು ನೀಡಿ ಕಾರ್ಡು ಪಿಂದಕ್ಕೆ ಪಡೆದರಾಯಿತು ಎಂದು ಬಳಕೆದಾರ ವಾಪಸ್ಸಾಗುತ್ತಾನೆ. ನಂತರ ಕಳ್ಳ ಬಂದು ಆ ಕಾರ್ಡನ್ನು ಎಗರಿಸುತ್ತಾನೆ.

Advertisement

5. ಇಡೀ ಸೆಟ್ಟೇ ನಕಲಿ
ಇನ್ನು ಕೆಲ ಸಂದರ್ಭಗಳಲ್ಲಿ ಇಡೀ ಎಟಿಎಂ ಮೇಶೀನಿನ ಇಡೀ ಮುಂಭಾಗವನ್ನೇ ಬದಲಿಸಿ ತಮ್ಮ ಮೆಶೀನನ್ನು ಅಳವಡಿಸಿರುತ್ತಾರೆ. ಇದನ್ನು ಪತ್ತೆ ಹಚ್ಚುವುದು ಕಷ್ಟ ನಿಜ ಆದರೆ ಅಸಾಧ್ಯವೇನಲ್ಲ. ನಕಲಿ ಮೆಶೀನು ಸಾಮಾನ್ಯವಾಗಿ ದೊಡ್ಡ ಆಕಾರದಲ್ಲಿ, ವಿಭಿನ್ನ ಆಕೃತಿಯಲ್ಲಿರುತ್ತದೆ. ಅಂಥ ಸಂದರ್ಭದಲ್ಲಿ ಇತರರ ಸಲಹೆ ಪಡೆದು ಮುಂದುವರಿಯಿರಿ.

Advertisement

Udayavani is now on Telegram. Click here to join our channel and stay updated with the latest news.

Next