Advertisement
ಸೋಫಾ ಇಡಬೇಕಾದ ಜಾಗವನ್ನು ಅಳತೆ ಮಾಡಿಸೋಫಾವನ್ನು ಖರೀಸುವಾಗ ಮೊದಲು ಮಾಡಬೇಕಾದ ಕೆಲಸವೆಂದರೆ ನೀವು ಸೋಫಾವನ್ನು ಇಡಬಯಸುವ ಜಾಗದ ಅಳತೆ ಮಾಡಿಕೊಳ್ಳುವುದು. ನೀವು ಅಂಗಡಿ ಅಥವಾ ಶೋ ರೂಂಗಳಿಂದ ನೇರವಾಗಿ ಸೋಫಾವನ್ನು ಕೊಂಡೊಯ್ಯುವ ಬದಲಿ ನಿಮ್ಮ ಮನೆಗೆ ಎಷ್ಟು ದೊಡ್ಡದು ಅಥವಾ ಎಷ್ಟು ಚಿಕ್ಕ ಸೋಫಾ ಬೇಕು ಎಂಬುವುದನ್ನು ಅಳತೆ ಮಾಡಿಕೊಂಡು ನಂತರ ಸೋಫಾ ಖರೀದಿಸಿಕೊಳ್ಳಿ.
ಸೋಫಾವನ್ನು ಖರೀದಿಸುವಾಗ ಮನೆಯಲ್ಲಿರುವ ಉಳಿದ ಪೀಠೊಪಕರಣಗಳ ಶೈಲಿಯೊಂದಿಗೆ ಸಮನ್ವಯಗೊಳಿಸಿ ಸೋಫಾ ಖರೀದಿಸಿ. ಹಾಗಾಗಿ ನಿಮಗೆ ಕಲಾತ್ಮಕ ಅಥವಾ ಇನ್ನಾವುದೇ ಶೈಲಿಯಲ್ಲಿ ನಿಮಗೆ ಅನುಕೂಲವಾಗುವಂತೆ ಸೋಫಾ ಖರೀದಿಸಿ. ಸೋಪಾ ಖರೀದಿಸುವಾಗ ಅದರ ವಿನ್ಯಾಸ ಹಾಗೂ ನಿಮ್ಮ ಉಳಿದ ಪೀಠೊಪಕರಣಗಳೊಂದಿಗೆ ಸೋಫಾ ಹೇಗೆ ಕಾಣುತ್ತದೆ ಎಂಬುವುದರ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ. ನೀವು ಸೋಫಾವನ್ನು ಖರೀದಿ ಮಾಡುವಾಗ ಅದರಲ್ಲಿ ಬಳಸಿರುವ ಬಟ್ಟೆಯ ಬಗ್ಗೆ ಸರಿಯಾಗಿ ಗಮನ ಕೊಡಿ. ನೀವು ಸೋಫಾವನ್ನು ಹೇಗೆ ಬಳಸುತ್ತೀರಿ, ಎಲ್ಲಿ ಇಡುತ್ತೀರಿ ಎಂಬುವುದನ್ನು ನೀವು ಮೊದಲೇ ತಿಳಿದುಕೊಂಡು ಅನಂತರ ಫ್ಯಾಬ್ರಿಕ್‌ನನ್ನು ಆಯ್ಕೆ ಮಾಡಿಕೊಳ್ಳಿ. ನೀವು ಸೋಫಾ ಖರೀದಿಸುವಾಗ ಅದರ ಬಣ್ಣವನ್ನು ಗಮನದಲ್ಲಿಟ್ಟುಕೊಳ್ಳಿ. ಮನೆಯ ಇತರ ಪೀಠೊಪಕರಣ, ಗೋಡೆಯ ಬಣ್ಣ ಮುಂತಾದವುಗಳನ್ನು ಗಮನಿಸಿ ಸೋಫಾವನ್ನು ಖರೀದಿಸುವುದು ಉತ್ತಮ.
Related Articles
ಸೋಫಾವನ್ನು ಖರೀದಿಸಿದ್ದೀರಿ ಎಂದಾದರೆ ಅದರ ಸ್ವತ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಸೋಫಾವನ್ನು ಸ್ವಚ್ಛಗೊಳಿಸುವಾಗ ಬಟ್ಟೆ, ವ್ಯಾಕ್ಯೂಮ್ ಕ್ಲೀನರ್‌ನನ್ನು ಬಳಸಿಕೊಂಡು ಅದರ ಮೇಲೆ ಇರುವ ಧೂಳು ಕಸ ಇನ್ನಿತರ ವಸ್ತುಗಳನ್ನು ಸ್ವತ್ಛಗೊಳಿಸಿ. ಸೋಫಾ ಕಲೆಗಳಿಂದ ಕೂಡಿದರೆ ಅಥವಾ ಗಟ್ಟಿಯಾದ ಧೂಳು ತುಂಬಿಕೊಂಡಿದ್ದರೆ ಅದನ್ನು ಶುಚಿಗೊಳಿಸಲು ಗಟ್ಟಿ ಮುಟ್ಟಾದ ಬ್ರಶ್ ಬಳಸಿಕೊಂಡು ಸೋಫಾ ಶುಚಿಗೊಳಿಸಬಹುದು. ವಾರಕ್ಕೊಂದು ಬಾರಿ ಸೋಫಾಕ್ಕೆ ಬಳಸಿ ಬಟ್ಟೆಗಳನ್ನು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.
Advertisement
ಆರಾಮದಾಯಕ ನೋಡಿಕೊಳ್ಳಿಮನೆಯಲ್ಲಿರುವ ಸೋಫಾ ಜಾಗಕ್ಕೆ ತುಂಬಾ ದೊಡ್ಡದಾಗಿರಬಾರದು ಅಥವಾ ತುಂಬಾ ಚಿಕ್ಕದಾಗಿಯೂ ಇರಬಾರದು. ನೀವು ಎತ್ತರವಾಗಿದ್ದರೆ ಸೋಫಾದ ಆಸನಗಳು ಆಳವಾಗಿದಿಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಅದು ನಿಮಗೆ ಆರಾಮದಾಯಕವಾಗಿ ಕುಳಿತುಕೊಳ್ಳುವಂತೆ ಮಾಡುತ್ತದೆಯೇ ಎಂಬುವುದನ್ನು ಅರಿತುಕೊಳ್ಳಿ. - ಪೂರ್ಣಿಮಾ ಪೆರ್ಣಂಕಿಲ