ಕಲಾಂಗಣದಲ್ಲಿ ನಡೆದ 209ನೇ ತಿಂಗಳ ವೇದಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
Advertisement
ಮಾಂಡ್ ಸೊಭಾಣ್‌ದಂತಹ ಸಂಸ್ಥೆಗಳು ಆಯೋಜಿಸುವ ವಿಭಿನ್ನ ಮಾದರಿಯ ಶಿಬಿರಗಳು ನಮಗೆ ಭರ ವಸೆಯಾಗಿ ಕಾಣುವುದು. ಇಲ್ಲಿ ಮಕ್ಕಳ ಪ್ರತಿಭೆಗಳು ಸಾಣೆ ಹಿಡಿದು ವೇದಿಕೆಯಲ್ಲಿ ಪ್ರಜ್ವಲಿಸುತ್ತವೆ. ಖಮಿರ್ ಶಿಬಿರ ಇದ ಕ್ಕೊಂದು ಉದಾಹರಣೆಯೆಂದರು.
ವಿಭಾಗ ಶ್ರೇಷ್ಠ ಶಿಬಿರಾರ್ಥಿಯಾಗಿ ಆಯ್ಕೆಯಾದ ಒಲಿಟಾ ಪಿಂಟೊ (ಗಾಯನ) ಮೆಲ್‌ರೊಯ್ ಲೋಬೋ (ನೃತ್ಯ), ರಿಯಾ ಸೋನಲ್ ಲೋಬೋ (ನಾಟಕ) ಅವರಿಗೆ ನಗದು ನೀಡಿ ಗೌರವಿ ಸಲಾಯಿತು. ಶಿಬಿರದ ಯಶಸ್ಸಿಗೆ ಕಾರಣಿಕರ್ತರಾದ ಶಿಬಿರ ನಿರ್ದೇಶಕರಾದ ಎರಿಕ್ ಒಝೇ ರಿಯೊ ನಾಟಕ ವಿಭಾಗದ ವಿಕಾಸ್ ಲಸ್ರಾದೊ, ಮನೀಶ್ ಪಿಂಟೊ, ಆಮ್ರಿನ್ ಡಿ’ಸೋಜಾ, ಶ್ರವಣ್ ಬಾಳಿಗಾ, ಸವಿತಾ ಸಲ್ಡಾನ್ಹಾ, ಫ್ಲಾವಿಯಾ ರೊಡ್ರಿಗಸ್, ನೃತ್ಯ ವಿಭಾಗದ ರಾಹುಲ್ ಪಿಂಟೊ ಮತ್ತು ವೆಲನಿ ಗೋವಿಯಸ್, ಗಾಯನ ವಿಭಾಗದ ಜೇಸನ್ ಲೋಬೋ, ಡಿಯಾಲ್ ಡಿ’ಸೋಜಾ, ಶರ್ವಿನ್ ಡಿ’ಸೋಜಾ, ಜೈಸನ್ ಸಿಕ್ವೇರಾ, ಕೊಂಕಣಿ ಭಾಷೆ ಕಲಿಸಿದ ವಿತೊರಿ ಕಾರ್ಕಳ ಮತ್ತು ಫ್ಲಾವಿಯಾ ರೊಡ್ರಿಗಸ್ ಅವರನ್ನು ಗೌರವಿಸಲಾಯಿತು.ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
Related Articles
ಮಕ್ಕಳಿಂದ ಸಮೂಹ ಗಾಯನ, ನೃತ್ಯ ಪ್ರದರ್ಶನ, ಕವಿತಾ ವಾಚನ, ಕಿರು ನಾಟಕ ಪ್ರಕೃತಿ ನಾಸ್-ಮನ್ಶಾಂಚೆಂ ಸತ್ಯಾನಾಸ್ ಪ್ರಸ್ತುತವಾಯಿತು. ಸಭಾ ಕಾರ್ಯಕ್ರಮವನ್ನು ವಿತೊರಿ ಕಾರ್ಕಳ, ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿಯಾ ಮಸ್ಕರೇನ್ಹಸ್ ಮತ್ತು ಆ್ಯಶಿಲ್ ಮಸ್ಕರೇನ್ಹಸ್ ನಿರ್ವಹಿಸಿದರು.
Advertisement
ಸಮ್ಮಾನ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡಿದ ನಿಹಾಲ್ ತಾವ್ರೊ ಅವರನ್ನು ಕೊಂಕಿ¡ ಗಾಯಾನ್ ನೆಕೆತ್ರ ಬಿರುದು ನೀಡಿ ಸಮ್ಮಾನಿಸಲಾಯಿತು.