Advertisement
ಕೆಲವು ಕಿಡಿಗೇಡಿಗಳು ನಕಲಿ ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದ್ದಾರೆ. ಸರಕಾರ ಕೊರೊನಾ ಸಂಬಂಧ ಪ್ರತಿಯೊಬ್ಬರಿಗೆ 7,500 ರೂ. ಬಿಡುಗಡೆ ಮಾಡಲಿದೆ. ಈ ಲಿಂಕ್ ಒತ್ತಿ ಅದರಲ್ಲಿರುವ ಪ್ರಶ್ನೆ ಗಳಿಗೆ ಉತ್ತರಿಸಿ ಖಾತೆ ವಿವರ ನೀಡುವಂತೆ ಕೇಳಿದ್ದಾರೆ. ಲಿಂಕ್ ಕ್ಲಿಕ್ಮಾಡಿ ಬ್ಯಾಂಕ್ ಖಾತೆ ವಿವರ ದಾಖಲಿಸಿದರೆ ಅವುಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಳ್ಳಲಿದ್ದಾರೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊರೊನಾ ಲಸಿಕೆ ವಿತರಣೆ ಬಗ್ಗೆಯೂ ಸಂದೇಶ ಬರುವ ಸಾಧ್ಯತೆಗಳಿರುತ್ತವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಎಲ್ಲಿಯೂ ಸಾರ್ವಜನಿಕರು ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಿಲ್ಲ. ಯಾರಾದರೂ ಆ ರೀತಿಯ ಸಂದೇಶಗಳು ಅಥವಾ ವೆಬ್‌ಸೈಟ್‌ನ ಲಿಂಕ್‌ಗಳನ್ನು ಕಳುಹಿಸಿದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ. ಅಮೆರಿಕ ಸರ್ವರ್ ಮೂಲಕ ಕಾರ್ಯ
ಈ ವೆಬ್‌ಸೈಟ್ ಅಮೆರಿಕ ಮೂಲದ ಸರ್ವರ್‌ನಿಂದ ಕೆಲಸ ಮಾಡುತ್ತಿದೆ. ಲಿಂಕ್ ತೆರೆದರೆ ಫಿಶಿಂಗ್ ಸೈಟ್‌ಗೆ ಹೋಗುತ್ತದೆ. ಅಲ್ಲಿ ಕೇಳಿರುವ ಮಾಹಿತಿ ನೀಡಿದರೆ ಗ್ರಾಹಕನಿಗೆ ಬರುವ ಒಟಿಪಿ ಅವರಿಗೆ ಹೋಗಬಹುದು. ಇದು ಸರಕಾರದ ಅಧಿಕೃತ ವೆಬ್‌ಸೈಟ್ ಅಲ್ಲ, ನಕಲಿ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂತಹ ಸಂದೇಶ ಬಂದಿದ್ದರೆ ಪೊಲೀಸರಿಗೆ ತಿಳಿಸಬೇಕು ಎಂದು ವಿಧಿ ವಿಜ್ಞಾನ ತಜ್ಞ ಮತ್ತು ಐಟಿ ವಕೀಲರಾದ ಬಿ.ಎನ್. ಪಣಿಂಧರ್ ಹೇಳಿದ್ದಾರೆ.
Related Articles
ಉ.ಪ್ರದೇಶದಲ್ಲಿ ” ಪ್ರಧಾನಮಂತ್ರಿ ಕೇರ್ಸ್’ ಎಂಬ ವೆಬ್‌ಸೈಟ್ ಸಿದ್ಧಪಡಿಸಿ ಲಕ್ಷಾಂತರ ರೂ. ಲೂಟಿ ಮಾಡಿದ್ದರು. ಬಳಿಕ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
Advertisement
ಮೋಹನ್ ಭದ್ರಾವತಿ