ನವದೆಹಲಿ: ಭಾರತದ ಹಲವು ರಾಜ್ಯಗಳಲ್ಲಿ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ‘ಈ ಸಾಂಕ್ರಮಿಕ ರೋಗ ಇನ್ನೂ ಮುಗಿದಿಲ್ಲ, ದೇಶದ ಜನತೆ ಎಚ್ಚರಿಕೆಯಿಂದ ಮತ್ತು ಆರೋಗ್ಯಯುತವಾಗಿ ಇರಬೇಕು’ ಎಂದು ಮನವಿ ಮಾಡಿದೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಎನ್ ಐ ಟಿ ಐ ಆಯೋಗದ ಸದಸ್ಯ ( ಆರೋಗ್ಯ) ಡಾ. ಕೆ.ವಿ ಪೌಲ್, ಕೋವಿಡ್ ಸದ್ಯದ ಪರಿಸ್ಥಿತಿ ಬಿಗಡಾಯಿಸಿದೆ ಎಂದರು. ನಾಗ್ಪುರದಲ್ಲಿ ಮಾ. 15 ರಿಂದ 21ರವರೆಗೆ ಲಾಕ್ ಡೌನ್ ಹೇರುವ ನಿರ್ಧಾರದ ಕುರಿತು ಮಾತನಾಡಿದ ಅವರು “ಕೋವಿಡ್ ನಿಯಂತ್ರಿಸಲು ಇರುವುದೊಂದೆ ಮಾರ್ಗ. ದೆಹಲಿ ಮತ್ತು ಸುತ್ತಮುತ್ತಲಿನಲ್ಲೂ ವೈರಸ್ ತನ್ನ ಕಬಂಧಬಾಹುವನ್ನು ಚಾಚುತಿದ್ದು ಜನರು ಬಹಳ ಎಚ್ಚರಿಕೆ ವಹಿಸಬೇಕೆಂದರು’.
ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರ ಹಣದ ದಾಹ ಆರ್ಥಿಕ ಸ್ಥಿತಿಯ ಏರುಪೇರಿಗೆ ಕಾರಣವಾಗಲಿದೆ !
ವೈರಸ್ ಅನ್ನು ಲಘುವಾಗಿ ಪರಿಗಣಿಸಬೇಡಿ, ಇದು ಅಚಾನಕ್ಕಾಗಿ ಬರುವಂತಹದ್ದು. ನಾವು ಈ ವೈರಸ್‌ನಿಂದ ಮುಕ್ತವಾಗಿರಬೇಕಾದರೆ, ಕೋವಿಡ್ 19 ಮಾರ್ಗಸೂಚಿ, ಆರೋಗ್ಯ ಮೂಲಸೌಕರ್ಯ ದೃಷ್ಟಿಕೋನದಿಂದ ಸಿದ್ಧತೆ ನಡೆಸಬೇಕೆಂದರು.ಸೋಂಕು ಹೆಚ್ಚಳವಾಗುತ್ತಿರುವ ಪ್ರದೇಶಗಳಲ್ಲಿ ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.
ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಗುಜರಾತ್, ಹರ್ಯಾಣ, ಮಧ್ಯಪ್ರದೇಶ, ಕೇರಳ, ಕರ್ನಾಟಕದಲ್ಲೂ ಕೋವಿಡ್ ಹೆಚ್ಚಳವಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಐಸಿಸಿ ಕಿವುಡರ ವಿಶ್ವಕಪ್ ಕ್ರಿಕೆಟ್ -2022 : ಸಂಭಾವ್ಯರಲ್ಲಿ ಗೋಳಿಹೊಳೆಯ ಪೃಥ್ವಿರಾಜ್