Advertisement

ಸರಗಳ್ಳರ ಬಗ್ಗೆ ಎಚ್ಚರವಾಗಿರಿ: ಮಂಜುನಾಥ್‌

03:21 PM May 05, 2019 | Team Udayavani |

ಕೊರಟಗೆರೆ: ನಾವು ಮಫ್ತಿಯಲ್ಲಿರುವ ಪೊಲೀಸರು ಎಂದು ನಂಬಿಸಿ ಒಡವೆ ತೆಗೆಸಿ ಮೋಸ ಮಾಡುವವರ ಬಗ್ಗೆ ಹಾಗೂ ಹಿಂದಿನಿಂದ ಬೈಕ್‌ಗಳಲ್ಲಿ ಬಂದು ಚಿನ್ನದ ಸರ ಮತ್ತು ಮಾಂಗಲ್ಯ ಸರ ಅಪಹರಣ ಮಾಡುವವರ ಬಗ್ಗೆ ಎಚ್ಚರವಾಗಿರಬೇಕು ಎಂದು ಪಿಎಸ್‌ಐ ಮಂಜುನಾಥ್‌ ತಿಳಿಸಿದರು.

Advertisement

ಸೂಚನೆ ಪಾಲಿಸಿ:ಪಟ್ಟಣದ ಎಸ್‌ಎಸ್‌ಆರ್‌ ವೃತ್ತ, ಊರ್ಡಿಗೆರೆ ಸರ್ಕಲ್, ಕೆಎಸ್‌ಆರ್‌ಟಿಸಿ ವೃತ್ತ ತಾಲೂಕಿನ ಹೊಳವನಹಳ್ಳಿ, ಅಕ್ಕಿರಾಂಪುರ, ತೋವಿ ನಕೆರೆ, ಸಿದ್ದರಬೆಟ್ಟ, ಬೈರೇನಹಳ್ಳಿ, ಬಿಡಿ.ಪುರ, ಕ್ಯಾಮೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ದರು.ಮಹಿಳೆಯರು ತಮ್ಮ ಆಭರಣ ಕಣ್ಣಿಗೆ ಕುಕ್ಕುವಂತೆ ಪ್ರದರ್ಶಿಸಬಾರದು. ಅಪರಿಚಿತ ವ್ಯಕ್ತಿ ಗಳು ವಿಳಾಸ ಕೇಳಿದಾಗ ದೂರದಲ್ಲಿ ನಿಂತು ಮಾತ ನಾಡಬೇಕು. ಇಲ್ಲವೇ ಗೊತ್ತಿಲ್ಲ ಎಂದು ಕಳುಹಿಸ ಬೇಕು. ಅನುಮಾಸ್ಪದ ವ್ಯಕ್ತಿಗಳು ಮನೆ ಬಳಿ ಸುಳಿದಾಡುತ್ತಿದ್ದರೆ, ಅಪರಿಚಿತ ವಾಹನ ಓಡಾಡುತ್ತಿದ್ದರೆ ತಕ್ಷಣ ಬೀಟ್ ಪೊಲೀಸರಿಗಾಗಲಿ ತಾಲೂಕು ಮಟ್ಟದ ಪೊಲೀಸ್‌ ಅಧಿಕಾರಿಗಳಿಗಾಗಲಿ ತಿಳಿಸಬೇಕೆಂದರು.

ಮಹಿಳೆಯರು ಬೈಕ್‌ನಲ್ಲಿ ಅನುಮಾನದಿಂದ ಓಡಾಡುವ ವ್ಯಕ್ತಿಗಳ ಬಗ್ಗೆ ಎಚ್ಚರವಹಿಸಬೇಕು, ವಿಳಾಸ ಕೇಳುವ ನೆಪದಲ್ಲಿ ಕೊರಳಲ್ಲಿರುವ ಚಿನ್ನದ ಮಾಂಗಲ್ಯ ಕಸಿದು ಹೋಗುವವರ ಬಗ್ಗೆ ಎಚ್ಚರದಿಂದರಬೇಕು. ಮಹಿಳೆಯರು ಸರಗಳ್ಳತನ ನಡೆ ಯುತ್ತಿದೆ ಎನ್ನುವುದು ಅರಿವಿಗೆ ಬಂದ ತಕ್ಷಣ ಭಯ ಬಿಟ್ಟು ಪ್ರತಿರೋಧ ವ್ಯಕ್ತಪಡಿಸಿ ಒಡವೆ ರಕ್ಷಿಸಿಕೊಳ್ಳಲು ಪ್ರಯತ್ನಿಸಿ. ಮನೆಯನ್ನು ಖಾಲಿ ಬಿಡದೆ ಮನೆಯಲ್ಲಿ ವಾಸ ಮಾಡಲು ಬಂಧುಗಳಿಗೆ ತಿಳಿಸಿ ಎಂದು ಸಲಹೆ ನೀಡಿದರು. ಈ ವೇಳೆ ಎಎಸ್‌ಐ ಮಂಗಳಗೌರಮ್ಮ, ಶಿವರಾಜು, ಪುಟ್ಟಣ್ಣ, ಪೇದೆಗಳಾದ ರಂಗನಾಥ್‌, ಶಂಕರಪ್ಪ, ರಮೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next