Advertisement

ದೇಶ ಒಡೆಯುವ ದೃಷ್ಕೃತ್ಯಗಳ ಬಗ್ಗೆ ಇರಲಿ ಎಚ್ಚರ 

11:30 AM Aug 16, 2017 | Team Udayavani |

ಬೆಂಗಳೂರು: ಸ್ವಾತಂತ್ರ್ಯಕ್ಕಾಗಿ ಜೀವತ್ಯಾಗ ಮಾಡಿದ ಮಹನೀಯರನ್ನು ಸದಾ ಸ್ಮರಿಸಿಕೊಂಡು ದೇಶ ಒಡೆಯುವ ದುಷ್ಕೃತ್ಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ನಾರಾಯಣರಾವ್‌ ತಿಳಿಸಿದ್ದಾರೆ.

Advertisement

ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಸ್ವಾತಂತ್ರೊತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಕೆಲವೆಡೆ ದೇಶ ಒಡೆಯುವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಘಟನೆಗಳು ನಡೆಯುತ್ತಿವೆ. ಇದರ ಬಗ್ಗೆ ಜಾಗರೂಕತೆ ವಹಿಸಬೇಕು.

ಸಂದರ್ಭ ಬಂದರೆ ಹೋರಾಟದ ಮೂಲಕ ಧ್ವನಿ ಎತ್ತಬೇಕು,’ ಎಂದು ಹೇಳಿದರು. “ಸಾಕಷ್ಟು ಮಹನೀಯರ ತ್ಯಾಗ-ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಬಂದಿದ್ದು, ಸಮಾನತೆ, ಸಹಬಾಳ್ವೆ, ಜಾತ್ಯತೀತತೆ ತತ್ವದಡಿ ಎಲ್ಲರನ್ನೂ ಒಗ್ಗೂಡಿಸುವ ಹಾಗೂ ಪರಸ್ಪರ ಬೆಸೆಯುವ ಕೆಲಸ ನಿರಂತರವಾಗಿ ಆಗಬೇಕು,’ ಎಂದರು.

ಜೆಡಿಎಸ್‌ ಸದಾ ಸಮಾನತೆ ಬಯಸುವ ಪಕ್ಷ. ಮಹಾತ್ಮಗಾಂಧೀಜಿ, ಜಯಪ್ರಕಾಶ್‌ ನಾರಾಯಣ್‌, ಬಿ.ಆರ್‌.ಅಂಬೇಡ್ಕರ್‌ ಅವರ ಆಶಯಗಳ ಪ್ರಕಾರ ನಡೆಯುತ್ತಿರುವ ಪಕ್ಷ. ಎಲ್ಲರಿಗೂ ಸಮಬಾಳು, ಸಮಪಾಲು ನಮ್ಮ ಮಂತ್ರ ಎಂದು ಹೇಳಿದರು. ಮಾಜಿ ಸಚಿವ ಬಂಡೆಪ್ಪ ಕಾಶಂಪುರ್‌, ವಿಧಾನಪರಿಷತ್‌ ಸದಸ್ಯರಾದ ರಮೇಶ್‌ಬಾಬು, ಟಿ.ಎ.ಶರವಣ, ಪಕ್ಷದ ಮುಖಂಡರಾದ  ಜಫ್ರುಲ್ಲಾಖಾನ್‌, ಎ.ಪಿ.ರಂಗನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next