Advertisement

ಹ್ಯಾಕ್‌ ಅಟ್ಯಾಕ್‌: ಸೈಬರ್‌ ಸುಲಿಗೆ ಬಗ್ಗೆ ಇರಲಿ ಎಚ್ಚರ!

08:20 AM Jul 30, 2017 | Karthik A |

ಹೊಸದಿಲ್ಲಿ: ಗೆಳೆಯರ ಜತೆ ಬರ್ತ್‌ಡೇ ಆಚರಿಸಿದ್ದು, ಸಂಬಂಧಿಕರ ಜತೆ ಪಿಕ್‌ನಿಕ್‌ ಹೋಗಿದ್ದು, ಸಹಪಾಠಿಗಳ ಜತೆ ಬೀಚ್‌ನಲ್ಲಿ ಆಡಿದ್ದು… ಹೀಗೆ ಎಲ್ಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವವರೇ ಎಚ್ಚರ! ನೀವು ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡುವ ಫೋಟೋಗಳನ್ನು ಕದ್ದು, ಎಡಿಟ್‌ ಮಾಡಿ, ನಿಮ್ಮ ಫೋಟೋವನ್ನು ಬೆತ್ತಲಾಗಿಸಿ ಅಶ್ಲೀಲ ವೆಬ್‌ಸೈಟ್‌ಗೆ ಹಾಕುವ ಕ್ರಿಮಿನಲ್‌ಗ‌ಳ ಗುಂಪೊಂದು ದೇಶದಲ್ಲಿ ಕಾರ್ಯಾಚರಿಸುತ್ತಿದೆ. ದಿಲ್ಲಿ, ನೋಯ್ಡಾ ಸೇರಿದಂತೆ ಅನೇಕ ಕಡೆ ಇಂಥ ಕ್ರಿಮಿನಲ್‌ಗ‌ಳ ಸಂಚಿಗೆ ಹಲವು ಯುವತಿಯರು ಬಲಿಯಾಗಿದ್ದಾರೆ.

Advertisement

ಯುವತಿಯರ ಫೋಟೋಗಳನ್ನು ಫೋಟೋಶಾಪ್‌ನಲ್ಲಿ ಬೆತ್ತಲಾಗಿಸಿ, ಅನಂತರ ಅವರನ್ನು ಬೆದರಿಸಿ, ಹಣ ಕೀಳುವ ಗುಂಪಿದು. ಮರ್ಯಾದೆಗೆ ಹೆದರಿ ಹಲವು ಯುವತಿಯರು ಈ ಕ್ರಿಮಿನಲ್‌ಗ‌ಳಿಗೆ ಹಣ ಕೊಟ್ಟು ವಂಚನೆಗೊಳಗಾಗಿದ್ದಾರೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ. ಇತ್ತೀಚೆಗೆ ದಿಲ್ಲಿಯ ಯುವತಿಯೊಬ್ಬಳ ಫೇಸ್‌ಬುಕ್‌ನಲ್ಲಿದ್ದ ಪ್ರೊಫೈಲ್‌ ಫೋಟೋ ಕದ್ದು, ಅದನ್ನು ತಿರುಚಿ, ಪೋರ್ನ್ ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು. ಅನಂತರ ಆಕೆಯನ್ನು ಸಂಪರ್ಕಿಸಿ, ಈ ಸೈಬರ್‌ ಸುಲಿಗೆಕೋರರು 20 ಸಾವಿರ ರೂ.ಗಳನ್ನು ಪಡೆದಿದ್ದರು. ಹಣ ನೀಡಿದರಷ್ಟೇ ಅಶ್ಲೀಲ ಫೋಟೋವನ್ನು ಡಿಲೀಟ್‌ ಮಾಡುತ್ತೇವೆ ಎಂದು ಹೇಳಿ, ಹಣವನ್ನು ಕಿತ್ತುಕೊಂಡಿದ್ದರು. ಇದೇ ರೀತಿ, ನೋಯ್ಡಾದ ಮಹಿಳೆಯಿಂದ 15 ಸಾವಿರ ಕಿತ್ತುಕೊಂಡಿದ್ದಾರೆ. ಯುವತಿಯರನ್ನು ಹೆದರಿಸಿ ಸುಲಭವಾಗಿ ಹಣ ಗಳಿಸುವುದು ಈ ದುಷ್ಕರ್ಮಿಗಳ ಉದ್ದೇಶ. ಹಣ ಪಡೆದ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳನ್ನು ಡೀಆಕ್ಟಿವೇಟ್‌ ಮಾಡುವ ಮೂಲಕ ಈ ಸಂಘಟಿತ ಕ್ರಿಮಿನಲ್‌ಗ‌ಳು ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ದಿಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next