Advertisement

ಕೋವಿಡ್-19 ಬಗೆ ಎಲ್ಗರೂ ಎಚ್ಲರಿಕೆ ವಹಿಸಿ : ಸುಬ್ಟಾರೆಡಿ

01:58 PM Apr 12, 2020 | Team Udayavani |

ಬಾಗೇಪಲ್ಲಿ: ಕ್ಷೇತ್ರದಲ್ಲಿ ಕೋವಿಡ್-19 ಪ್ರಕರಣ ದಾಖಲಾಗಿಲ್ಲ. ಎಲ್ಲರೂ ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಮನೆಯಲ್ಲಿಯೇ ಇರಬೇಕು. ನಿರ್ಲಕ್ಷಿಸಿದರೆ ಸಾವು ಕಟ್ಟಿಟ್ಟಬುತ್ತಿ ಎಂದು ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಎಚ್ಚರಿಸಿದರು.

Advertisement

ತಾಲೂಕಿನ ಪಾತಪಾಳ್ಯ, ತೋಳ್ಳಪಲ್ಲಿ, ಸೋಮನಾಥಪುರ  ಮತ್ತು ನಾರೇಮದ್ದೇಪಲ್ಲಿ ಗ್ರಾಪಂಗಳಲ್ಲಿ ನಡೆದ ಕೊರೊನಾ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತರಕಾರಿ, ಹಣ್ಣು ಬೆಳೆದ ರೈತರು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಸಿ, ತಮ್ಮ ಬೆಳೆಗಳ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬೇಕು. ಎಲ್ಲಾ ಗ್ರಾಪಂಗಳಲ್ಲೂ ಚರಂಡಿಗಳಲ್ಲಿ ತ್ಯಾಜ್ಯ ತೆಗೆದು ಸ್ವಚ್ಛತೆ ಕಾಪಾಡಬೇಕು. ನೀರಿನ ಸಮಸ್ಯೆ ಬರದಂತೆ ಅಧಿಕಾರಿಗಳು ಎಚ್ಚರ ವಹಿಸಿ ಎಂದರು.

ತಾಪಂ ಅಧ್ಯಕ್ಷ ಕೆ.ಆರ್‌.ನರೇಂದ್ರ ಬಾಬು, ಜಿಪಂ ಸದಸ್ಯ ಬೂರಗಮಡಗು ನರಸಿಂಹಪ್ಪ, ಕೆಡಿಪಿ ಸದಸ್ಯ ಅಮರನಾಥ ರೆಡ್ಡಿ, ತಾಪಂ ಇಒ ಎಚ್‌.ಎನ್‌.ಮಂಜುನಾಥ ಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ನರೇಂದ್ರ, ಎಸ್‌ಐ ನಯಾಜ್‌ ಬೇಗ್‌, ಲೋಕೋಪಯೋಗಿ ಇಲಾಖೆಯ ರಾಮಲಿಂಗಾ ರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಈಶ್ವರಪ್ಪ, ನಾರಾಯಣ, ರಸೂಲ್‌ ಖಾನ್‌, ನಂಜುಂಡಪ್ಪ, ವೆಂಕಟಾಚಲಪತಿ, ವೆಂಕಟರವಣಪ್ಪ ಕಲ್ಲಿಪಲ್ಲಿ, ಗಂಗಾಧರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next