Advertisement
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಶ್ವರ ಭಾರತೀ ಸ್ವಾಮಿಜಿ ವಿರುದ್ಧ ದಿವಾಕರ ಶಾಸಿŒಮಾಡಿದ್ದ ಬ್ಲಾಕ್‌ವೆುàಲ್ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಬಿ ರಿಪೋರ್ಟ್ ಹಾಕುವ ಕುರಿತು ಕೆಲವು ಪತ್ರಿಕೆಗಳು ವರದಿ ಮಾಡಿವೆ. ವರದಿಯಲ್ಲಿ ಅಧಿಕಾರಿಗಳ ಅಭಿಪ್ರಾಯ ಉಲ್ಲೇಖೀಸಲಾಗಿದೆ. ಸಿಐಡಿ ಅಧಿಕಾರಿಗಳ ಈ ನಡೆ ಹಲವು ಅನುಮಾನ ಗಳಿಗೆ ಎಡೆಮಾಡಿಕೊಟ್ಟಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಅಲ್ಲದೆ, ಜನಾಂದೋಲನ ಕೂಡ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣ ಅಂತ್ಯಗೊಳಿಸುವ ತೀರ್ಮಾನಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಸ್ವಾಮೀಜಿಗೆ ಮತ್ತು ಮಠಕ್ಕೆ ನ್ಯಾಯ ಒದಗಿಸುವಲ್ಲಿ ಸರ್ಕಾರ ಪದೇಪದೆ ವಿಫಲವಾಗುತ್ತಿದೆ. ಸ್ವಾಮೀಜಿ ವಿರುದ್ಧ ಯಾವ ಸಮಯದಲ್ಲಿ ಪ್ರಕರಣ ದಾಖಲಿಸಬಹುದು ಎಂಬುದರ ಬಗ್ಗೆ ದಿವಾಕರ ಶಾಸಿŒ ಜ್ಯೋತಿಷ್ಯರನ್ನು ಇ-ಮೇಲ್ ಮೂಲಕ ಕೇಳಿರುವ ಬಗ್ಗೆ ಹೊನ್ನಾವರ ಪೊಲೀಸರು ಮಾಹಿತಿ ದಾಖಲಿಸಿದ್ದು, ಬಳಿಕ ನ್ಯಾಯಾಲಯಕ್ಕೆ ಮಹಜರು ವರದಿ ಸಲ್ಲಿಸಲಾಗಿದೆ. ಆದರೂ ಸಿಐಡಿ ಅಧಿಕಾರಿಗಳು ಸಾಕ್ಷ್ಯಾಧಾರ ಕೊರತೆ ಎಂಬುದಾಗಿ ಹೇಳುತ್ತಿರುವುದು ಹಲವು
ಶಂಕೆಗೆ ಕಾರಣವಾಗಿದೆ ಎಂದರು.
Related Articles
Advertisement