Advertisement

“ಹಣದೊಂದಿಗೆ ಬರುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗೃತರಾಗಿ’

01:00 AM Mar 22, 2019 | Team Udayavani |

ಮಲ್ಪೆ: ನಗರಗಳಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ಸುರಕ್ಷೆಯ ದೃಷ್ಟಿಯಿಂದ ನಗರದ ವಿವಿಧ ಬ್ಯಾಂಕ್‌, ಸಹಕಾರ ಸಂಸ್ಥೆಯ ಶಾಖಾ ಪ್ರಬಂಧಕರ ಮತ್ತು ನಾಗರಿಕರ ಜಾಗೃತಿ ಸಭೆ  ಮಲ್ಪೆ ಪೊಲೀಸ್‌ ಠಾಣಾ ವತಿಯಿಂದ ಬುಧವಾರ ಮಲ್ಪೆ ಠಾಣೆಯಲ್ಲಿ ನಡೆಯಿತು. 

Advertisement

ಸಹಾಯಕ ಉಪ ನಿರೀಕ್ಷಕ ಸುಧಾಕರ ಬಿ.  ಮಾಹಿತಿ ನೀಡಿ ಬ್ಯಾಂಕಿನಿಂದ ಹಣ  ಡ್ರಾ ಮಾಡಿ ಬರುವ ವೇಳೆ ಅಪರಿಚಿತ  ವ್ಯಕ್ತಿಗಳು ನಿಮ್ಮನ್ನು ಹಿಂಬಾಲಿಸಿ ಬರುತ್ತಿದ್ದಾರೆಯೇ ಎಂದು ಎಚ್ಚರ ವಹಿಸಬೇಕು.  ನಮ್ಮ ಗಮನ  ಬೇರೆಡೆಗೆ ಸೆಳೆದು ಹಣ  ಲಪಟಾಯಿಸುವ ಸಾಧ್ಯತೆ ಇರುತ್ತದೆ.  ಬ್ಯಾಂಕ್‌ನಿಂದ ಹೊರ ಬರುವ ವೇಳೆ ಅಕ್ಕಪಕ್ಕ ಯಾವುದಾದರೂ ನಂಬರ್‌ ಪ್ಲೇಟ್‌ ಇಲ್ಲದ ಅಥವಾ ನಂಬರ್‌ ಪ್ಲೇಟ್‌ಗೆ ಪೇಪರ್‌ ಮುಚ್ಚಿದ ವಾಹನಗಳು ಇದೆಯೇ ಎಂದು  ನೋಡಿಕೊಳ್ಳಬೇಕು. ಇಂತಹ ಸಂದರ್ಭ ಮೊದಲೇ  ಜಾಗೃತರಾಗಿ  ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದರು. 

ಎಎಸ್‌ಐ ರತ್ಕಾಕರ ಕೆ. ಪ್ರಾಸ್ತಾವಿಕವಾಗಿ  ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕ ಹಣ , ಆಭರಣಗಳಿಗೆ ಹೊಂಚು ಹಾಕುವ ಗ್ಯಾಂಗ್‌  ಉಡುಪಿ ಮತ್ತು ಮಲ್ಪೆ  ನಗರಗಳಲ್ಲಿ  ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಾಚರಿಸುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕೆಂಬ ನಿಟ್ಟಿನಲಿ É ಸಭೆ ಜರಗಿಸಲಾಗಿದೆ ಎಂದರು. 

ಎಎಸ್‌ಐ ಜನಾರ್ದನ್‌, ಪ್ರೊಬೆಷನರಿ ಉಪನಿರೀಕ್ಷಕಿ ಸುಮಾ  ಬಿ. ಆಚಾರ್ಯ, ಠಾಣಾ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next