Advertisement

ಹೃದಯಘಾತದ ಅರಿವಿರಲಿ

12:30 PM Nov 21, 2020 | pallavi |

ಬದಲಾದ ಜೀವನ ಶೈಲಿ, ಕೆಲಸದ ಒತ್ತಡ, ವ್ಯಾಯಮದ ಕೊರತೆಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲೇ ಬಹುತೇಕ ಮಂದಿಯನ್ನು ಕಾಡುತ್ತಿರುತ್ತದೆ. ಪ್ರಸ್ತುತ ಆರೋಗ್ಯ ಸಮಸ್ಯೆಗೆ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರಬೇಕು ಎಂದೆನಿಲ್ಲ. ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೆ ಒತ್ತಡಯುತ ಜೀವನವಿದ್ದರೆ ಸಾಕು. ಇಲ್ಲದ ರೋಗಗಳು ಮನೆ ಸೇರುತ್ತದೆ. ಹೃದಯ ಕಾಯಿಲೆ ಎಂಬುದು 50ರ ಅನಂತರ ಎಂಬ ಕಾಲವೊಂದಿತ್ತು. ಆದರೆ ಈಗ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳಲಾರಂಭಿಸಿದೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

Advertisement

ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಕೆಟ್ಟ ಜೀವನಶೈಲಿ ನೇರವಾಗಿ ಹೃದಯಕ್ಕೆ ಘಾಸಿ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಹೃದಯಾಘಾತಕ್ಕೆ ವಯಸ್ಸು, ಲಿಂಗ ಯಾವುದರ ಗಡಿ ಇಲ್ಲ. ಹೃದಯ ಖಾಯಿಲೆ 50ರ ಅನಂತರ ಎಂದು ನಿರ್ಲಕ್ಷಿಸುವ ಕಾಲವೂ ಇದಲ್ಲ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಲು ಬದಲಾದ ಜೀವನಶೈಲಿಯೇ ಪ್ರಮುಖ ಕಾರಣ.

ವ್ಯಾಯಾಮ ಇಲ್ಲದಿರುವುದು, ಜಂಕ್‌ ಫುಡ್‌ ಸೇವನೆ, ತಂಬಾಕು, ಕೌಟುಂಬಿಕ ಹಿನ್ನೆಲೆ, ಮಧುಮೇಹ, ಏರಿದ ಹೃದಯಬಡಿತ, ಹೈ ಕ್ಯಾಲೋರಿ ಡಯಟ್, ಮಧುಮೇಹ, ಬೊಜ್ಜು ಮತ್ತು ಖನ್ನತೆ, ಅತಿಯಾದ ರಕ್ತದೊತ್ತಡ, ಹೆಚ್ಚು ಕೊಲೆಸ್ಟ್ರಾಲ್, ಗರ್ಭ ನಿರೋಧಕ ಗುಳಿಗೆ ಸೇವನೆ, ಮೆನೋಪಾಸ್‌ ಅನಂತರ ಹಾರ್ಮೋನ್‌ ರಿಪ್ಲೇಸ್‌ಮೆಂಟ್ ಥೆರಪಿ ಮತ್ತು ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ ಕಾರಣವಾಗಿರಬಹುದು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆ.

ಏನು ಮಾಡಬಹುದು?
ಧೂಮುಪಾನ, ಅಲ್ಕೋಹಾಲ್ ಸೇವನೆ ತ್ಯಜಿಸಬೇಕು, ಆರೋಗ್ಯಕರವಾದ ಸಮತೋಲನ ಆಹಾರ ಸೇವಿಸಬೇಕು, ವ್ಯಾಯಾಮ ಅಗತ್ಯ, ನಿದ್ರೆ ಉತ್ತಮವಾಗಿರಬೇಕು, ಡಯಬಿಟಿಸ್‌, ಕೊಲೆಸ್ಟ್ರಾಲ್ ಮಟ್ಟ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಬೇಕು. ದೇಹದ ತೂಕವನ್ನು ಸಮತೋಲನದಲ್ಲಿರಿಸಬೇಕು, ಮಾನಸಿಕ ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದು ಪಾಲಿಸಬೇಕು.
ಹೃದಯಾಘಾತದ ಲಕ್ಷಣ
ಹೃದಯಾಘಾತ ಸಂಭವಿಸಿದಾಗ ಹೃದಯಕ್ಕೆ ರಕ್ತ ಸಂಚಲನೆ ಹಠಾತ್‌ ಆಗಿ ಬ್ಲಾಕ್‌ ಆಗುತ್ತದೆ. ಪ್ರತಿಫಲವಾಗಿ ಅದು ಕಾರ್ಡಿಯಾಕ್‌ ಅರೆಸ್ಟ್‌ಗೆ ಕಾರಣವಾಗುತ್ತದೆ. ಬಳಿಕ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ. ಹೃದಯಾಘಾತ ಸಂಭವಿಸುವಾಗ ಕೆಲವು ಸೂಚನೆಗಳು ಸಿಗುತ್ತದೆ. ಹಠಾತ್‌ ಎದೆ ನೋವು, ಭುಜ ಹಾಗೂ ಕತ್ತಿನ ಎಡಭಾಗದಲ್ಲಿ ನೋವು ಕಾಣಿಸುತ್ತದೆ. ಉಸಿರಾಟ ಕಷ್ಟವಾಗುವುದು, ವಾಕರಿಕೆ, ವಾಂತಿ, ಬೆವರುವುದು, ಆತಂಕ ಎದುರಾಗುತ್ತದೆ. ಈ ಲಕ್ಷಣಗಳು ಕಂಡು ಬಂದಲ್ಲಿ ಹೃದಯಾಘಾತ ಸಂಭವಿಸುತ್ತದೆ ಎಂಬುದೇ ಅರ್ಥ.

ಪ್ರಾಥಮಿಕ ಚಿಕಿತ್ಸೆ

ಹಾರ್ಟ್‌ ಅಟ್ಯಾಕ್‌ ಆದಾಗ ಪದೇಪದೇ ಜೋರಾಗಿ ಕೆಮ್ಮಬೇಕು. ಅನಂತರ ತತ್‌ಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಅಥವಾ ಅಂಗಾತ ಮಲಗಬೇಕು. ಹಾಗೆ ದೀರ್ಘ‌ವಾಗಿ ಉಸಿರನ್ನು ಎಳೆದುಕೊಳ್ಳಬೇಕು. ಕೆಮ್ಮುವುದನ್ನು ನಿಲ್ಲಿಸದೇ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮತ್ತಿರಬೇಕು. ಸಹಾಯಕ್ಕಾಗಿ ಯಾರಾದರೂ ಬರುವ ತನಕ, ಸಾಮಾನ್ಯ ಸ್ಥಿತಿಗೆ ಬರುವ ತನಕ ಇದನ್ನು ಮುಂದುವರಿಸುತ್ತಿರಬೇಕು. ಇದರಿಂದ ನಾವು ಹೃದಯಾಘಾತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚಿರುತ್ತದೆ. ದೀರ್ಘ‌ವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಕ್ಸಿಜನ್‌ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನೇ ಆಸ್ಪತ್ರೆಯ ಐಸಿಯುನಲ್ಲಿ ಮಾಡುವುದು. ಬಳಿಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

ಆರೋಗ್ಯವಾಗಿರಲು ಹೀಗೆ ಮಾಡಿ
ನಿತ್ಯ ವ್ಯಾಯಾಮ, ಯೋಗ ಇನ್ನಿತರ ಚಟುವಟಿಕೆಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ·ಆಹಾರ ಸೇವನೆಯಲ್ಲಿ ಇತಿಮಿತಿಗಳಿರಲಿ ·ಮಾಂಸ, ಕೊಬ್ಬಿನಂಶವಿರುವ ಆಹಾರ ತ್ಯಜಿಸಿ. ಆರೋಗ್ಯಕರ ಆಹಾರ ಸೇವಿಸಿ ·ಒತ್ತಡ ನಿರ್ವಹಣೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಒತ್ತಡ ಕಡಿಮೆ ಮಾಡಿ ಆರೋಗ್ಯ ರಕ್ಷಣೆ ಹೊಣೆ
ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯದಂತಹ ಸಮಸ್ಯೆ ಇರುವವರಿಗೆ ಹೃದ್ರೋಗಗಳು ಅಧಿಕವಾಗಿ ಇರುತ್ತವೆ. ನಿತ್ಯ ವ್ಯಾಯಾಮ ಮಾಡುವುದು, ಆರೋಗ್ಯಕರವಾದ ಬಾಡಿ ಮಾಸ್‌ ಇಂಡೆಕ್ಸ್‌ ನಿರ್ವಹಣೆ ಮಾಡುವುದರಿಂದ ಹೃದಯಾಘಾತದ ಅಪಾಯ ತಪ್ಪುತ್ತದೆ.
Advertisement

– ಡಾ| ವಿನಯ್‌, ವೈದ್ಯರು

••••ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next