Advertisement

ಸರಕಾರಿ ಸೌಲಭ್ಯಗಳ ಅರಿವು ಇರಲಿ: ಸಚಿವ ಪ್ರಮೋದ್‌

02:06 PM Mar 10, 2017 | Team Udayavani |

ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ, ಚುನಾಯಿತ ಸರಕಾರಗಳ ಅನೇಕ ಯೋಜನೆಗಳ ಅರಿವು ಜನಸಾಮಾನ್ಯರಿಗೆ ಇಲ್ಲದೆ ಇರುವುದು ವಿಷಾದನೀಯ. ಅಂತಹ ಯೋಜನೆಗಳ ಅರಿವು ಪಡೆದು ಸರಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ, ಆ ಮೂಲಕ ಜಾಗೃತ ಸಮಾಜ ನಿರ್ಮಾಣವಾಗಬೇಕೆಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಅಜ್ಜರಕಾಡಿನ ಡಾ| ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮದಲ್ಲಿ  ಮಾತನಾಡಿದರು. ಉಡುಪಿ ಉಜ್ವಲ್‌ ಡೆವಲಪರ್, ಹಿರಿಯಡಕ ಲಯನ್ಸ್‌ ಕ್ಲಬ್‌, ಜಿಲ್ಲಾ ಆರೋಗ್ಯ ಇಲಾಖೆ ಉಡುಪಿ ಇವರ ಸಹಯೋಗದಿಂದ ವಿದ್ಯಾರ್ಥಿಗಳಿಗೆ ಏಡ್ಸ್‌ ಜಾಗೃತಿ ಕುರಿತು ಮಾಹಿತಿ ನೀಡಲಾಯಿತು. 

ಪ್ರಾಂಶುಪಾಲರಾದ  ಪ್ರೊ| ಬಿ. ಜಗದೀಶ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ಮಹಾಬಲೇಶ್ವರ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. ಡಾ| ರೋಶನ್‌ ಕುಮಾರ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next