Advertisement

ಶ್ರವಣಬೆಳಗೊಳದಲ್ಲಿ ಕೊರೊನಾ ಮುನ್ನೆಚ್ಚರಿಕೆ ವಹಿಸಿ

03:08 PM Feb 09, 2020 | Suhan S |

ಚನ್ನರಾಯಪಟ್ಟಣ: ದೇಶದ ಐತಿಹಾಸಿಕ ಪ್ರವಾಸಿ ಕೇಂದ್ರದಲ್ಲಿ ಒಂದಾಗಿರುವ ಜೈನಕಾಶಿ ಎಂಬ ಪ್ರಖ್ಯಾತಿ ಪಡೆದಿರುವ ಶ್ರವಣಬೆಳ ಗೊಳದ ಜನರಲ್ಲಿ ಕೊರೊನಾ ವೈರಸ್‌ ಭೀತಿ ಪ್ರಾರಂಭವಾಗಿದೆ.

Advertisement

ಮುಂಜಾಗ್ರತೆ ಇಲ್ಲ: ವಿಶ್ವದೆಲ್ಲೆಡೆ ನೋವೆಲ್‌ ಕೊರೊನಾ ವೈರಸ್‌ ಜನತ್ತನ್ನೇ ಬೆಚ್ಚಿಬೀಳಿಸುತ್ತಿರುವ ಸಮಯದಲ್ಲಿ ಪ್ರವಾಸಿಗರ ಮೂಲಕ ಇಲ್ಲಿಗೂ ಹರಡಬಹುದೆಂಬ ಆತಂಕ ಶ್ರವಣಬೆಳಗೊಳದ ಜನರಿಗೆ ಕಾಡುತ್ತಿದ್ದರೂ ತಾಲೂಕು ಆಡಳಿತ ಯಾವುದೇ ಮುಂಜಾಗ್ರತೆ ಮಾಡಿಕೊಂಡಿಲ್ಲ. ಚೀನಾದಲ್ಲಿ ಹುಟ್ಟಿದ ಈ ವೈರಸ್‌ ಈಗಾಗಲೇ ಪಕ್ಕದ ರಾಜ್ಯವಾಗಿರುವ ಕೇರಳಕ್ಕೆ ಕಾಲಿಟ್ಟಿದ್ದು, ಮುಂದೊದು ದಿವಸ ಇಲ್ಲಿಗೂ ಪ್ರವಾಸಿಗರ ಮೂಲಕ ಹರಡದಂತೆ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಬೇಕಿದೆ.

ಆರೋಗ್ಯ ಇಲಾಖೆ ಇತ್ತಮ ಗಮನ ಹರಿಸಲಿ: ಚೀನಾದ ಮಹಾ ಮಾರಿಯಾಗಿರುವ ನೋವೆಲ್‌ ಕೊರೊನಾ ಕೇರಳ ರಾಜ್ಯಕ್ಕೆ ಕಾಲಿಟ್ಟಿದ್ದು, ಈಗಾಗಲೇà ಕೊರೊನಾ ಪಾಸಿಟಿವ್‌ ಕಂಡು ಬಂದಿರುವುದರಿಂದ ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಶ್ರವಣಬೆಳಗೊಳ ಗುರುತಿಸಿಕೊಂಡಿರುವುದರಿಂದ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಬೇಕಾಗಿದೆ.

ಪ್ಯಾಕೇಜ್‌ ಮೂಲಕ ತಾಲೂಕು ಪ್ರವೇಶ: ಹಾಸನ ಜಿಲ್ಲೆಗೆ ಕೇರಳ ರಾಜ್ಯದಿಂದ ಪ್ಯಾಕೇಜ್‌ ರೂಪದಲ್ಲಿ ಪ್ರವಾಸಿಗರ ದಂಡೇ ಬರುತ್ತಿದೆ. ಈ ರೀತಿ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರನವೀಕ್ಷಣೆಗೆ ಬರುತ್ತಾರೆ. ಕೇರಳದಿಂದ ಬಸ್‌ಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಬರುತ್ತಾರೆ. ಇದನ್ನು ಕಣ್ಣಾರೆ ಕಾಣುವ ಸ್ಥಳೀಯರಿಗೆ ಭೀತಿ ಪ್ರಾರಂಭವಾಗಿದೆ.

ಪ್ರವಾಸಿಗರ ಬಗ್ಗೆ ಎಚ್ಚರ ಅಗತ್ಯವಿದೆ: ಕೇರಳದಲ್ಲಿ ಈಗಾಗಲೇ ನೋವೆಲ್‌ ಕೊರೊನಾ ವೈರಸ್‌ ಹರಡಿರುವುದು ದೃಢಪಟ್ಟಿದೆ. ಇಂತಹ ಸಂದರ್ಭದಲ್ಲಿ ಕೇರಳದಿಂದ ಬರುವ ಪ್ರವಾಸಿಗರಿಗೆ ತಾಲೂಕು ಆಡಳಿತ ಕಡಿವಾಣ ಹಾಕಿಲ್ಲ. ಕೇರಳದಿಂದ ಬಂದುಹೋಗುವ ಪ್ರವಾಸಿಗರ ಬಗ್ಗೆ ಪ್ರವಾಸೋದ್ಯಮ ಇಲಾಖೆಯಲ್ಲೂ ನಿರ್ದಿಷ್ಟ ಅಂಕಿ, ಅಂಶಗಳು ಇಲ್ಲ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಮೈಸೂರು ದರ್ಶನ ಪಡೆದ ಅನೇಕ ಮಂದಿ ತಮ್ಮ ಸ್ವಂತ ವಾಹನದಲ್ಲಿ ಮೇಲುಕೋಟೆ ಹಾಗೂ ಶ್ರವಣಬೆಳಗೊಳ ವೀಕ್ಷಣೆ ಮಾಡದೇ ಕೇರಳಕ್ಕೆ ಹಿಂತಿರುಗುವುದಿಲ್ಲ ಹಾಗಾಗಿ ಈ ಬಗ್ಗೆ ತಾಲೂಕು ಆಡಳಿತ ಎಚ್ಚರ ವಹಿಸುವ ಅಗತ್ಯವಿದೆ.

Advertisement

ನಿಗಾ ವಹಿಸಬೇಕಿದೆ: ಶಿಲ್ಪ ಕಲೆಗಳ ತವರೂರಾಗಿರುವ ಹಾಸನ ಜಿಲ್ಲೆಯ ಬೇಲೂರು-ಹಳೇಬೀಡಿಗೆ ಆಗಮಿಸುವ ಪ್ರವಾಸಿಗರು ಶ್ರವಣಬೆಳಗೊಳದಲ್ಲಿನ ಗೊಮ್ಮಟೇಶ್ವರ ಏಕಶಿಲಾ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಾರೆ. ಈ ರೀತಿ ಆಗಮಿಸುವ ವಿದೇಶಿಗರುಯಾವ ದೇಶದವರು ಎಂಬುದು ಸ್ಥಳೀಯರಿಗೆ ತಿಳಿಯುವುದಿಲ್ಲ ಒಂದು ವೇಳೆ ಚೀನಾ ದೇಶದವರೆ ಆಗಿದ್ದರೆ ಏನು ಮಾಡಬೇಕು ಈ ಬಗ್ಗೆ ಸಂಬಂಧ ಪಟ್ಟವರು ನಿಗಾ ವಹಿಸುವ ಅಗತ್ಯವಿದೆ.

ಕೊರೊನಾಗೆ ಸಂಬಂಧಿಸಿದಂತೆ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ. ಕೇರಳ ರಾಜ್ಯದಿಂದ ಹಾಗೂ ವಿದೇಶಗಳಿಂದ ಪ್ರವಾಸಿಗರು ಆಗಮಿಸುವಾಗ ಗಡಿ ಭಾಗದಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ಅವರನ್ನು ತಪಾಸಣೆ ಮಾಡಲಾಗುತ್ತಿದೆ. ನೋವೆಲ್‌ ಕೊರೊನಾ ವೈರಸ್‌ ಬಗ್ಗೆ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ. ಡಾ. ಕಿಶೋರಕುಮಾರ, ತಾಲೂಕು ಆರೋಗ್ಯಾಧಿಕಾರಿ.

 

-ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next